ಗೊರುಚ ಪ್ರಶಸ್ತಿಗೆ ಕೃತಿಗಳ ಆಹ್ವಾನ

Gorucha
Gorucha
Published on

ಪ್ರಮುಖ ಮುಖ್ಯಾಂಶಗಳು

  • * ಶರಣ ಸಾಹಿತ್ಯ ’ ಮತ್ತು ‘ ಜನಪದ ಸಾಹಿತ್ಯ’
ಬೆಂಗಳೂರು: ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತುವತಿಯಿಂದ ಹಿರಿಯ ಸಾಹಿತಿ ಗೊ.ರು. ಚನ್ನಬಸಪ್ಪ ಅವರ ಹೆಸರಿನಲ್ಲಿ ‘ಶರಣ ಸಾಹಿತ್ಯ ’ ಮತ್ತು ‘ ಜನಪದ ಸಾಹಿತ್ಯ’ ಗಳಲ್ಲಿನ ಆಯ್ದ ಕೃತಿಗಳಿಗೆ ನೀಡಲಾಗುವ ‘ಗೊರುಚ ದತ್ತಿ ಪ್ರಶಸ್ತಿ’ಗೆ 2025ನೇ ಸಾಲಿನಲ್ಲಿ ಪ್ರಕಟವಾದ ಕೃತಿಗಳನ್ನು ಆಹ್ವಾನಿಸಲಾಗಿದೆ.
ಪ್ರಶಸ್ತಿಯು ತಲಾ 10 ಸಾವಿರ ನಗದು, ಪ್ರಶಸ್ತಿ ಲಕ ಒಳಗೊಂಡಿದೆ. ಲೇಖಕರು/ಸಂಪಾದಕರು ಕೃತಿಗಳ 3 ಪ್ರತಿಗಳನ್ನು ಸ್ವವಿವರಗಳೊಂದಿಗೆ ಮೇ 30ರೊಳಗೆ ಕಳುಹಿಸಬೇಕು ಎಂದು ಪರಿಷತ್ತು ಅಧ್ಯಕ್ಷ ಡಾ. ಸಿ. ಸೋಮಶೇಖರ ತಿಳಿಸಿದ್ದಾರೆ.
ವಿಳಾಸ: ಅಖಿಲ ಭಾರತ ಶೃಣ ಸಾಹಿತ್ಯ ಪರಿಷತ್ತು, ಜಗದ್ಗುರು ಶ್ರೀ ಶಿವರಾತ್ರೀಶ್ವರ ವೃತ್ತ, 1ನೇ ಮುಖ್ಯ ರಸ್ತೆ, ಜಯನಗರ 8ನೇ ವಿಭಾಗ, ಬೆಂಗಳೂರು - 560070.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net