ರಾಮದುರ್ಗ: ಮಹಿಳೆಯರ ಮೇಲಿನ ಶೋಷಣೆ ನಿಯಂತ್ರಿಸಲು ಅನೇಕ ಕಠಿಣ ಕಾನೂನುಗಳಿದ್ದರೂ, ಅವ್ಯಾಹತವಾಗಿ ಅತ್ಯಾಚಾರ&ದೌರ್ಜನ್ಯ ಪ್ರಕರಣ ನಡೆಯುತ್ತಲಿವೆ. ಅವುಗಳ ವಿರುದ್ಧ ಜಾಗತಿ ಮೂಡಿಸುತ್ತಿರುವ ಕಾರ್ಯ ಶ್ಲಾನೀಯ ಎಂದು ವಕೀಲೆ ರೂಪಾ ಅಮಟೂರ ಹೇಳಿದರು.
ನಗರದ ಸರ್ಕಾರಿ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಇನ್ನರ್ವೀಲ್ ಸಂಸ್ಥೆ ಆಶ್ರಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಮಹಿಳಾ ಶೋಷಣೆ ತಡೆಗಟ್ಟುವ ಜಾಗತಿ ಅಭಿಯಾನ ಉದ್ಘಾಟಿಸಿ ಮಾತನಾಡಿದರು.
ಪ್ರಾಚಾರ್ಯ ಡಿ.ಡಿ.ಮುಜಾವರ್, ಪಿಎಸ್ಐ ಸವಿತಾ ಮುನ್ಯಾಳ ಮಾತನಾಡಿ, ಎಲ್ಲ ವಿದ್ಯಾರ್ಥಿನಿಯರು ಮಾನಸಿಕವಾಗಿ ಸದಢವಾಗಿದ್ದರೆ ಮಾತ್ರ ಎದುರಾಗುವ ದೌರ್ಜನ್ಯ ತಡೆಗಟ್ಟಲು ಸಾಧ್ಯ ಎಂದರು.
ಇನ್ನರ್ವೀಲ್ ಸಂಸ್ಥೆಯ ಸ್ಥಳಿಯ ಉಪಾಧ್ಯೆ ಲೀಲಾವತಿ ಆರಿಬೆಂಚಿ, ಹೇಮಲತಾ ಕಲ್ಯಾಣಿ, ಡಾ.ರಾಜೇಶ್ವರಿ ಆಪ್ಟೆ, ಉಮಾ ನೇಮಗೌಡರ, ಇನ್ನರ್ವೀಲ್ ಸಂಸ್ಥೆಯ ಸ್ಥಳಿಯ ಅಧ್ಯೆ ಸುಲೋಚನಾ ಯಾದವಾಡ, ಕಾರ್ಯದರ್ಶಿ ವಿಶಾಲಾ ಚಿಕ್ಕೋಡಿ, ಸುಷ್ಮಾ ಯಾದವಾಡ ಇತರರಿದ್ದರು.