ಶ್ರವಣಬೆಳಗೊಳದಲ್ಲಿ ನಿರ್ಮಾಣಗೊಂಡಿರುವ ಪ್ರಾಕೃತ ವಿಶ್ವವಿದ್ಯಾಲಯ, ನೂತನ ಭೋಜನ ಶಾಲೆ, ಹಾಗೂ ಆಡಿಟೋರಿಯಂ ಕಟ್ಟಡವನ್ನು ಉದ್ಘಾಟಿಸುವಂತೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಶಾಸಕ ಬಾಲಕೃಷ್ಣ ಮತ್ತು ಎಸ್‌ಡಿಜೆಎಂಐ ಮ್ಯಾನೇಜಿಂಗ್ ಕಮಿಟಿ ಟ್ರಸ್ಟ್ ಆಹ್ವಾನ ನೀಡಿತು. ಶ್ರೇಯಸ್ ಪಟೇಲ್, ಕೆ.ಎಂ.ಶಿವಲಿಂಗೇಗೌಡ ಇತರರಿದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಶ್ರೀ ಕ್ಷೇತ್ರ ಶ್ರವಣಬೆಳಗೊಳದಲ್ಲಿ ನಿರ್ಮಾಣಗೊಂಡಿರುವ ಪ್ರಾಕೃತ ವಿಶ್ವವಿದ್ಯಾಲಯ, ನೂತನ ಭೋಜನಶಾಲೆ ಮತ್ತು ಆಡಿಟೋರಿಯಂ ಕಟ್ಟಡ
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್
ಚನ್ನರಾಯಪಟ್ಟಣ: ತಾಲೂಕಿನ ಶ್ರೀ ಕ್ಷೇತ್ರ ಶ್ರವಣಬೆಳಗೊಳದಲ್ಲಿ ನಿರ್ಮಾಣಗೊಂಡಿರುವ ಪ್ರಾಕೃತ ವಿಶ್ವವಿದ್ಯಾಲಯ, ನೂತನ ಭೋಜನಶಾಲೆ ಮತ್ತು ಆಡಿಟೋರಿಯಂ ಕಟ್ಟಡಗಳನ್ನು ಲೋಕಾರ್ಪಣೆ ಮಾಡಲು ಆಗಮಿಸುವಂತೆ ಶ್ರವಣಬೆಳಗೊಳ ಕ್ಷೇತ್ರದ ಶಾಸಕ ಸಿ.ಎನ್.ಬಾಲಕೃಷ್ಣ ಮತ್ತು ಎಸ್‌ಡಿಜೆಎಂಐ ಮ್ಯಾನೇಜಿಂಗ್ ಕಮಿಟಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಆಹ್ವಾನ ನೀಡಿತು.
ಬೆಂಗಳೂರಿನ ಗೃಹಕಚೇರಿ ಕೃಷ್ಣದಲ್ಲಿ ಡಿಕೆಶಿ ಅವರನ್ನು ಭೇಟಿಯಾದ ಬಾಲಕೃಷ್ಣ ಮತ್ತು ಎಸ್‌ಡಿಜೆಎಂಐ ಮ್ಯಾನೇಜಿಂಗ್ ಕಮಿಟಿ, 2018ರ ಮಹಾಮಸ್ತಕಾಭಿಷೇಕ ಮಹೋತ್ಸವ ಸಂದರ್ಭದಲ್ಲಿ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರ ಅಪೇಕ್ಷೆಯಂತೆ ಅಂದಿನ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು 25 ಕೋಟಿ ರೂ. ಅನುದಾನ ಮಂಜೂರ ಮಾಡಿ ಪ್ರಾಕೃತ ವಿಶ್ವವಿದ್ಯಾಲಯದ ಕಟ್ಟಡ ನಿರ್ಮಾಣಕ್ಕೆ ಕಾರಣರಾಗಿದ್ದರು.
ಅಂತೆಯೇ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಅನುದಾನದಡಿ ನಿರ್ಮಾಣಗೊಂಡಿರುವ ನೂತನ ಭೋಜನಶಾಲೆ ಹಾಗೂ ಆಡಿಟೋರಿಯಂ ನಿರ್ಮಾಣ ಕಾರ್ಯ ಮುಗಿದಿದ್ದು, ಈ ಮೂರೂ ಯೋಜನೆಗಳು ಶಿಕ್ಷಣ, ಸಂಸ್ಕೃತಿ ಮತ್ತು ಧಾರ್ಮಿಕ ಪರಂಪರೆಯ ಮೇಲಿನ ಬದ್ಧತೆಗೆ ಸಾಕ್ಷಿಯಾಗಿವೆ. ಹಾಗಾಗಿ ಈ ಮೂರೂ ಕಟ್ಟಡಗಳ ಉದ್ಘಾಟನೆ ಮಾಡಬೇಕೆಂದು ಕಮಿಟಿ ವಿನಂತಿ ಮಾಡಿತು.