

ವಿ.ಎಂ.ಕಿಶೋರ್ ಕುಮಾರ್ ವಿಜಯಪುರ
ಬೆಂಗಳೂರು ಗ್ರಾಮಾಂತರ ಜಿಲ್ಲೆ ರೈತರಷ್ಟೇ ಅಲ್ಲದೆ ನೆರೆಯ ತುಮಕೂರು ಜಿಲ್ಲೆಯ ಕೊರಟಗೆರೆ, ಮಧುಗಿರಿ ಸೇರಿ ದೂರದ ಊರುಗಳ ರೈತರು ಸಹ ಎರಡು ದಿನ ಮುಂಚಿತವಾಗಿಯೇ ಆಗಮಿಸಿ ಜಾಗಕ್ಕಾಗಿ ಮಾರುಕಟ್ಟೆಯಲ್ಲಿ ಕಾಯುತ್ತಿದ್ದರು. ದಿನಕ್ಕೆ 800ಕ್ಕೂ ಹೆಚ್ಚು ಲಾಟುಗಳು ಹರಾಜಾಗುತ್ತಿದ್ದ ಜಾಗದಲ್ಲಿ ಸದ್ಯಕ್ಕೆ ಕೇವಲ 25ರಿಂದ 50 ಲಾಟುಗಳು ಹರಾಜಾಗುತ್ತಿವೆ. ಪ್ರಸ್ತುತ ಮಾರುಕಟ್ಟೆಯಲ್ಲಿ ರೇಷ್ಮೆ ಗೂಡಿನ ಬೆಲೆ ಕೆ.ಜಿ.ಗೆ <850 ಗಡಿ ದಾಟಿದ್ದರೂ ಸ್ಥಳಿಯ ರೈತರು ಇತ್ತೀಚೆಗೆ ರೇಷ್ಮೆ ಬೆಳೆಯಲು ಹಿಂಜರಿಯುತ್ತಿದ್ದಾರೆ.
ಹಿನ್ನಡೆಗೆ ಕಾರಣ :
ಯಲಿಯೂರು ಮತ್ತು ಸುತ್ತಮುತ್ತಲ ಫಲವತ್ತಾದ ಸಾವಿರಾರು ಎಕರೆ ರೇಷ್ಮೆ ಜಮೀನುಗಳನ್ನು ವಿಮಾನ ನಿಲ್ದಾಣ ಹಾಗೂ ಕೈಗಾರಿಕೆಗಳಿಗೆ ಸರ್ಕಾರ ವಶಪಡಿಸಿಕೊಂಡಿದ್ದರಿಂದ ಹಿಪ್ಪುನೇರಳೆ ಕೃಷಿಗೆ ಜಾಗವಿಲ್ಲದಂತಾಗಿದೆ. ಗ್ರಾಮೀಣ ಯುವಕರು ಕೃಷಿ ಬಿಟ್ಟು ವಿಮಾನ ನಿಲ್ದಾಣ ಹಾಗೂ ನಗರದ ಉದ್ಯೋಗಗಳತ್ತ ಮುಖ ಮಾಡುತ್ತಿದ್ದಾರೆ.
ದ್ರಾ, ದಾಳಿಂಬೆ ಹಾಗೂ ಹೂವಿನ ಬೆಳೆಗಳಿಗೆ ಸಿಂಪಡಿಸುವ ಕ್ರಿಮಿನಾಶಕಗಳು ಗಾಳಿಯಲ್ಲಿ ಹರಡಿ ಹಿಪ್ಪುನೇರಳೆ ಸೊಪ್ಪನ್ನು ತಲುಪುತ್ತಿದ್ದು, ಅದನ್ನು ತಿಂದ ರೇಷ್ಮೆ ಹುಳುಗಳು ಸಾಯುತ್ತಿವೆ. ಇದು ನಮಗೆ ದೊಡ್ಡ ಸಮಸ್ಯೆಯಾಗಿದೆ ಎನ್ನುತ್ತಾರೆ ನಾಗನಾಯಕನಹಳ್ಳಿಯ ರೈತ ನಾಗರಾಜಯ್ಯ. ಸರ್ಕಾರಿ ಸೌಲಭ್ಯ ಪಡೆದೂ ಸ್ಥಳಿಯ ರೈತರು ಗೂಡನ್ನು ಮಾರುಕಟ್ಟೆಗೆ ತರದೆ ನೇರವಾಗಿ ರೀಲರ್ಗಳಿಗೆ ಹಾಗೂ ಖಾಸಗಿ ವ್ಯಾಪಾರಿಗಳಿಗೆ ಮಾರಾಟ ಮಾಡುತ್ತಿರುವುದು ಇನ್ನೊಂದು ಕಾರಣ ಎನ್ನಬಹುದು.
ಸ್ಥಳಿಯ ರೇಷ್ಮೆ ಬೆಳೆಗಾರರ ನಿರಾಸಕ್ತಿಯಿಂದಾಗಿ ವಿಜಯಪುರ ಮಾರುಕಟ್ಟೆಯು ಸಂಪೂರ್ಣವಾಗಿ ನೆರೆಯ ಆಂಧ್ರಪ್ರದೇಶ ಹಾಗೂ ತಮಿಳುನಾಡಿನಿಂದ ಬರುವ ರೇಷ್ಮೆ ಗೂಡಿನ ಮೇಲೆಯೇ ಅವಲಂಬಿತವಾಗಿದೆ. ಸ್ಥಳಿಯ ರೈತರು ಹೀಗೆಯೇ ಮಾರುಕಟ್ಟೆಯನ್ನು ಅಲಸಿದರೆ ಮುಂದಿನ ದಿನಗಳಲ್ಲಿ ಮಾರುಕಟ್ಟೆ ಸಂಪೂರ್ಣ ಬಂದ್ ಆಗುವ ಭೀತಿ ಎದುರಾಗಿದೆ.
ವಿಜಯಪುರ ಮಾರುಕಟ್ಟೆಯಲ್ಲಿ ಹರಾಜಾದ ತಕ್ಷಣ ಉತ್ತಮ ಬೆಲೆ ಸಿಗುತ್ತಿದ್ದು, ಹಣ ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಜಮೆಯಾಗುತ್ತಿದೆ. ಇಲಾಖೆಯಿಂದ ಸೌಲಭ್ಯಗಳ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ರೈತರು ಖಾಸಗಿಯವರಿಗೆ ಮಾರಿ ಮೋಸ ಹೋಗದೆ, ಸರ್ಕಾರದ ಸೌಲಭ್ಯಗಳನ್ನು ಬಳಸಿಕೊಂಡು ರೇಷ್ಮೆ ಬೆಳೆದು ಮಾರುಕಟ್ಟೆಯನ್ನು ಉಳಿಸಬೇಕು.
— > ರೆಡ್ಡಿಲಕ್ಷ್ಮೀ ಉಪನಿರ್ದೇಶಕಿ, ರೇಷ್ಮೆಗೂಡು ಮಾರುಕಟ್ಟೆ, ವಿಜಯಪುರ