ಪಾಲಿಟೆಕ್ನಿಕ್​ ಕಟ್ಟಡ ಕಾಮಗಾರಿ ಪರಿಶೀಲನೆ

Inspection of polytechnic building work
Inspection of polytechnic building work
Published on
ಚಿಂತಾಮಣಿ: ನಗರದ ಸರ್ಕಾರಿ ಪಾಲಿಟೆಕ್ನಿಕ್​ನ ಕಟ್ಟಡ ಕಾಮಗಾರಿಯನ್ನು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್​ ಪರಿಶೀಲಿಸಿದರು.
ಮೈಸೂರಿನ ಜಯಚಾಮರಾಜೇಂದ್ರ ಒಡೆಯರ್​ ನಿಮಾರ್ಣ ಮಾಡಿರುವ ಸರ್ಕಾರಿ ಪಾಲಿಟೆಕ್ನಿಕ್​ ಕಟ್ಟಡ ಸಂಪೂರ್ಣ ಅವಸಾನದ ಅಂಚಿಗೆ ತಲುಪಿದ ಪರಿಣಾಮ ಸಚಿವ ಡಾ.ಎಂ.ಸಿ.ಸುಧಾಕರ್​ ಹಳೇ ಕಟ್ಟಡಗಳನ್ನು ತೆರವುಗೊಳಿಸಿ ಕಟ್ಟಡಗಳ ನಿಮಾರ್ಣಕ್ಕೆ ಮುಂದಾಗಿದ್ದು, 26 ಕೋಟಿ ರೂ.ವೆಚ್ಚದಲ್ಲಿ ಕಟ್ಟಡ ನಿಮಾರ್ಣವಾಗಲಿದೆ.
2ನೇ ಹಂತದಲ್ಲಿ 50 ಕೋಟಿ ರೂ. ವೆಚ್ಚದಲ್ಲಿ ಕಟ್ಟಡ ನಿಮಾರ್ಣ ಕಾಮಗಾರಿಗೆ ಚಾಲನೆ ದೊರಕಿಸಿದ್ದು, ಪಾಲಿಟೆಕ್ನಿಕ್​ನ ಪ್ರವೇಶದ್ವಾರ, ಕಟ್ಟಡ ಸೇರಿ ಇತರ ಹಳೇ ಕಟ್ಟಡಗಳನ್ನು ನೆಲಸಮ ಮಾಡಿ ಕಾಮಗಾರಿಯನ್ನು ಕೈಗೆತ್ತಿಕೊಂಡಿದ್ದು, ಇಂಜಿನಿಯರ್​ ಮತ್ತು ಗುತ್ತಿಗೆದಾರರೊಂದಿಗೆ ಸಚಿವ ಡಾ.ಎಂ.ಸಿ.ಸುಧಾಕರ್​ ನಿಮಾರ್ಣ ಕಾಮಗಾರಿಗಳನ್ನು ಪರಿಶೀಲಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net