ಬೆಳಗಾವಿ: ನಗರದ ವಿವಿಧೆಡೆ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಅಂತಾರಾಜ್ಯ ಕಳ್ಳನನ್ನು ಬಂಧಿಸಿರುವ ಟಿಳಕವಾಡಿ ಠಾಣೆ ಪೊಲೀಸರು ಒಟ್ಟು 13.22 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕರಗಿಸಿದ್ದ ಗಟ್ಟಿ ಬಂಗಾರ ವಶಪಡಿಸಿಕೊಂಡಿದ್ದಾರೆ. ಮೂಲತ@ ಹೈದರಾಬಾದ್ ಜಿಲ್ಲೆಯ ನಾಮಪಲ್ಲಿ, ಗೋವಾ ನಿವಾಸಿ ಜಮಶೇದಖಾನ್ ಖಲೀಲ್ ಖಾನ್ (41) ಬಂಧಿತ. ಈತ ಶಾಂತಿನಗರದ ಎರಡು ಮನೆ, ಉದ್ಯಮಬಾಗ ಠಾಣೆ ವ್ಯಾಪ್ತಿಯ ಚಿದಂಬರ ನಗರದ ಒಂದು ಮನೆಯಲ್ಲಿ ಕಳ್ಳತನ ಮಾಡಿದ್ದ. ಈತನಿಂದ ಒಟ್ಟು 115 ಗ್ರಾಂ ಚಿನ್ನ, ಒಂದು ಸ್ಕೂಟರ್, ಎರಡು ಮೊಬೈಲ್ ಸಹಿತ ಒಟ್ಟು 13.50 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ.