ಮಕ್ಕಳಿಗೆ ಸಾಧಕರ ಬದುಕನ್ನು ಪರಿಚಯಿಸಿ

ಕಿಕ್ಕೇರಿಯಲ್ಲಿ ಆದರ್ಶ ಸುಗಮ ಸಂಗೀತಾ ಅಕಾಡೆಮಿ, ಕನ್ನಡ ಕಲಾ ಸಂಘದಿಂದ ಮಂಗಳವಾರ  ಮರೆಯಲಾಗದ ಮಹನೀಯರು ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಿಕ್ಕೇರಿ ಕೃಷ್ಣಮೂರ್ತಿ, ಮಾದಾಪುರ ಸುಬ್ಬಣ್ಣ, ವೆಂಕಟೇಶ್, ವಕೀಲ ರಾಜೇಶ್ ಮತ್ತಿತರರಿದ್ದರು.
ಕಿಕ್ಕೇರಿಯಲ್ಲಿ ಆದರ್ಶ ಸುಗಮ ಸಂಗೀತಾ ಅಕಾಡೆಮಿ, ಕನ್ನಡ ಕಲಾ ಸಂಘದಿಂದ ಮಂಗಳವಾರ ಮರೆಯಲಾಗದ ಮಹನೀಯರು ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಿಕ್ಕೇರಿ ಕೃಷ್ಣಮೂರ್ತಿ, ಮಾದಾಪುರ ಸುಬ್ಬಣ್ಣ, ವೆಂಕಟೇಶ್, ವಕೀಲ ರಾಜೇಶ್ ಮತ್ತಿತರರಿದ್ದರು.
Published on
ಕಿಕ್ಕೇರಿ: ನಾಡು ನುಡಿಗೆ ಜೀವ ಮುಡಿಪಾಗಿಸಿದ ಮಹಾನೀಯರ ಕುರಿತು ಮಕ್ಕಳಿಗೆ ತಿಳಿಸಿದರೆ ನಾಡು, ನುಡಿ ಸುಭದ್ರವಾಗಲಿದೆ ಎಂದು ಆದರ್ಶ ಸುಗಮ ಸಂಗೀತ ಅಕಾಡೆಮಿ ಅಧ್ಯಕ್ಷ ಗಾಯಕ ಡಾ. ಕಿಕ್ಕೇರಿ ಕೃಷ್ಣಮೂರ್ತಿ ಅಭಿಪ್ರಾಯಪಟ್ಟರು.

ಪಟ್ಟಣದಲ್ಲಿ ಆದರ್ಶ ಸುಗಮ ಸಂಗೀತಾ ಅಕಾಡೆಮಿ, ಕನ್ನಡ ಕಲಾ ಸಂಘದಿಂದ ಮಂಗಳವಾರ ಆಯೋಜಿಸಿದ್ದ ಮರೆಯಲಾಗದ ಮಹನೀಯರು ಕಾರ್ಯಕ್ರಮದಲ್ಲಿ ಮಾತನಾಡಿದರು.

ಕವಿ, ಸಾಹಿತಿಗಳ ಕಾವ್ಯ, ಗೀತೆಗಳ ಸಾರ ತಿಳಿದರೆ ಇಡೀ ನಾಡು ಸಂಸ್ಕೃತಿಯ ಬೀಡಾಗಲಿದೆ. ಪು.ತಿ.ನ ಅವರು ಕೃಷ್ಣಲೀಲೆಯನ್ನು ರಂಗಭೂಮಿಗೆ ಗೀತನಾಟಕದ ಮೂಲಕ ಪರಿಚಯಿಸಿದರು. ಸಂತ ಕವಿ ಶಿಶುನಾಳ ಷರೀಫರ ಗೀತೆಗಳನ್ನು ಮನೆಮನಗಳಿಗೆ ತಲುಪಿಸಿದ ಕೀರ್ತಿ ಡಾ. ಎನ್.ಎಸ್. ನಾರಾಯಣಭಟ್ಟ ಹಾಗೂ ಸಿ.ಎಸ್ ಅಶ್ವತ್ಥ್‌ಗೆ ಸಲ್ಲುತ್ತದೆ. ಸಾಹಿತ್ಯ ಪ್ರಪಂಚದಲ್ಲಿ ಸುಜನಾ, ಅಕ್ಕಿಹೆಬ್ಬಾಳಿನ ಅ.ರಾ.ಮಿತ್ರ, ಅ.ನಾ. ಸುಬ್ಬರಾವ್, ರಂಗಕರ್ಮಿ ಎ.ಎಸ್. ಮೂರ್ತಿ ಕೊಡುಗೆ ಅಪಾರವಾಗಿದೆ. ಕಿಕ್ಕೇರಿಯ ಮೈಸೂರು ಮಲ್ಲಿಗೆ ಕವಿ ಕೆ.ಎಸ್.ನರಸಿಂಹಸ್ವಾಮಿ, ಸಾಹಿತ್ಯಲೋಕದ ಕಿಕ್ಕೇರಿ ನಾರಾಯಣ್, ಚಲನಚಿತ್ರ ನಿರ್ದೇಶಕ ಕೆ.ಎಸ್.ಎಲ್. ಸ್ವಾಮಿ ಕೊಡುಗೆ ಅನನ್ಯವಾಗಿದೆ. ಇಂತಹ ಮಹಾನೀಯರ ಪರಿಚಯವನ್ನು ಎಳೆಯ ಮನಸ್ಸಿಗೆ ತುಂಬಿದರೆ ಕನ್ನಡ ನಾಡು, ನುಡಿ ಶಾಶ್ವತವಾಗಿ ಉಳಿಯಲಿದೆ ಎಂದರು.

ರತ್ನತ್ರಯಗಳಾದ ರನ್ನ, ಪೊನ್ನ, ಪಂಪ, ಕುಮಾರವ್ಯಾಸರು ಹಳಗನ್ನಡ ಸಾಹಿತ್ಯಲೋಕದ ಪಿತಾಮಹಾರಾದರೆ, ನವ್ಯಕಾಲಕ್ಕೆ ಅಡಿಗರು, ಕೆ.ಎಸ್.ನ, ಕುವೆಂಪು, ದ.ರಾ. ಬೇಂದ್ರೆ, ನಿಸಾರ್ ಅಹಮದ್, ಜಿ.ಎಸ್.ಶಿವರುದ್ರಪ್ಪ ಹೊಸ ಮೆರಗು ನೀಡಿ ಯುವ ಸಾಹಿತಿಗಳಿಗೆ ದಾರಿದೀಪವಾಗಿದ್ದಾರೆ ಎಂದರು.

ಸಮಾಜ ಸೇವಕ ಮಾದಾಪುರ ಸುಬ್ಬಣ್ಣ ಮಹನೀಯರ ವ್ಯಕ್ತಿಗಳ ಕಿರುಪರಿಚಯ ಮಾಡಿಕೊಟ್ಟರು. ಪರಿಸರಪ್ರೇಮಿ ಊಗಿನಹಳ್ಳಿ ವೆಂಕಟೇಶ್ ಗಿಡ ವಿತರಿಸಿದರು. ವಕೀಲ ರಾಜೇಶ್ ಸಾಹಿತ್ಯದ ಅವಲೋಕನ ಮಾಡಿದರು. ಕುವೆಂಪು ವಿರಚಿತ ನಾಡಗೀತೆ, ಕನ್ನಡವೇ ಸತ್ಯ, ಕನ್ನಡವೇ ನಿತ್ಯ, ಬಾ ಇಲ್ಲಿ ಸಂಭವಿಸು, ಕೆ.ಎಸ್.ನ. ಅವರ ನಾವು ಭಾರತೀಯರು ಮತ್ತಿತರ ಗೀತೆಗಳಿಗೆ ಗಾಯಕ ಕಿಕ್ಕೇರಿ ಅವರೊಂದಿಗೆ ಮಕ್ಕಳು ಹಾಡಿ ಸಂಭ್ರಮಿಸಿದರು. ಸ್ಪಂದನಾ ಟ್ರಸ್ಟ್‌ನ ಟ್ರಸ್ಟಿ ತ್ರಿವೇಣಿ, ಕವಿತಾ, ಕೆ.ವಿ.ನಾಗರತ್ನ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net