ತುಮುಲ್​ ಚುನಾವಣೆಯಲ್ಲಿ ಅನ್ಯಾಯ

Injustice in Tumul elections
Injustice in Tumul elections
Published on
ಮಧುಗಿರಿ: ತುಮುಲ್​ ನಿರ್ದೇಶಕರ ಚುನಾವಣೆಯಲ್ಲಿ ಈ ಸರ್ಕಾರದಲ್ಲಿ ನನಗೆ ಅನ್ಯಾಯವಾಗಿತ್ತು. ಆದರೆ, ನ್ಯಾಯಾಲಯದಲ್ಲಿ ಜಯ ದೊರೆತಿದೆ ಎಂದು ತುಮುಲ್​ ನಿರ್ದೇಶಕ ಕೊಂಡವಾಡಿ ಚಂದ್ರಶೇಖರ್​ ತಿಳಿಸಿದರು.
ಪಟ್ಟಣದ ತುಮುಲ್​ ಉಪಕೇಂದ್ರ ಕಚೇರಿಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳೆದ ಒಂದೂವರೆ ವರ್ಷದಿಂದ ಬಹಳಷ್ಟು ಏಳು ಬೀಳು ಕಂಡಿದ್ದೇನೆ. ತುಮುಲ್​ ನಿರ್ದೇಶಕರ ಚುನಾವಣೆಯಲ್ಲಿ ಸೋಲುವಂತಿರಲಿಲ್ಲ. ಆದರೂ ಸೋತೆ, ನನಗೆ ಅನ್ಯಾಯವಾಯಿತು. ಚುನಾವಣೆ ಫಲಿತಾಂಶ ಏನು ಎಂಬುದು ಡೇರಿ ಕಾರ್ಯದರ್ಶಿಗಳಿಗೆ ಗೊತ್ತು. ಅರ್ಹ ಮತದಾರರ ಪಟ್ಟಿ (ಡೆಲಿಗೇಟ್ಸ್​ ಫಾಮ್​ರ್) ರಾತ್ರೋರಾತ್ರಿ ಮಾಯವಾಗಿತ್ತು.
ನಮ್ಮನ್ನು ಅನರ್ಹ ಮತದಾರರ ಪಟ್ಟಿಗೆ ಸೇರಿಸಲಾಯಿತು. ಕೊನೆಗೆ ಹೈಕೋರ್ಟ್​ಗೆ ಹೋಗಿ ಮತದಾನದ ಹಕ್ಕು ಪಡೆಯಲಾಯಿತು. ನನ್ನ ದುರದೃಷ್ಟಕ್ಕೆ ನನ್ನ ಜತೆ ನನ್ನ ಎದುರಾಳಿಗೂ (ನಾಗೇಶ್​ ಬಾಬು) ಮತದಾನದ ಹಕ್ಕು ನೀಡಲಾಯಿತು. ನನ್ನ ಎದುರಾಳಿಗೆ ಅಂದೇ ಮತದಾನದ ಹಕ್ಕು ನೀಡದೇ ಇದ್ದಿದ್ದರೆ ಪ್ರಕರಣ ಇಲ್ಲಿಯವರೆಗೂ ಬರುತ್ತಲೇ ಇರಲಿಲ್ಲ ಎಂದರು.
ಪುರಸಭೆ ಮಾಜಿ ಸದಸ್ಯ ಎಂ.ಆರ್​. ಜಗನ್ನಾಥ್​ ಮಾತನಾಡಿದರು. ಇದಕ್ಕೂ ಮೊದಲು ಪಟ್ಟಣದ ದಂಡಿನಮಾರಮ್ಮ ದೇವಿಗೆ ಪೂಜೆ ಸಲ್ಲಿಸಿ ನಂತರ ಕಾರ್ಯಕರ್ತರೊಂದಿಗೆ ದೇವಸ್ಥಾನದಿಂದ ತುಮುಲ್​ ಉಪ ಕಚೇರಿಯವರೆಗೂ ಬೃಹತ್​ ಬೈಕ್​ ರ್ಯಾಲಿ ಮೂಲಕ ತೆರಳಿ ಕಚೇರಿಯಲ್ಲಿ ಪೂಜೆ ಸಲ್ಲಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net