

ಪ್ರಮುಖ ಮುಖ್ಯಾಂಶಗಳು
ಬೆಂಗಳೂರು:ಪಾಂಡಿತ್ಯ ಮತ್ತುಪಂಡಿತರನ್ನು ದ್ವೇಷಿಸುವ ಕಾಲದಲ್ಲಿದೇಶವಿದೆ. ದೇಶದಜ್ಞಾನ ಮತ್ತು ಜ್ಞಾನಿಗಳಿಗೆಸರಿಯಾದ ಮನ್ನಣೆ ನೀಡದೆ ಅವರನ್ನುದ್ವೇಷಿಸುವ ಗುಣ ಹೆಚ್ಚಾಗಿದೆಎಂದು ಒರಿಸ್ಸಾ ಹೈಕೋರ್ಟ್ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ವಿಷಾಧ ವ್ಯಕ್ತಪಡಿಸಿದ್ದಾರೆ.
ಭಾರತೀಯವಿದ್ಯಾಭವನದಲ್ಲಿ ಹಮ್ಮಿಕೊಂಡಿದ್ದಪದ್ಮಭೂಷಣ ಪ್ರಶಸ್ತಿಗೆ ಭಾಜನರಾದಶತಾವಧಾನಿ ಆರ್.ಗಣೇಶ್ಅವರ ಸನ್ಮಾನ ಸಮಾರಂಭದಲ್ಲಿಮಾತನಾಡಿದರು.
ಶತಾವಧಾನಿಗಣೇಶ್ ಅವರ ಜ್ಞಾನ ಮತ್ತು ಸಾಧನೆಗೆಭಾರತ ರತ್ನ ಗೌರವ ದೊರೆಯಬೇಕಿತ್ತು.ದೇಶದ ಉದ್ದಗಲಕ್ಕೆಹುಡುಕಿದರೂ ಬೆರಳೆಣಿಕೆಯಷ್ಟುಇಂತಹ ಜ್ಞಾನಿಗಳು ಸಿಗುವುದಿಲ್ಲ.ಸರ್ಕಾರ ಪದ್ಮಭೂಷಣಪ್ರಶಸ್ತಿಯನ್ನು ನೀಡಿರುವುದುಪ್ರಶಸ್ತಿಯ ಮೌಲ್ಯವನ್ನುಹೆಚ್ಚಿಸಿದೆ.ಒಂದು ವೇಳೆ ಸನಾತನಧರ್ಮದ ಎಲ್ಲ ಪ್ರಾಚೀನ ಗ್ರಂಥಗಳನ್ನುಯಾರಾದರೂ ದುಷ್ಟರು ಸುಟ್ಟುಹಾಕಿದರೂ, ಆಎಲ್ಲ ಗ್ರಂಥಗಳನ್ನು ತಮ್ಮಸ್ಮತಿಪಟಲದಲ್ಲಿ ಇರಿಸಿಕೊಂಡಿರುವಶತಾವಧಾನಿ ಗಣೇಶ್ ಮರುಸೃಷ್ಟಿಸಿಕೊಡಲಿದ್ದಾರೆ.ಶ್ರೀರಾಮ ಸೀತಾಮಾತೆ,ಲಕ್ಷ್ಮಣರಸಮೇತನಾಗಿರುವ ಭಾವಚಿತ್ರ ಸಂವಿಧಾನದಪುಸ್ತಕದಲ್ಲಿದ್ದರೂ ರಾಮನಮಂದಿರವನ್ನು ನಿರ್ಮಿಸುವುದಕ್ಕೆ400 ವರ್ಷಗಳಹೋರಾಟ ಮಾಡಬೇಕಾಯಿತು.ಶ್ರೀರಾಮ ಭಾರತೀಯನಾಗರೀಕತೆಯ ಅಸ್ಮಿತೆ.ಅಂತಹ ರಾಮಾಯಣ,ಮಹಾಭಾರತದಂತಹಮಹಾಕಾವ್ಯಗಳನ್ನು ಸುಲಲಿತವಾಗಿಅವಧಾನ ಮಾಡಿರುವ ಶತಾವಧಾನಿ ಗಣೇಶ್ಅವರ ಕಾಲಘಟ್ಟದಲ್ಲಿ ನಾವಿರುವುದೇನಮ್ಮ ಸೌಭಾಗ್ಯ ಎಂದು ದೀಕ್ಷಿತ್ವಿವರಿಸಿದರು.
ಸಮಾರಂಭದಲ್ಲಿಭಾರತೀಯ ವಿದ್ಯಾಭವನದ ಅಧ್ಯಕ್ಷಕೆ.ಜಿ.ರಾಘವನ್ಬರೆದಿರುವ ಇಕೋಸ್ ಫ್ರಮ್ ರಮ್ರಾಮಾಯಣ ಕೃತಿಯನ್ನು ನಿವೃತ್ತಐಎಎಸ್ ಅಧಿಕಾರಿ ಡಾ.ಚಿರಂಜೀವಿಸಿಂಗ್ ಬಿಡುಗಡೆ ಮಾಡಿದರು.ಖ್ಯಾತ ಭರತನಾಟ್ಯಕಲಾವಿದೆ ಪದ್ಮವಿಭೂಷಣ ಡಾ.ಪದ್ಮಸುಬ್ರಮಣ್ಯ,ಶತಾವಧಾನಿಆರ್.ಗಣೇಶ್,ವಿದ್ಯಾಭವನದನಿರ್ದೇಶಕ ಸುರೇಶ್ ಮತ್ತಿತರರುಉಪಸ್ಥಿತರಿದ್ದರು.
ಬೆಳಗ್ಗೆಯಿಂದನಡೆದ ವಿವಿಧ ಕಾರ್ಯಕ್ರಮಗಳಲ್ಲಿಸಂಗೀತ, ನೃತ್ಯಮತ್ತಿತರ ಸಾಂಸ್ಕೃತಿಕ ಕಾರ್ಯಕ್ರಮಗಳು,ಶತಾವಧಾನಿ ಗಣೇಶ್ಅವರೊಂದಿಗೆ ಸಾರ್ವಜನಿಕರ ಸಂವಾದ,ಗಣೇಶ್ ಅವರಕೃತಿಗಳ ಪ್ರದರ್ಶನ ಮತ್ತುಮಾರಾಟವನ್ನು ಏರ್ಪಡಿಸಲಾಗಿತ್ತು.
ಸಂಸ್ಕೃತದ ಬಗ್ಗೆ ಇತ್ತೀಚೆಗೆ ಕಹಿ, ಕೆಂಡಕಾರುವ ಗುಣ ಹೆಚ್ಚಾಗುತ್ತಿದೆ. ಭಾಷಾಂಧತೆ ವ್ಯಕ್ತಿಯ ಭೌದ್ಧಿಕ ಬೆಳವಣಿಗೆಗೆ ಕುಂದು ತರುತ್ತದೆ. ಭಾರತೀಯ ಭಾಷಾ ದೇವತೆಯು ದಿನಕ್ಕೊಂದು ಅಲಂಕಾರ ಮಾಡಿದಂತೆ ವಿವಿಧ ಭಾಷೆಗಳು. ಯಾವುದರ ಬಗ್ಗೆಯೂ ದ್ವೇಷ ಇರಬಾರದು.