ಪರಿಸರ ಸಂರಕ್ಷಣೆಗೆ ವಿದ್ಯಾರ್ಥಿಗಳಿಗೆ ಈಶ್ವರ್ ಖಂಡ್ರೆ ಕರೆ; ಬೆಂವಿವಿ ರಾಷ್ಟ್ರೀಯ ಕಾರ್ಯಗಾರ

ಬೆಂಗಳೂರು ವಿಶ್ವವಿದ್ಯಾಲಯ ಆಯೋಜಿಸಿದ್ದ ರಾಷ್ಟ್ರೀಯ ಕಾರ್ಯಗಾರದಲ್ಲಿ ಅರಣ್ಯ ಸಚಿವ ಈಶ್ವರ ಖಂಡ್ರೆ, ಕುಲಪತಿ ಪ್ರೊ.ಸಿ.ಸೋಮಶೇಖರ್, ಅರಣ್ಯ ಇಲಾಖೆ ಕಾರ್ಯದರ್ಶಿ ಶ್ರೀನಿವಾಸಲು ಮತ್ತಿತರರು ಪಾಲ್ಗೊಂಡಿದ್ದರು.
ಬೆಂಗಳೂರು ವಿಶ್ವವಿದ್ಯಾಲಯ ಆಯೋಜಿಸಿದ್ದ ರಾಷ್ಟ್ರೀಯ ಕಾರ್ಯಗಾರದಲ್ಲಿ ಅರಣ್ಯ ಸಚಿವ ಈಶ್ವರ ಖಂಡ್ರೆ, ಕುಲಪತಿ ಪ್ರೊ.ಸಿ.ಸೋಮಶೇಖರ್, ಅರಣ್ಯ ಇಲಾಖೆ ಕಾರ್ಯದರ್ಶಿ ಶ್ರೀನಿವಾಸಲು ಮತ್ತಿತರರು ಪಾಲ್ಗೊಂಡಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಪರಿಸರ ಸಂರಕ್ಷಣೆಗೆ ವಿದ್ಯಾರ್ಥಿಗಳು ಮುಂದಾಗಲಿ
  • ಅರಣ್ಯ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಕರೆ
  • ಬೆಂಗಳೂರು ವಿವಿಯಲ್ಲಿ ರಾಷ್ಟ್ರೀಯ ಕಾರ್ಯಗಾರ

ಬೆಂಗಳೂರು:ಭವಿಷ್ಯದ ಪ್ರಜೆಗಳಾದವಿದ್ಯಾರ್ಥಿಗಳು ಪರಿಸರ ಸಂರಕ್ಷಣೆಯಲ್ಲಿತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು.ರಾಜ್ಯದಲ್ಲಿಶೇ.21ರಷ್ಟುಅರಣ್ಯ ಪ್ರದೇಶವಿದ್ದು,ಇದನ್ನು ಶೇ.33ರಷ್ಟುಹೆಚ್ಚಾದಾಗ ಸಮತೋಲವಾಗುತ್ತದೆಎಂದು ಅರಣ್ಯ,ಜೀವಿಶಾಸ್ತ್ರಮತ್ತು ಪರಿಸರ ಸಚಿವ ಈಶ್ವರ ಬಿ.ಖಂಡ್ರೆ ತಿಳಿಸಿದರು.

ಬೆಂಗಳೂರುವಿಶ್ವವಿದ್ಯಾಲಯ ಪರಿಸರ ವಿಜ್ಞಾನವಿಭಾಗವು ಗ್ರಾಮೀಣ ಸಾಕ್ಷರತಾಮತ್ತು ಆರೋಗ್ಯ ಕಾರ್ಯಕ್ರಮ ಹಾಗೂಕರ್ನಾಟಕ ಸ್ಟೇಟ್ ಯೂಥ್ ನೆಟ್‌ವರ್ಕ್ಸಹಯೋಗದಲ್ಲಿ ಆಯೋಜಿಸಿದ್ದ ಪರಿಸರಸಂರಕ್ಷಣೆಯಲ್ಲಿ ಯುವಜನರ ಪಾತ್ರಎಂಬ ರಾಷ್ಟ್ರೀಯ ಕಾರ್ಯಗಾರದಲ್ಲಿಮಾತನಾಡಿದರು.

ನಗರಪ್ರದೇಶದಲ್ಲಿ ಕಾಂಕ್ರೀಟ್ವಿಸ್ತರಣೆ ಕಡಿಮೆಯಾಗಬೇಕು.ಕನಿಷ್ಠ ಶೇ.1%ರಷ್ಟು ಹಸಿರುಹೊದಿಕೆ ಹೆಚ್ಚಿಸಲು 10ಕೋಟಿ ಸಸಿ ನೆಡುವಅಗತ್ಯವಿದೆ. ಈಕಾರ್ಯಕ್ಕೆ ಸರ್ಕಾರದ ಜೊತೆ ಸಂಘಸಂಸ್ಥೆಗಳು,ಸಾರ್ವಜನಿಕರು,ವಿದ್ಯಾರ್ಥಿಗಳುಕೈಜೋಡಿಸಬೇಕು.ಬೆಂಗಳೂರಿನವಾಯು ಗುಣಮಟ್ಟ ಸೂಚ್ಯಂಕ 100ದಾಟಿದ್ದು ಹೀಗೆಮುಂದುವರೆದರೆ ದೆಹಲಿ ಮಾದರಿಯಸಮಸ್ಯೆಗಳು ಎದುರಿಸಬೇಕಾಗಬಹುದು.ಪ್ರಕೃತಿಸಮತೋಲನಕ್ಕೆ ವನ್ಯ ಜೀವಿಗಳುಅತ್ಯಂತ ಅವಶ್ಯಕ. ಭೂಮಿಯ ಮೇಲೆಹುಟ್ಟಿದ ಪ್ರತಿ ಜೀವಿಗೂ ಬದುಕುವಹಕ್ಕಿದೆ.ಕೀಟರಾಶಿ,ಸಸ್ಯಪ್ರಭೇದ, ಪ್ರಾಣಿಸಂಕುಲ ಎಲ್ಲವೂ ಪ್ರಕೃತಿ ಸಮತೋಲನದಭಾಗವಾಗಿದೆ. ಈನಿಟ್ಟಿನಲ್ಲಿ ವಿದ್ಯಾರ್ಥಿಗಳುಗಮನಹರಿಸಬೇಕೆಂದು ಖಂಡ್ರೆಹೇಳಿದರು.

ಕಾರ್ಯಕ್ರಮದಲ್ಲಿಬೆಂಗಳೂರು ವಿಶ್ವವಿದ್ಯಾಲಯದಕುಲಪತಿ (ಪ್ರಭಾರ)ಪ್ರೊ.ಸಿ.ಸೋಮಶೇಖರ್,ಕುಲಸಚಿವೆಕೆ.ಟಿ.ಶಾಂತಲಾ,ಅರಣ್ಯ,ಪರಿಸರಮತ್ತು ಜೀವಶಾಸ್ತ್ರ ಇಲಾಖೆಯಪ್ರಧಾನ ಕಾರ್ಯದರ್ಶಿ ಶ್ರೀನಿವಾಸಲುಮತ್ತಿತರ ಹಿರಿಯ ಅಧಿಕಾರಿಗಳು,ವಿವಿ ಸಿಬ್ಬಂದಿಗಳುಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net