ಒಳಮೀಸಲಾತಿ ಸಮರ್ಪಕವಾಗಿ ಜಾರಿಯಾಗಲಿ

Internal reservation should be implemented properly.
Internal reservation should be implemented properly.
Published on
ಬುಕ್ಕಾಪಟ್ಟಣ: ಮೀಸಲಾತಿ ಎಂಬುದು ನಮ್ಮ ಬೇಡಿಕೆಯಲ್ಲ, ಅದು ನಮ್ಮ ಹಕ್ಕು. ಒಳಮೀಸಲಾತಿ ಸಮರ್ಪಕವಾಗಿ ಜಾರಿಯಾಗುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಡಿಎಸ್‌ಎಸ್ ಮುಖಂಡ ತಿಪ್ಪೇಶ್ ತಿಳಿಸಿದರು.
ಶಿರಾ ತಾಲೂಕಿನ ಬುಕ್ಕಾಪಟ್ಟಣದ ಬಸ್‌ನಿಲ್ದಾಣದಲ್ಲಿ ಆಯೋಜಿಸಿದ್ದ ಅಂಬೇಡ್ಕರ್ ಹಾಗೂ ಬಾಬು ಜಗಜೀವನ ರಾಮ್ ಜಯಂತಿಯಲ್ಲಿ ಮಾತನಾಡಿ, ಅನಾದಿ ಕಾಲದಿಂದಲೂ ಸವರ್ಣೀಯರ ಕೈ ಕೆಳಗೆ ಕೆಲಸ ವಾಡಿಕೊಂಡು, ಅವರ ಸೇವೆ ವಾಡಿಕೊಂಡು ಬಂದಿರುವ ದಲಿತರು ಇಂದು ತಮ್ಮ ಮುಂದಿನ ಪೀಳಿಗೆಯ ಭವಿಷ್ಯಕಕ್‌ಆಗಿ ಮೀಸಲಾತಿಯ ಬೇಡಿಕೆ ಇಡುತ್ತಿದ್ದಾರೆ. ಒಳಮೀಸಲಾತಿ ಸಮರ್ಪಕವಾಗಿ ಜಾರಿಯಾಗುವವರೆಗೂ ಅವಿರತ ಹೋರಾಟ ವಾಡಲಾಗುವುದು. ಎಲ್ಲ ಪಕ್ಷದ ಮುಖಂಡರು ಇದಕ್ಕೆ ಕೈಜೋಡಿಸಬೇಕು ಎಂದು ತಿಳಿಸಿದರು.
ಬಿಲ್ ಕಲೆಕ್ಟರ್ ನಾಗರಾಜು, ಶಶಿಧರ, ಗ್ರಾಪಂ ವಾಜಿ ಸದಸ್ಯರಾದ ಬಿ ಎಂ.ಕಾಂತರಾಜು, ರಂಗಶ್ಯಾಮಯ್ಯ, ಪ್ರಭಾಕರ್, ಕುವಾರ್, ನಾಗೇಂದ್ರ ಪ್ರಸಾದ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net