ಶಾಸಕರ ಭವನಕ್ಕೆ ಮಂಚ, ಟೇಬಲ್, ಸೇಫ್ ಲಾಕರ್, ಡೋರ್ ಲಾಕರ್, ಹಾಸು ಹೊದಿಕೆ, ಕಾರ್ಪೆಟ್, ಸುಣ್ಣ-ಬಣ್ಣ ಮತ್ತು ಮಸಾಜ್ ಪಾರ್ಲರ್ ಖರೀದಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, 2 ತಿಂಗಳು ಹಿಂದೆಯಷ್ಟೇ ಆರೋಪಿಸಿದ್ದರು. ವಿಧಾನಸಭಾಧ್ಯಕ್ಷರ ಕಾರ್ಯಾಲಯದ ಎಲ್ಲ ಟೆಂಡರ್‌ಗಳು ಮಂಗಳೂರು ಮೂಲದವರಿಗೆ ಸಿಗುತ್ತಿದೆ. ಹಲವು ಖರೀದಿ ಟೆಂಡರ್‌ಗಳನ್ನು ಆರ್ಥಿಕ ಇಲಾಖೆ ತಿರಸ್ಕರಿಸಿತ್ತು. ಆದರೂ, ದುಂದುವೆಚ್ಚ ವ್ಯಯಿಸಿ ಸಾಮಗ್ರಿ ಖರೀದಿಸಲಾಗಿದೆ. ವಿಧಾನಸೌಧ ಸಭಾಂಗಣಕ್ಕೆ ಹೊಸ ಟಿವಿ ಸೆಟ್ ಅಳವಡಿಸಿದ್ದರೂ ಎಐ ಮಾನಿಟರ್ ಹಾಕಲು ದುಬಾರಿ ಮೊತ್ತ ಖರ್ಚು ಮಾಡಲಾಗಿದೆ ಎಂದು ಗಂಭೀರ ಆರೋಪ ಮಾಡಿದ್ದರು.