ಪಟ್ಟಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅವಳಿ ಪಟ್ಟಣದಲ್ಲಿ ಘನತ್ಯಾಜ್ಯ ನಿರ್ವಾಹಣ ನಿಯಮಗಳು 2026ರ ನಿಯಮಕ್ಕೆ ಬದ್ಧರಾಗಿ ಪರಿಸರ ಮತ್ತು ನೈರ್ಮಲ್ಯ ಸ್ವಚ್ಚತೆಗೆ ಕೊಡುಗೆ ನೀಡಬೇಕು. ನಿತ್ಯ 100 ಕೆ.ಜಿ ಯಷ್ಟು ಅಥವಾ ಹೆಚ್ಚಿನ ತ್ಯಾಜ್ಯ ಉತ್ಪಾದಕರು 20000 ಚ. ಮಿ ಗಿಂತ ಹೆಚ್ಚು ಸ್ಥಳ ಹೊಂದಿದ ಉದ್ಯಮದಾರರು, ಪ್ರತಿ ದಿನ 40,000 ಲೀ. ನೀರು ಉಪಯೋಗ ಮಾಡುವ ವ್ಯಾಪಾರಿಗಳು ತಮ್ಮಿಂದ ಉತ್ಪತ್ತಿಯಾಗುವ ತ್ಯಾಜ್ಯವನ್ನು ತಾವೇ ಸ್ವತಃ ವೈಜ್ಞಾನಿಕವಾಗಿ ವಿಲೇವಾರಿ ಮಾಡಬೇಕಾಗಿದೆ. ಇಲ್ಲವಾದಲ್ಲಿ ಪುರಸಭೆಯಿಂದ ವಿಲೇವಾರಿ ಮಾಡಬೇಕಾದರೇ ಬಳಕೆದಾರರು ಶುಲ್ಕವನ್ನು ಪಾವತಿಸಬೇಕು. ತಪ್ಪಿದಲ್ಲಿ ಅಂತಹವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಕಟಣೆ ಮೂಲಕ ಎಚ್ಚರಿಸಿದ್ದಾರೆ.