ನೀರಾವರಿ ಬೆಳೆ ಬೆಳೆದು ಆರ್ಥಿಕವಾಗಿ ಸದೃಢವಾಗಿ

ಸೇಡಂ ತಾಲೂಕಿನ ಹಾಬಾಳ (ಟಿ)ದಲ್ಲಿ ಕೃಷಿಕ ಸಮಾಜದ ತಾಲೂಕು ಅಧ್ಯಕ್ಷ ಬಸವರಾಜ ರೇವಗೊಂಡ ರೈತರಿಗೆ ಉಚಿತ ಬೀಜ ವಿತರಣೆ ಮಾಡಿದರು. ವಿಶಾಲಕುಮಾರ, ಶಿವಕುಮಾರ ದೇಶಮುಖ, ಸತೀಶ ಪೂಜಾರಿ ಇತರರಿದ್ದರು.
ಸೇಡಂ ತಾಲೂಕಿನ ಹಾಬಾಳ (ಟಿ)ದಲ್ಲಿ ಕೃಷಿಕ ಸಮಾಜದ ತಾಲೂಕು ಅಧ್ಯಕ್ಷ ಬಸವರಾಜ ರೇವಗೊಂಡ ರೈತರಿಗೆ ಉಚಿತ ಬೀಜ ವಿತರಣೆ ಮಾಡಿದರು. ವಿಶಾಲಕುಮಾರ, ಶಿವಕುಮಾರ ದೇಶಮುಖ, ಸತೀಶ ಪೂಜಾರಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಕೃಷಿಕ ಸಮಾಜದ ತಾಲೂಕು ಅಧ್ಯಕ್ಷ ರೇವಗೊಂಡ ಕರೆ
  • > ಹಾಬಾಳ (ಟಿ) ಗ್ರಾಮದಲ್ಲಿ ಬೀಜ ವಿತರಣೆ
ಸೇಡಂ: ಸರ್ಕಾರವು ರೈತರ ಅನುಕೂಲಕ್ಕಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಕಾಗಿಣಾ ಹರಿಯುವ ಭಾಗದಲ್ಲಿ ನೀರಾವರಿ ಬೆಳೆ ಬೆಳೆಯಲು ಅವಕಾಶವಿದ್ದು, ರೈತರು ಸದುಪಯೋಗ ಪಡೆದುಕೊಂಡು ಆರ್ಥಿಕವಾಗಿ ಸದೃಢರಾಗಬೇಕು ಎಂದು ಕೃಷಿಕ ಸಮಾಜದ ತಾಲೂಕು ಅಧ್ಯಕ್ಷ ಬಸವರಾಜ ರೇವಗೊಂಡ ಹೇಳಿದರು.
ಹಾಬಾಳ (ಟಿ) ಗ್ರಾಮದಲ್ಲಿ ಕೃಷಿ ಇಲಾಖೆಯಿಂದ ರೈತರಿಗೆ ಉಚಿತವಾಗಿ ದ್ವಿದಳ ಧಾನ್ಯ ಬೀಜ ವಿತರಣೆ ಕಾರ್ಯಕ್ರಮಕ್ಕೆ ಗುರುವಾರ ಚಾಲನೆ ನೀಡಿ ಮಾತನಾಡಿ, ಹಿಂದಿನಿಂದಲೂ ನಾವು ಕೆಲ ಬೆಳೆಗಳ ಮೇಲೆ ಅವಲಂಬಿತರಾಗಿದ್ದೇವೆ. ಕಾಲ ಬದಲಾದಂತೆ ನಾವೆಲ್ಲರೂ ಬದಲಾಗಬೇಕು. ೇತ್ರದ ಶಾಸಕರಾದ ಸಚಿವ ಡಾ.ಶರಣಪ್ರಕಾಶ ಪಾಟೀಲ್​ ಅವರು ಕೋಟ್ಯಂತರ ರೂ. ಹಣ ವ್ಯಯಿಸಿ ಏತ ನೀರಾವರಿ ಯೋಜನೆ ಜಾರಿಗೊಳಿಸುವ ಮೂಲಕ ರೈತರ ಹೊಲಗಳಿಗೆ ನೀರು ತರುವ ಕೆಲಸ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಕಬ್ಬು ಸೇರಿ ವಾಣಿಜ್ಯ ಬೆಳೆ ಬೆಳೆಯಲು ರೈತರು ಮುಂದಾಗಬೇಕು ಎಂದರು.
ಕೃಷಿ ಇಲಾಖೆ ಅಧಿಕಾರಿ ಬಸವರಾಜ ಕೊಡಸಾ ಮಾತನಾಡಿ, ಆತ್ಮನಿರ್ಭರ ಪಲ್ಸ್​ ಅಭಿಯಾನ ಯೋಜನೆಯಡಿ ರೈತರಿಗೆ ಉಚಿತವಾಗಿ ತೊಗರಿ ಮತ್ತು ಉದ್ದು ಮಿನಿಕಿಟ್​ ಬೀಜಗಳನ್ನು ವಿತರಿಸಲಾಗುತ್ತಿದೆ. ದೇಶದಲ್ಲಿ ಮತ್ತು ರಾಜ್ಯದಲ್ಲಿ ದ್ವಿದಳ ಧಾನ್ಯಗಳ ಉತ್ಪಾದನೆಯನ್ನು ಹೆಚ್ಚಿಸಿ, ಸ್ವಾವಲಂಬನೆ (ಆತ್ಮನಿರ್ಭರತೆ) ಸಾಧಿಸುವ ಉದ್ದೇಶದಿಂದ ಕೃಷಿ ಇಲಾಖೆ ಮಹತ್ವದ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ತಿಳಿಸಿದರು.
ಸಹಾಯಕ ಕೃಷಿ ನಿರ್ದೇಶಕ ವಿಶಾಲಕುಮಾರ್​, ಪ್ರಮುಖರಾದ ಸತೀಶ ಪೂಜಾರಿ, ಶಿವಕುಮಾರ ದೇಶಮುಖ, ಇಕ್ಬಾಲ್​ ಪಟೇಲ್​ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net