ಹೊಸೂರು ರಸ್ತೆ ನಿರ್ವಹಣೆಯಲ್ಲಿ ನಿರ್ಲಕ್ಷ್ಯ; ಐಟಿ ದಿಗ್ಗಜೆ ಕಿರಣ್ ಮಜುಂದಾರ್ ಶಾ ಆರೋಪ

ಹೊಸೂರು ರಸ್ತೆಯ ವಿನ್ಯಾಸ ಮತ್ತು ನಿರ್ವಹಣೆ ಬಗ್ಗೆ ಕಿರಣ್ ಮಜುಂದಾರ್ ಶಾ ಅಸಮಾಧಾನ
ಹೊಸೂರು ರಸ್ತೆಯ ವಿನ್ಯಾಸ ಮತ್ತು ನಿರ್ವಹಣೆ ಬಗ್ಗೆ ಕಿರಣ್ ಮಜುಂದಾರ್ ಶಾ ಅಸಮಾಧಾನ
Published on

ಪ್ರಮುಖ ಮುಖ್ಯಾಂಶಗಳು

  • ಹೊಸೂರು ರಸ್ತೆ ನಿರ್ವಹಣೆಯಲ್ಲಿ ನಿರ್ಲಕ್ಷ್ಯ
  • ಐಟಿ ದಿಗ್ಗಜೆ ಕಿರಣ್ ಮಜುಂದಾರ್ ಶಾ ಆರೋಪ
  • ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಪ್ರಶ್ನೆ

ಬೆಂಗಳೂರು: ಜಗತ್ತಿನಲ್ಲೇಗಮನ ಸೆಳೆದಿರುವ ಐಟಿ ಸಿಟಿಬೆಂಗಳೂರಿನಲ್ಲಿ ಬಹುತೇಕ ಐಟಿಕಂಪನಿಗಳಿರುವ ಎಲೆಕ್ಟ್ರಾನಿಕ್ಸಿಟಿಗೆ ಹೋಗುವ ಹೊಸೂರು ರಸ್ತೆರಾಷ್ಟ್ರೀಯ ಹೆದ್ದಾರಿ ನಿರ್ವಹಣೆಯಲ್ಲಿಹೆದ್ದಾರಿ ಪ್ರಾಧಿಕಾರ ನಿರ್ಲಕ್ಷ್ಯವಹಿಸಿದೆ ಎಂದು ಬಯೋಕಾನ್ ಸಂಸ್ಥೆಮುಖ್ಯಸ್ಥೆ ಕಿರಣ್ ಮಜುಂದಾರ್ಶಾ ಆರೋಪಿಸಿದ್ದಾರೆ.

ಎಕ್ಸೃ್ಖಾತೆಯಲ್ಲಿ ಈ ಕುರಿತು ಅಭಿಪ್ರಾಯವ್ಯಕ್ತಪಡಿಸಿರುವ ಕಿರಣ್ ಮಜುಂದಾರ್ಶಾ ಕೇಂದ್ರ ಹೆದ್ದಾರಿ ಖಾತೆ ಸಚಿವನಿತಿನ್ ಗಡ್ಕರಿಯವರ ಎಕ್ಸೃ್ಖಾತೆಗೆ ಟ್ಯಾಗ್ ಮಾಡುವ ಮೂಲಕರಸ್ತೆ ಪರಿಸ್ಥಿತಿಯನ್ನುಬಿಚ್ಚಿಟ್ಟಿದ್ದಾರೆ.ಕಿರಣ್ ಮಜುಂದಾರ್ಅವರನ್ನು ಎಕ್ಸೃ್ ಖಾತೆಯಲ್ಲಿಫಾಲೋ ಮಾಡುವ ಜನರು ಈ ಬಗ್ಗೆಪ್ರತಿಕ್ರಿಯೆಗಳನ್ನು ಪೋಸ್ಟ್ಮಾಡುತ್ತಿದ್ದಾರೆ.ಕಿರಣ್ ಮಜುಂದಾರ್ಶಾ ಐಟಿ ದಿಗ್ಗಜ ಟಿ.ವಿ.ಮೋಹನ್‌ದಾಸ್ಪೈ ಅವರಿಗೂ ಈ ಪೋಸ್ಟನ್ನು ಟ್ಯಾಗ್ಮಾಡಿದ್ದು, ಕೆಲದಿನಗಳ ಹಿಂದೆ ಮೋಹನ್ ದಾಸ್ ಪೈಕೂಡ ಈ ಬಗ್ಗೆ ಎಕ್ಸೃ್ ಖಾತೆಯಲ್ಲಿಬರೆದಿದ್ದು ಗಮನಾರ್ಹ.

ಎಕ್ಸ್ಖಾತೆಯ ಪೋಸ್ಟ್ ವಿವರ

ದೇಶದಾದ್ಯಂತಅತ್ಯಾಧುನಿಕ ರಸ್ತೆ,ಮೂಲಸೌಕರ್ಯಒದಗಿಸುತ್ತಿರುವುದಾಗಿ ಹೆಮ್ಮೆಯಿಂದಹೇಳಿಕೊಳ್ಳುವ ಭಾರತೀಯ ರಾಷ್ಟ್ರೀಯಹೆದ್ದಾರಿ ಪ್ರಾಧಿಕಾರವು(ಎನ್‌ಎಚ್‌ಎಐ),ಬೆಂಗಳೂರಿನಪ್ರಮುಖ ಐಟಿ ಕಾರಿಡಾರ್ ಆಗಿರುವಹೊಸೂರು ರಸ್ತೆಯನ್ನು (ಎನ್‌ಎಚ್-44)ಕಳಪೆಯಾಗಿವಿನ್ಯಾಸಗೊಳಿಸಿರುವುದರ ಜೊತೆಗೆ, ಸಮಯಕ್ಕೆ ಸರಿಯಾಗಿನಿರ್ವಹಣೆ ಮಾಡುವುದರಲ್ಲೂ ನಿರ್ಲಕ್ಷಿಸಿರುವುದೇಕೆ ?ಒಂದು ಕಡೆ ಭಯಾನಕಡಿವೈಡರ್ಗಳು,ಎಲ್ಲೆಂದರಲ್ಲಿಇರುವ ಬ್ಯಾರಿಕೇಡ್‌ಗಳು,ರಸ್ತೆ ಅಂಚಿಗೆಸರಿಯಾಗಿ ಡಾಂಬರನ್ನು ಹಾಕದಿರುವಬಗ್ಗೆ ಈ ಹಿಂದೆಯೂ ಸಾಕಷ್ಟುದೂರಗಳನ್ನು ನೀಡಿದರೂ ಆ ಬಗ್ಗೆಕ್ರಮಕೈಗೊಂಡಿಲ್ಲ.ಸಾರ್ವಜನಿಕದೂರು ವಿಭಾಗದ ನಿಮ್ಮ ಹೆಮ್ಮೆಯದಾಖಲೆ ಪುಸ್ತಕ ಇದನ್ನೇ ಹೇಳುತ್ತದೆಯೇ’ಎಂದು ಎನ್‌ಎಚ್‌ಎಐ ಅಧಿಕಾರಿಗಳನ್ನುಕೇಂದ್ರವಾಗಿಸಿಕೊಂಡು ಪ್ರಶ್ನಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net