ಐಟಿ ಭೀತಿಯಿಂದ ಉದ್ಯಮಿ ಸಾವು ಆರೋಪ: ಸತ್ಯಾಸತ್ಯತೆ ಹೊರಬರಲಿ ಎಂದ DK ಶಿವಕುಮಾರ್

DK Shivakumar
DK Shivakumar
Published on
ಕನಕಪುರ: "ಐಟಿ ದಾಳಿಯೇ ಸಾವಿಗೆ ಕಾರಣ ಎಂದು ಕುಟುಂಬದವರು ಹೇಳುತ್ತಿದ್ದಾರೆ. ಆದರೆ, ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ತನಿಖಾ ವರದಿ ಬಂದ ನಂತರವಷ್ಟೇ ನಾನು ಈ ಬಗ್ಗೆ ಪ್ರತಿಕ್ರಿಯೆ ನೀಡುತ್ತೇನೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್" ಎಂದು ಸ್ಪಷ್ಟಪಡಿಸಿದರು.
ಕನಕಪುರದಲ್ಲಿ ಶನಿವಾರ ಆಯೋಜಿಸಲಾಗಿದ್ದ 'ಕನಕೋತ್ಸವ'ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಇದೇ ವೇಳೆ, ಉದ್ಯಮಿ ಸಿ.ಜೆ. ರಾಯ್ ಅವರ ಸಾವಿನ ಕುರಿತು ಕೇಳಲಾದ ಪ್ರಶ್ನೆಗೆ ಡಿಸಿಎಂ ಪ್ರತಿಕ್ರಿಯಿಸಿದರು.

ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸಿ, ನೀವೇ ಉದ್ಯಮಿಗಳಾಗಿ!

"ನೀವು ಕೇವಲ ಕನಕಪುರ ಅಥವಾ ರಾಮನಗರಕ್ಕೆ ಸೀಮಿತವಾಗಬೇಡಿ. ನೀವೆಲ್ಲರೂ ಬೆಂಗಳೂರು ಜಿಲ್ಲೆಯ ಮಕ್ಕಳು, ನಿಮ್ಮ ಸ್ಪರ್ಧೆ ಏನಿದ್ದರೂ ಜಾಗತಿಕ ಮಟ್ಟದಲ್ಲಿರಲಿ!" ಹೀಗೆಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ವಿದ್ಯಾರ್ಥಿಗಳಲ್ಲಿ ಹೊಸ ಚೈತನ್ಯ ತುಂಬಿದರು.ಕಾರ್ಯಕ್ರಮದಲ್ಲಿ ಎಸ್ಎಸ್ಎಲ್ ಸಿ ಹಾಗೂ ಪಿಯುಸಿಯಲ್ಲಿ ಅತ್ಯುತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಗೌರವಿಸಿ ಅವರು ಮಾತನಾಡಿದರು.
"ಕನಕಪುರದ ಮಕ್ಕಳು ದೇಶದ ಆಸ್ತಿಯಾಗಿ ಬೆಳೆಯಬೇಕು. ನೀವು ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದರೆ, ನನ್ನ ಮಗಳು ಐಶ್ವರ್ಯ ಬೆಳೆದಷ್ಟೇ ಸಂತೋಷ ನನಗೆ ಆಗುತ್ತದೆ. ನಿಮ್ಮ ಪೋಷಕರು ನನ್ನನ್ನು ಶಾಸಕನನ್ನಾಗಿ ಬೆಳೆಸಿದ್ದಾರೆ, ನಿಮ್ಮ ಋಣ ತೀರಿಸಲು 'ಡಿಕೆಎಸ್ ಟ್ರಸ್ಟ್' ಮೂಲಕ ಈ ಸೇವೆ ಮಾಡುತ್ತಿದ್ದೇನೆ" ಎಂದರು.

15 ಹೈಟೆಕ್ ಶಾಲೆಗಳ ನಿರ್ಮಾಣ!

ಶಿಕ್ಷಣ ಕ್ಷೇತ್ರಕ್ಕೆ ತಮ್ಮ ಕೊಡುಗೆಯನ್ನು ಘೋಷಿಸಿದ ಡಿ.ಕೆ. ಶಿವಕುಮಾರ್, "ತಾಲ್ಲೂಕಿನಲ್ಲಿ ಸಿಎಸ್ಆರ್ (CSR) ನಿಧಿಯಡಿ 15 ಅತ್ಯಾಧುನಿಕ ಶಾಲೆಗಳನ್ನು ನಿರ್ಮಿಸಲಾಗುತ್ತಿದೆ. ಪ್ರತಿ ಶಾಲೆಗೆ ತಲಾ 15 ಕೋಟಿ ರೂಪಾಯಿ ವೆಚ್ಚ ಮಾಡಲಾಗುತ್ತಿದ್ದು, ಬೆಂಗಳೂರು ನಗರದ ಗುಣಮಟ್ಟದ ಶಿಕ್ಷಣ ಈಗ ಹಳ್ಳಿಯ ಮಕ್ಕಳಿಗೂ ಸಿಗಲಿದೆ" ಎಂದು ಭರವಸೆ ನೀಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net