ತೂಬಗೆರೆ ನಾಡಕಚೇರಿಯಲ್ಲಿ ಇಂಟರ್​ನೆಟ್​ ಕಡಿತ / TUBAGERE

ತೂಬಗೆರೆ ನಾಡಕಚೇರಿಯಲ್ಲಿ ವಿವಿಧ ಅರ್ಜಿ ಸಲ್ಲಿಸಲು ಸಾಲು ನಿಂತಿರುವ ಜನ.
ತೂಬಗೆರೆ ನಾಡಕಚೇರಿಯಲ್ಲಿ ವಿವಿಧ ಅರ್ಜಿ ಸಲ್ಲಿಸಲು ಸಾಲು ನಿಂತಿರುವ ಜನ.
Published on
ತೂಬಗೆರೆ : ದೊಡ್ಡಬಳ್ಳಾಪುರ ತಾಲೂಕಿನ ತೂಬಗೆರೆ ನಾಡಕಚೇರಿಯಲ್ಲಿ ತಿಂಗಳಲ್ಲಿ 15 ದಿನ ಇಂಟರ್​ನೆಟ್​ ಸಂಪರ್ಕ ಕಡಿತವಾಗುತ್ತಿದ್ದು, ರೈತರಿಗೆ ಪಹಣಿ, ಜಾತಿ, ಆದಾಯ ಪ್ರಮಾಣಪತ್ರ ಹಾಗೂ ಇನ್ನಿತರ ಸೌಲಭ್ಯಗಳ ಪಡೆಯಲು ಪರದಾಡುವಂತಾಗಿದೆ.
ಮಂಗಳವಾರವೂ ಇಂಟರ್​ ನೆಟ್​ ಸೌಲಭ್ಯ ಇಲ್ಲದಿರುವುದು ಗೊತ್ತಿಲ್ಲದೆ ಬಂದ ಹಲವರು ಅಧಿಕಾರಿಗಳಿಗೆ ಹಿಡಿಶಾಪ ಹಾಕಿಕೊಂಡು ಹೋಗುತ್ತಿದ್ದ ದೃಶ್ಯಕಂಡುಬಂತು. ನಾಡಕಚೇರಿಯಲ್ಲಿ ರೈತರಿಗೆ ಒಂದಲ್ಲಾ ಒಂದು ಸಮಸ್ಯೆ ಎದುರಾಗುತ್ತಿದೆ. ಅದರಲ್ಲಿಯೂ ಪಹಣಿ, ಜಾತಿ, ಆದಾಯ ಪ್ರಮಾಣ ಪತ್ರ ಸೇರಿ ಇತರ ದಾಖಲೆ ಪಡೆಯಲು ಪರದಾಟ ತಪು$್ಪತ್ತಿಲ್ಲ. ಯಾವುದೇ ಕೆಲಸಕ್ಕೂ ಇಂಟರ್​ನೆಟ್​ ಸೌಲಭ್ಯ ಬೇಕೇಬೇಕು, ಅದರೆ ಇದರ ಬಗ್ಗೆ ಅಧಿಕಾರಿಗಳಿಗೆ ಪ್ರಶ್ನೆ ಮಾಡಿದರೆ ಸರಿಪಡಿಸುತ್ತೇವೆ...ಎಂಬ ಉದಾಸೀನದ ಮಾತು ಹೇಳುತ್ತಾರೆ. ದಿಢೀರ್​ ಇಂಟರ್​ನೆಟ್​ ಸಮಸ್ಯೆ ಕಾಣಿಸಿಕೊಂಡಿದೆ. ಮುಕ್ಕಿಡಿಗಟ್ಟ, ಕಲ್ಕುಕೋಟೆ, ಚಿಕ್ಕ ಮುದ್ದೇನಹಳ್ಳಿ, ಕಮಲೂರು, ಮೇಳೆಕೋಟೆ, ಹಾಡೋನಹಳ್ಳಿ, ಇನ್ನು ಅನೇಕ ಹಳ್ಳಿಗಳಿಂದ ರೈತರು ಪಹಣಿ, ಜಾತಿ -ಆದಾಯ ಪ್ರಮಾಣ ಪತ್ರ, ವಾಸಸ್ಥಳ, ಅಂಗವಿಕಲ, ವೃದ್ಧಾಪ್ಯ ವೇತನಕ್ಕಾಗಿ ಅರ್ಜಿ ಸಲ್ಲಿಸಲು ಇನ್ನಿತರ ನಾನಾ ಅರ್ಜಿಗಳನ್ನು ಸಲ್ಲಿಸಲು ಬಂದು ವಾಪಸ್​ ಹೋಗುವಂತಾಗಿದೆ.
ಇಂಟರ್​ನೆಟ್​ ಕೈಕೊಟ್ಟು ಹತ್ತಾರು ದಿನಗಳಾದರೂ ನೆಟ್​ವರ್ಕ್​ ಸಾಮರ್ಥ್ಯ ಕಡಿಮೆ ಇರುವುದರಿಂದ ಕೆಲಸ ನಿಧಾನಗತಿಯಲ್ಲಿ ಸಾಗಿದೆ. ಹೀಗಾಗಿ ಅರ್ಜಿ ವಿಲೇವಾರಿ ವಿಳಂಬವಾಗುತ್ತಿದೆ. ಇದರಿಂದಾಗಿ ದೂರದ ಊರುಗಳಿಂದ ಬರುವ ಸಾರ್ವಜನಿಕರು ತೀವ್ರ ತೊಂದರೆಗೊಳಗಾಗಿದ್ದಾರೆ.

ನಮ್ಮ ಮನೆಯಲ್ಲಿ ಕೂಡ 10 ದಿನಗಳಿಂದ ಇಂಟರ್​ನೆಟ್​ ಕಟ್ಟಾಗಿ ಸಮಸ್ಯೆ ಆಗಿದೆ. ಎಲ್ಲ ಅಧಿಕಾರಿಗಳಿಗೂ ಫೋನ್​ ಮಾಡಿದರು ಸಹ ಇವತ್ತು ಸರಿಪಡಿಸುತ್ತೇನೆ ನಾಳೆ ಸರಿಪಡಿಸುತ್ತೇನೆ ಎನ್ನುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net