ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಪ್ರಾಂಶುಪಾಲ ಎಂ.ಶಿವಾನಂದ ಹೇಳಿಕೆ
ಮುಳಬಾಗಿಲು:ಆಟದಲ್ಲಿ ಒಬ್ಬರ ಗೆಲುವು , ಮತ್ತೊಬ್ಬರ ಸೋಲು ಸಹಜ. ಇದರಿಂದ ಸೋಲನ್ನು ಸಹ ಮುಂದಿನ ಗೆಲುವನ್ನಾಗಿ ಸ್ವೀಕರಿಸುವ ಮನೋಧೈರ್ಯ ಬೆಳೆಸುವುದು ನಿಜವಾದ ಕ್ರೀಡೆ ಎಂದು ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಪ್ರಾಂಶುಪಾಲ ಎಂ.ಶಿವಾನಂದ ತಿಳಿಸಿದರು.courage
ನಗರದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಸೋಮವಾರ ಸರ್ಕಾರಿ ನೌಕರರ ಕ್ರೀಡಾಕೂಟ ವಿಜೇತರಿಗೆ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿ, ಕ್ರೀಡೆಯಲ್ಲಿ ಭಾಗವಹಿಸುವ ಪ್ರತಿಯೊಬ್ಬರೂ ಗೆಲುವಿನ ನಿರೀೆಯಲ್ಲಿರುತ್ತಾರೆ. ಬಹುಮಾನಕ್ಕಾಗಿ ಮಾತ್ರ ಕ್ರೀಡಾ ಕೂಟದಲ್ಲಿ ಭಾಗಿಯಾಗಬಾರದು, ಏಕೆಂದರೆ ಸೋಲು&ಗೆಲುವಿನ ಪ್ರಾಯೋಗಿಕ ಅನುಭವ ನೀಡುತ್ತದೆ. ಆದ್ದರಿಂದ ಹೆಚ್ಚಾಗಿ ಕ್ರೀಡೆಯಲ್ಲಿ ತೊಡಗಿಸಿಕೊಳ್ಳಿ ಎಂದರು.
ಸರ್ಕಾರಿ ನೌಕರರು ಕೆಲಸದ ಒತ್ತಡ ಹಾಗೂ ವೈಯಕ್ತಿಕ ಕೆಲಸ ಕಾರ್ಯಗಳಿಂದ ಒತ್ತಡಕ್ಕೆ ಸಿಲುಕಿರುತ್ತಾರೆ. ಇದರಿಂದ ಹೊರಬರಲು ಕ್ರೀಡಾಕೂಟ ಅನುಕೂಲ ಆಗಲಿದೆ. ಸಂಸ್ಥೆಯಿಂದ ಜಿಲ್ಲಾಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ ಗೆಲುವು ಪಡೆದಿರುವುದು ಸಂತಸ ತಂದಿದೆ. ಮುಂದಿನ ದಿನಗಳಲ್ಲಿ ಕ್ರೀಡೆಯಲ್ಲಿ ಆಸಕ್ತಿ ಇರುವ ಸಂಸ್ಥೆಯ ತರಬೇತುದಾರರಿಗೆ ಕ್ರೀಡಾಕೂಟದಲ್ಲಿ ಭಾಗವಹಿಸಲು ಮುಕ್ತ ಅವಕಾಶ ಕಲ್ಪಿಸಲಾಗುವುದು ಎಂದರು.
ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ತರಬೇತುದಾರರಾದ ಲ್ಮ ಅವರು ರಿಲೆ ಮತ್ತು ಉದ್ದ ಜಿಗಿತದಲ್ಲಿ ಪ್ರಥಮ ಮತ್ತು 100, 200ಮೀ. ಓಟದಲ್ಲಿ ದ್ವೀತಿಯ ಸ್ಥಾನ ಪಡೆದರೆ, ಎಸ್.ಸಿ.ಚೈತ್ರಾ 400ಮೀ ಓಟದಲ್ಲಿ ದ್ವೀತಿಯ ಸ್ಥಾನ ಪಡೆದಿದ್ದಾರೆ. ಎಸ್. ಸುಕನ್ಯಾ, ಎಸ್.ಎನ್.ಧನಂಜಯ, ಎ.ಪ್ರದಿಪ್, ಎಸ್.ಮಧುಸೂದನ್ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು.
ಕೈಗಾರಿಕಾ ತರಬೇತುದಾರರಾದ ವಿ.ಕೃಷ್ಣೇಗೌಡ, ಎಸ್.ಬಿ.ಬೈರೇಗೌಡ, ಕೆ.ಟಿ.ನಾರಾಯಣಪ್ಪ, ಕೆ.ಎಸ್.ತಿಪ್ಪಯ್ಯ, ಟಿ.ಆಶಾ, ಸಿಬ್ಬಂದಿ ಜಿ.ವೈ.ರಾವೇಂದ್ರರಾವ್, ಮಂಜುಳಾಬಾಯಿ, ರುನಾಥ್, ಮುಷರತ್ ಫಾತೀಮಾ, ಆರ್.ಭವ್ಯಾ, ಎಸ್.ಕೃಷ್ಣಪ್ಪ ಮತ್ತಿತರರು ಇದ್ದರು.