ಎಲ್ಲರೂ ಸಸಿ ನೆಟ್ಟು ಪರಿಸರ ರಸಿ

ಬಾಗೇಪಲ್ಲಿ ತಾಲೂಕಿನ ಶಿವಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಹಸಿರು ಶಾಲೆ ಕಾರ್ಯಕ್ರಮದಲ್ಲಿ ಎಸ್​ಡಿಎಂಸಿ ಅಧ್ಯಕ್ಷ ಶಂಕರಪ್ಪ, ಶಿಕ್ಷಕರಾದ ಶಂಷಿಯಾಬಾನು, ವೆಂಕಟರವಣಪ್ಪ, ಅನಂತಮೂರ್ತಿ, ಮುಖ್ಯ ಶಿಕ್ಷಕ ಲಕ್ಷಿ$್ಮಪತಿ ಇತರರಿದ್ದರು.
ಬಾಗೇಪಲ್ಲಿ ತಾಲೂಕಿನ ಶಿವಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಹಸಿರು ಶಾಲೆ ಕಾರ್ಯಕ್ರಮದಲ್ಲಿ ಎಸ್​ಡಿಎಂಸಿ ಅಧ್ಯಕ್ಷ ಶಂಕರಪ್ಪ, ಶಿಕ್ಷಕರಾದ ಶಂಷಿಯಾಬಾನು, ವೆಂಕಟರವಣಪ್ಪ, ಅನಂತಮೂರ್ತಿ, ಮುಖ್ಯ ಶಿಕ್ಷಕ ಲಕ್ಷಿ$್ಮಪತಿ ಇತರರಿದ್ದರು.
Published on

ಪಾತಪಾಳ್ಯ :

ವಿದ್ಯಾರ್ಥಿಗಳಿಗೆ ಪ್ರಾಥಮಿಕ ಹಂತದಲ್ಲೇ ಪರಿಸರ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸುವ ಅವಶ್ಯಕತೆ ಇದೆ ಎಂದು ಎಸ್​ಡಿಎಂಸಿ ಅಧ್ಯಕ್ಷ ಶಂಕರಪ್ಪ ತಿಳಿಸಿದರು.

ಶಿವಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಹಸಿರು ಶಾಲೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕೈಗಾರೀಕರಣ ಹಾಗೂ ಆಧುನಿಕ ಜೀವನ ಶೈಲಿಯು ಜೀವ ವೈವಿಧ್ಯತೆಗೆ ಮಾರಕವಾಗುತ್ತಿದೆ. ಕೈಗಾರಿಕೆಗಳು ಹೊರಸೂಸುವ ವಿಷಕಾರಿ ಅನಿಲಗಳು ಹಾಗೂ ಸಂಸ್ಕರಿಸದ ತ್ಯಾಜ್ಯ ನೀರನ್ನು ಜಲಮೂಲಗಳಿಗೆ ನೇರವಾಗಿ ಬಿಡುವುದರಿಂದ ಮಾಲಿನ್ಯವಾಗುತ್ತದೆ. ಮಕ್ಕಳಲ್ಲಿ ಪರಿಸರ ಮಾಲಿನ್ಯ ತಡೆಗಟ್ಟುವ ಕ್ರಮಗಳ ಬಗ್ಗೆ ಅರಿವು ಮೂಡಿಸಬೇಕು ಎಂದರು.
ಶಿಕ್ಷಕಿ ಶಂಷಿಯಾಬಾನು ಮಾತನಾಡಿ, ಪ್ರತಿಯೊಬ್ಬರೂ ಒಂದೊಂದು ಸಸಿಯನ್ನು ನೆಟ್ಟು ಅದರ ಪೋಷಣೆಯ ಹೊಣೆಗಾರಿಕೆ ವಹಿಸಿಕೊಳ್ಳುವ ಮೂಲಕ ಹಸಿರು ಪರಿಸರ ನಿಮಾರ್ಣಕ್ಕೆ ಕೈಜೋಡಿಸಬೇಕು ಎಂದು ಕರೆ ನೀಡಿದರು.
ಶಿಕ್ಷಕ ವೆಂಕಟರವಣಪ್ಪ ಮಾತನಾಡಿ, ಮರಗಳು ಪರಿಸರ ಸಮತೋಲವನ್ನು ಕಾಪಾಡುವುದರ ಜತೆಗೆ ಶುದ್ಧಗಾಳಿ, ಉತ್ತಮ ಆರೋಗ್ಯ ಮತ್ತು ಜೀವ ವೈವಿಧ್ಯದ ಸಂರಕ್ಷಣೆಗೆ ಪ್ರಮುಖ ಆಧಾರವಾಗಿವೆ. ಹವಾಮಾನ ಬದಲಾವಣೆ ಮತ್ತು ಪರಿಸರ ಮಾಲಿನ್ಯ ತಡೆಗಟ್ಟಲು ಹೆಚ್ಚಿನ ಪ್ರಮಾಣದಲ್ಲಿ ಸಸಿ ನೆಟ್ಟು ಪೋಷಿಸಬೇಕು ಎಂದರು.
ಎಸ್​ಡಿಎಂಸಿ ಸದಸ್ಯರಾದ ಈಶ್ವರ, ಲಕ್ಷಿ$್ಮದೇವಮ್ಮ, ವೆಂಕಟರಾಮಪ್ಪ, ವೀಣಾ, ಬಿನಯ್​ ವಿದ್ಯಾರ್ಥಿಗಳಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net