2022ರಲ್ಲಿ ವಾಟರ್ ಬೆಲ್ ನಿಯಮ ಜಾರಿಗೆ ಬಂದಿತ್ತು. ಆದರೆ, ಆ ಬಳಿಕ ಈ ನಿಯಮ ಮರೆಯಾಗಿತ್ತು. ಈ ಹಿನ್ನೆಲೆಯಲ್ಲಿ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಪತ್ರ ಬರೆದು ನಿಯಮ ಜಾರಿಗೆ ಒತ್ತಾಯಿಸಿತ್ತು. ಇದೀಗ ನಿಯಮವನ್ನು ಮತ್ತೆ ಪರಿಚಯಿಸಲಾಗಿದೆ.10:35, ಮಧ್ಯಾಹ್ನ 12 ಮತ್ತು 2 ಗಂಟೆಗೆ ವಾಟರ್ ಬೆಲ್ ಬಾರಿಸಲು ಸೂಚನೆ ನೀಡಲಾಗಿದ್ದು, ಅದನ್ನೇ ಪಾಲಿಸುವಂತೆ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.