ಸಮಸ್ಯೆಗಳನ್ನು ಲಿಖಿತವಾಗಿ ನೀಡಿದರೆ ಸಮಂಜಸ

ಬಸವನಬಾಗೇವಾಡಿ ಪಟ್ಟಣದ ಬಸವೇಶ್ವರ ಯಾತ್ರಾ ನಿವಾಸದಲ್ಲಿ ಬಸವನಬಾಗೇವಾಡಿ ಪೊಲೀಸ್ ಉಪವಿಭಾಗಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಹಮ್ಮಿಕೊಂಡಿದ್ದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕುಂದು-ಕೊರತೆ ಸಭೆಯಲ್ಲಿ ಡಿವೈಎಸ್‌ಪಿ ಚಂದ್ರಕಾಂತ ನಂದರಡ್ಡಿ ಮಾತನಾಡಿದರು. ಗುರುಶಾಂತ ದಾಶ್ಯಾಳ, ಎಸ್.ಎಸ್. ದೇಗಿನಾಳ, ಕಾಶಿನಾಥ ರಾಠೋಡ ಮತ್ತಿತರರಿದ್ದರು.
ಬಸವನಬಾಗೇವಾಡಿ ಪಟ್ಟಣದ ಬಸವೇಶ್ವರ ಯಾತ್ರಾ ನಿವಾಸದಲ್ಲಿ ಬಸವನಬಾಗೇವಾಡಿ ಪೊಲೀಸ್ ಉಪವಿಭಾಗಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಹಮ್ಮಿಕೊಂಡಿದ್ದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕುಂದು-ಕೊರತೆ ಸಭೆಯಲ್ಲಿ ಡಿವೈಎಸ್‌ಪಿ ಚಂದ್ರಕಾಂತ ನಂದರಡ್ಡಿ ಮಾತನಾಡಿದರು. ಗುರುಶಾಂತ ದಾಶ್ಯಾಳ, ಎಸ್.ಎಸ್. ದೇಗಿನಾಳ, ಕಾಶಿನಾಥ ರಾಠೋಡ ಮತ್ತಿತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಡಿವೈಎಸ್‌ಪಿ ಚಂದ್ರಕಾಂತ ನಂದರಡ್ಡಿ ಸಲಹೆ
  • ಪಜಾ-ಪಪಂಗಳ ಕುಂದು-ಕೊರತೆ ಸಭೆ
ಬಸವನಬಾಗೇವಾಡಿ: ಸಮಸ್ಯೆಗಳ ಕುರಿತು ಸಭೆಯಲ್ಲಿ ಮೌಖಿಕವಾಗಿ ಹೇಳುವ ಬದಲು ಲಿಖಿತ ಮೂಲಕ ನೀಡಿ ಎಂದು ಡಿವೈಎಸ್‌ಪಿ ಚಂದ್ರಕಾಂತ ನಂದರಡ್ಡಿ ಹೇಳಿದರು.
ಪಟ್ಟಣದ ಬಸವೇಶ್ವರ ಯಾತ್ರಾ ನಿವಾಸದಲ್ಲಿ ಪೊಲೀಸ್ ಉಪವಿಭಾಗಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಹಮ್ಮಿಕೊಂಡಿದ್ದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕುಂದು-ಕೊರತೆ ಸಭೆಯಲ್ಲಿ ಅವರು ಮಾತನಾಡಿದರು.
ಅರವಿಂದ ಸಾಲವಾಡಗಿ ಮಾತನಾಡಿ, ಪಟ್ಟಣದ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಮಹಿಳಾ ವಿದ್ಯಾರ್ಥಿಗಳಿರುವುದರಿಂದ ಆ ವಸತಿ ಶಾಲೆಗೆ ರಾತ್ರಿ ವೇಳೆ ಒಂದೆರಡು ಬಾರಿ ಪೊಲೀಸರು ಭೇಟಿ ನೀಡಿದರೆ ಸೂಕ್ತವಾಗುತ್ತದೆ ಎಂದು ಹೇಳಿದರು.
ಸಿದ್ಧರಾಮ ಪಾತ್ರೋಟಿ ಮಾತನಾಡಿ, ಪಟ್ಟಣದ ವಿವಿಧ ವೃತ್ತದಲ್ಲಿ ರಸ್ತೆ ವಿಸ್ತರಣೆ ಮಾಡಿ ಮತ್ತು ಪ್ರತಿ ವೃತ್ತದ ಬಳಿ ಟ್ರಾಫಿಕ್ ಪೊಲೀಸ್ ನಿಯೋಜನೆ ಮಾಡಿದರೆ ಟ್ರಾಫಿಕ್ ಸಮಸ್ಯೆ ಸರಿಪಡಿಸಲು ಸಾಧ್ಯವಾಗುತ್ತದೆ ಎಂದರು.
ಪುರಸಭೆ ಮಾಜಿ ಅಧ್ಯಕ್ಷ ಡಿಎಸ್‌ಎಸ್ ಮುಖಂಡ ಸಂಜಯ ಕಲ್ಯಾಣಿ ಮಾತನಾಡಿ, ಪಟ್ಟಣದ ವಿವಿಧ ವೃತ್ತದಲ್ಲಿ ರಸ್ತೆ ವಿಸ್ತರಣೆ, ಟಾಫಿಕ್ ಸಮಸ್ಯೆ, ರಾತ್ರಿ ವೇಳೆ ಮದ್ಯ ಸೇವನೆ, ತಾಲೂಕಿನ ಮಣ್ಣೂರ ಗ್ರಾಮದಲ್ಲಿ ಮಾದಿಗ ಸಮುದಾಯಕ್ಕೆ ಸೇರಿದ ಸಮುದಾಯದ ಭವನದಲ್ಲಿ ವಿದ್ಯುತ್ ಸಮಸ್ಯೆ, ಗ್ರಾಮೀಣ ಭಾಗದ ಕಿರಾಣಿ ಅಂಗಡಿ, ಹೋಟೆಲ್‌ಗಳಲ್ಲಿ ಸಾರಾಯಿ ಮಾರಾಟಕ್ಕೆ ಕಡಿವಾಣ, ಗ್ರಾಮೀಣ ಭಾಗದ ದಲಿತರಿಗೆ ಸ್ಮಶಾನ ಹಾಗೂ ಹೊಲ, ಗದ್ದೆ ತೆರಳಲು ದಾರಿ ಸಮಸ್ಯೆ ಇನ್ನಿತರೆ ಕುಂದು-ಕೊರತೆಗಳನ್ನು ಪರಿಹರಿಸಬೇಕು ಎಂದರು.
ಡಿಎಸ್‌ಎಸ್ ಹಿರಿಯ ಮುಖಂಡ ಅಶೋಕ ಚಲವಾದಿ, ಗುರು ಗುಡಿಮನಿ, ಮಹಾಂತೇಶ ಸಾಸಾಬಾಳ ಮಾತನಾಡಿದರು.
ಪೊಲೀಸ್ ಇನ್ಸ್‌ಪೆಕ್ಟರ್ (ಪಿಐ) ಗುರುಶಾಂತ ದಾಶ್ಯಾಳ, ಎಸ್.ಎಸ್. ದೇಗಿನಾಳ, ಕಾಶಿನಾಥ ರಾಠೋಡ, ಪರುಶುರಾಮ ದಿಂಡವಾರ, ತಮ್ಮಣ್ಣ ಕಾನಾಗಡ್ಡಿ, ರಮೇಶ ಮಾಗ್ಯೇರಿ, ಭೀಮಾಶಂಕರ ಬಡ್ಡಿವಡ್ಡರ, ಮೌನೇಶ ಹೆಬ್ಬಾಳ, ರಾಜು ದಿಂಡವಾರ, ವಿಶಾಲ ಛಲವಾದಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net