ಎಐ ನಿಂದ ಮಕ್ಕಳಲ್ಲಿ ಸ್ವಯಂ ಯೋಜನಾಶಕ್ತಿ ಕುಂದುತ್ತಿದೆ?

Artifical Intaligence
Artifical Intaligence
Published on

ಬೆಂಗಳೂರು: ಎಐ (ಕೃತಿಕ ಬುದ್ಧಿಮತ್ತೆ) ತಂತ್ರಜ್ಞಾನ ಬಳಕೆ ಹಾಗೂ ಅದರ ಉಪಯೋಗದಿಂದಾಗಿ ಇಂದಿನ ಮಕ್ಕಳು ಸ್ವಯಂ ಯೋಚಿಸುವುದನ್ನೇ ಕಳದುಕೊಳ್ಳುತ್ತಿದ್ದಾರೆ. ಇದರಿಂದ ಮಿದುಳಿಗೆ ವಿಶ್ರಾಂತಿ ದೊರೆಯುತ್ತಿದೆಯಾದರೂ, ಯೋಚನಾಶಕ್ತಿ ಕುಂದುತ್ತಿದೆ ಎಂದು ವೈದ್ಯಲೋಕ ಆತಂಕ ವ್ಯಕ್ತಪಡಿಸಿದೆ.

ಶಾಲೆಯಲ್ಲಿ ಪ್ರಬಂಧ ಬರೆದುಕೊಂಡು ಬರಲು ಹೇಳಿದರೆ ಅದನ್ನು ಚಾಟ್‌ಬಾಟ್‌ಗೆ ವಹಿಸುವ ಹದಿಹರೆಯದ ಮಕ್ಕಳು, ಯಾವ ವಿಷಯದ ಬಗ್ಗೆಯೂ ಆಳವಾದ ಅಧ್ಯಯನದಿಂದ ವಿಮುಖರಾಗುತ್ತಿದ್ದಾರೆ. ಕಾರಣ ಮನೆಯಲ್ಲಿ ಪಾಲಕರು ಮೊಬೈಲ್ ಗೀಳಿಗೆ ಒಳಗಾಗಿರುವುದು ಮಕ್ಕಳ ಮಾನಸಿಕ ಆರೋಗ್ಯವನ್ನು ಹದಗೆಡಿಸುತ್ತಿದೆ.
ತೂಕ ಇಳಿಸಿಕೊಳ್ಳುವುದು ಹೇಗೆ ಎಂದು ಎಐ ಅಸಿಸ್ಟೆಂಟ್ ಕೇಳುವುದು, ಅಡುಗೆ ತಯಾರಿ, ಮನೆಯ ಅಲಂಕಾರ ಸೇರಿ ಪ್ರತಿಯೊಂದಕ್ಕೂ ಎಐ ಅಸಿಸ್ಟೆಂಟ್ ಅವಲಂಬಿಸಲಾಗುತ್ತಿದೆ. ಇನ್ನು ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆಯುತ್ತಿರುವ ಮಕ್ಕಳು ತಾರ್ಕಿಕ ಚಿಂತನೆ ಹಾಗೂ ಹಂತ ಹಂತದ ಯೋಚನಾ ಶಕ್ತಿಯ ಕುರಿತು ಇತ್ತೀಚೆಗಷ್ಟೇ ಪಿಎಚ್.ಡಿ ಪ್ರಬಂಧ ಪೂರ್ಣಗೊಳಿಸಿರುವ ಪ್ರಯೋಗ ಸಂಸ್ಥೆಯ ಶೈಕ್ಷಣಿಕ ಸಂಶೋಧಕಿ ಡಾ. ಎಂ.ಸಿ. ಕೃತಿಕಾ ಅವರು ಎಐ ಬಳಕೆಯಿಂದ ರಾಜ್ಯಾದ್ಯಂತ ಶಾಲಾ ಶಿಕ್ಷಣ ಮಟ್ಟದಲ್ಲಿ ಆತಂಕಕಾರಿ ಬದಲಾವಣೆಯನ್ನು ಗಮನಿಸಿರುವ ಅವರು, ತರಗತಿಗಳಲ್ಲಿ ಮಕ್ಕಳು ಯೋಚನಾ ಶಕ್ತಿಯನ್ನು ಕಳೆದುಕೊಳ್ಳುತ್ತಿರುವುದರ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
ಈ ಕುರಿತು ತಮ್ಮ ಅಭಿಪ್ರಾಯ ಹಂಚಿಕೊಂಡಿರುವ ಡಾ. ಕೃತಿಕಾ, ನಾವು ಹೇಳಿಕೊಡುವುದರಿಂದ ಮಕ್ಕಳು ಕಲಿಯುವುದಿಲ್ಲ, ಬದಲಾಗಿ ನಾವು ಮಾಡುವುದನ್ನು ನೋಡಿ ಕಲಿಯುತ್ತಾರೆ. ಯಾವುದೇ ಸಮಸ್ಯೆಯನ್ನು ಸ್ವಂತವಾಗಿ ಯೋಚಿಸಿ ಬಗೆಹರಿಸುವ ಮೊದಲೇ ಹಿರಿಯರು ಎಐ ತಂತ್ರಜ್ಞಾನದ ಮೊರೆ ಹೋದಾಗ, ಮಕ್ಕಳು ಅದನ್ನೇ ಜೀವನದ ಸಹಜ ನಿಯಮವೆಂದು ನಂಬುತ್ತಾರೆ. ಫೋನ್ ತಕ್ಷಣ ಉತ್ತರ ನೀಡುವಾಗ ನಾವೇಕೆ ಕಷ್ಟಪಟ್ಟು ಯೋಚಿಸಬೇಕು ಎಂಬ ಮನೋಭಾವ ಬೆಳೆಯುತ್ತದೆ. ಹಾಗಾಗಿ ಈ ಬಗ್ಗೆ ಪಾಲಕರು ಎಚ್ಚರವಹಿಸಬೇಕಿದೆ ಎಂದು ಸಲಹೆ ನೀಡಿದ್ದಾರೆ.
ಶೇ. 71.6 ಮಕ್ಕಳ ಯೋಚನೆ ಗಣಕೀಗೃತಗೊಂಡಿದೆ:
ಕರ್ನಾಟಕದ ಸರ್ಕಾರಿ ಮತ್ತು ಖಾಸಗಿ ಶಾಲೆಗಳ 4ನೇ ತರಗತಿಯ 554 ವಿದ್ಯಾರ್ಥಿಗಳನ್ನು ಅಧ್ಯಯನಕ್ಕೆ ಒಳಪಡಿಸಿರುವ ಡಾ. ಕೃತಿಕಾ, ಇದರೊಂದಿಗೆ ಮಕ್ಕಳ ಯೋಚನಾ ಶಕ್ತಿಯ ಪ್ರಸ್ತುತ ಸ್ಥಿತಿಗತಿಯನ್ನು ತೆರೆದಿಟ್ಟಿದ್ದಾರೆ. ಅಧ್ಯಯನದ ಪ್ರಕಾರ, ಶೇ. 71.6 ಮಕ್ಕಳ ಸರಾಸರಿ ಮಟ್ಟದ ಯೋಚನೆ ಗಣಕೀಕೃತಗೊಂಡಿದೆ. ಕೇವಲ ಶೇ. 15 ಮಕ್ಕಳು ಸ್ವಯಂ ಆಲೋಚನೆಯ ಮೂಲಕ ತನ್ನ ಜ್ಞಾನಮಟ್ಟವನ್ನು ವೃದ್ಧಿಸಿಕೊಳ್ಳುತ್ತಿದ್ದಾರೆ. ಶೇ. 13.4 ಮಕ್ಕಳು ಸ್ವಯಂ ಯೋಚಿಸುವುದರಲ್ಲಿ ತೀವ್ರ ಹಿಂದುಳಿಸಿದಾರೆ. ಅಂದರೆ ಈ ಮಕ್ಕಳಲ್ಲಿ ಕಲಿಯುವ ಪ್ರತಿಭೆ ಮತ್ತು ಸಾಮರ್ಥ್ಯ ಎರಡೂ ಇದೆ. ಆದರೆ ಆಸಕ್ತಿ ಕಳೆದುಕೊಳ್ಳುತ್ತಿದ್ದಾರೆ.
ಸಂಶೋಧನೆಯಲ್ಲಿ ಸ್ವಯಂ ಯೋಜನೆಯಲ್ಲಿ ತೀವ್ರ ಹಿಂದುಳಿದಿದ್ದ ಮಕ್ಕಳನ್ನು 12 ವಾರಗಳ ಕಾಲ ಸ್ಕ್ರೀನ್ ಹಾಗೂ ಮೊಬೈಲ್ ಪೋನ್‌ಗಳಿಂದ ಸಂಪೂರ್ಣ ದೊರವಿಡಲಾಯಿತು. ಬದಲಿಗೆ ಅವರಿಗೆ ಚಟುವಟಿಕೆ ಆಧಾರಿತ ಕೌಶಲ್ಯ ತರಬೇತಿ ನೀಡಲಾಯಿತು. ತರಬೇತಿ ಪಡೆದ ಮಕ್ಕಳು ಇತರೆ ಮಕ್ಕಳಿಗಿಂತ 6 ಪಟ್ಟು ವೇಗವಾಗಿ ತಮ್ಮ ಯೋಚನಾ ಸಾಮರ್ಥ್ಯವನ್ನು ಹೆಚ್ಚಿಸಿಕೊಂಡಿದ್ದಾರೆ. ಅಂದರೆ ಮಕ್ಕಳು ಕಲಿಯುವ ಸಾಮರ್ಥ್ಯ ಹೊಂದಿದ್ದು, ಅವರಿಗೆ ಸೂಕ್ತ ಅವಕಾಶ ಹಾಗೂ ಅರಿವಿನ ಕೊರತೆ ಇರುವುದು ಇದರಿಂದ ತಿಳಿದುಬಂದಿದೆ.

ಮಕ್ಕಳು ಉತ್ತಮವಾಗಿ ಯೋಚಿಸಬೇಕೆಂದರೆ, ಮೊದಲು ಶಿಕ್ಷಕರನ್ನು ಕೌಶಲ್ಯಗಳೊಂದಿಗೆ ಸಜ್ಜುಗೊಳಿಸಬೇಕು. ಭಾರತದ ಶಿಕ್ಷಣ ನೀತಿಯ ನಿರ್ದೇಶನವು ಈಗಾಗಲೇ ಸ್ಪಷ್ಟವಾಗಿದ್ದು, ರಾಷ್ಟ್ರೀಯ ಶಿಕ್ಷಣ ನೀತಿ 2020 ಶಾಲಾ ಹಂತದಿಂದಲೇ ಪರಿಕಲ್ಪನೆಗಳ ಸ್ಪಷ್ಟ ಗ್ರಹಿಕೆ, ಸಮಸ್ಯೆ ಪರಿಹಾರ, ವಿಮರ್ಶಾತ್ಮಕ ಚಿಂತನೆ ಹಾಗೂ ಕಂಪ್ಯೂಟೇಶನಲ್ ಥಿಂಕಿಂಗ್‌ಗೆ ಹೆಚ್ಚಿನ ಒತ್ತು ನೀಡಲು ಕರೆ ನೀಡಿದೆ. ರಾಷ್ಟ್ರೀಯ ಪಠ್ಯಕ್ರಮ ಸಾಮರ್ಥ್ಯ ಆಧಾರಿತ, ಅನುಭವಾತ್ಮಕ ಮತ್ತು ಕೌಶಲ್ಯಾಧಾರಿತ ಶಿಕ್ಷಣದತ್ತ ಸಾಗುವುದನ್ನು ಬಲವಾಗಿ ಪ್ರತಿಪಾದಿಸುತ್ತದೆ.

— - ಡಾ. ಎಂ.ಸಿ. ಕೃತಿಕಾ, ಶೈಕ್ಷಣಿಕ ಸಂಶೋಧಕಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net