ಬೆಂಗಳೂರು: ಜಮೀನಿನ ನಕಾಶೆಯ ಕಾಲುದಾರಿ, ಬಂಡಿದಾರಿಯಲ್ಲಿ ತಿರುಗಾಡಲು ತಡೆಯೊಡ್ಡಿದರೆ ಅಪರಾಧವಾಗಲಿದೆ. ಒಂದು ವೇಳೆ ಮುಚ್ಚಿದ್ದರೆ ಅಥವಾ ಅಡ್ಡಿಪಡಿಸಿದರೆ ಸಂಬಂಧಪಟ್ಟ ತಹಸೀಲ್ದಾರ್‌ಗೆ ದೂರು ಕೊಟ್ಟರೆ ಅವರು ರಸ್ತೆ ಬಿಡಿಸಲಿದ್ದಾರೆ. ಈಗಾಗಲೇ ರಾಜ್ಯದಲ್ಲಿ 7914 ದೂರು ಬಂದಿದ್ದು, ಗ್ರಾಮ ಆಡಳಿತಾಧಿಕಾರಿ ಮತ್ತು ತಹಸೀಲ್ದಾರ್ ವಿಲೇವಾರಿ ಮಾಡುತ್ತಿದ್ದಾರೆ.