ಆದರೆ, ಮೇಲ್ಮನವಿದಾರರು ಕೋರಿದ ಮಾಹಿತಿ ನಿಗಧಿತ ಅವಧಿಯಲ್ಲಿ ನೀಡದ ಕಾರಣ ಮೇಲ್ಮನವಿದಾರ ಶ್ರೀ ನಾಥ ಕೋಡ್ಲಿ ಮಾಹಿತಿ ಹಕ್ಕು ಅಧಿನಿಯಮ 2005 ಕಲಂ 19(1) ರಡಿ ಪ್ರಥಮ ಮೇಲ್ಮನವಿ ಪ್ರಾಧಿಕಾರವಾದ ಪಂಚಾಯತ ರಾಜ್ ಕಲ್ಬುರ್ಗಿ ವಿಭಾಗದ ಕಾರ್ಯಪಾಲನಾ ಅಭಿಯಂತರಿಗೆ 15.04.2024 ರಂದು ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು. ಆದರೂ ಮೇಲ್ಮನವಿದಾರರಿಗೆ ಕೋರಿದ ಮಾಹಿತಿ ದೊರೆಯೇದ ಕಾರಣ ಮೇಲ್ಮನವಿದಾರ ಶ್ರೀನಾಥ ಕೋಡ್ಲಿ ಮಾಹಿತಿ ಹಕ್ಕು ಅಧಿನಿಯಮ 2005ರ ಕಲಂ 19(3) ರಡಿ ಕರ್ನಾಟಕ ಮಾಹಿತಿ ಆಯೋಗ ಕಲ್ಬುರ್ಗಿ ಪೀಠದಲ್ಲಿ ಮುಂದೆ ದ್ವೀತಿಯ ಮೇಲ್ಮನವಿ ದಿನಾಂಕ:06.07.2024 ರಂದು ಸಲ್ಲಿಸಿದ್ದರು. ಸದರಿ ಪ್ರಕರಣ ಕರ್ನಾಟಕ ಮಾಹಿತಿ ಆಯೋಗದ ವಿಚಾರಣೆಗೆ ಕೈಗೆತ್ತಿಕೊಂಡ ಕಲ್ಬುರ್ಗಿ ಪೀಠದ ಆಯುಕ್ತರಾದ ಶ್ರೀ ಬಿ. ವೆಂಕಟ ಸಿಂಗ್ ಅವರು ಪ್ರತಿವಾದಿಗಳು ವಿಚಾರಣೆಗೆ ಹಾಜರಾಗುವಂತೆ ಸಾರ್ವಜನಿಕ ಮಾಹಿತಿ ಅಧಿಕಾರಿಯಾದ ರಾಜ ಕುಮಾರ ಸಹಾಯಕ ಕಾರ್ಯಪಾಲನಾ ಅಭಿಯಂತರರಿಗೆ ನೀಡಿದ ನೋಟಿಸಗೆ ಸ್ವಪಂದಿಸಿದೇ ದಿನಾಂಕ:24.01.2026, ದಿನಾಂಕ24.02.2026 ಮತ್ತು ದಿನಾಂಕ:15.07.2026 ರಂದು ನಡೆದ ವಿಚಾರಣೆಗೆ ಗೈರು ಹಾಜರಾಗಿದಲ್ಲದೆ ಮೇಲ್ಮನವಿದಾರರು ಕೋರಿದ ಮಾಹಿತಿ ನೀಡದೆ ನೀರ್ಲಕ್ಷ ಮಾಡಿದ ಸಾರ್ವಜನಿಕ ಮಾಹಿತಿ ಅಧಿಕಾರಿಯಾದ ರಾಜಕುಮಾರ ಮಾಹಿತಿ ನೀಡಲು ನಿರ್ಲಕ್ಷ ಹಾಗೂ ವಿಚಾರಣೆಗೆ ಗೈರು ಹಾಜರಾಗುವ ಮೂಲಕ ಆಯೋಗದ ಆದೇಶ ಪಾಲನೆ ಮಾಡದ ಕಾರಣ ಇವರಿಗೆ ಎರಡು ಪ್ರತ್ಯೇಕ ಪ್ರಕರಣದಲ್ಲಿ ತಲಾ 10 ಸಾವಿರ ದಂತೆ ಒಟ್ಟು 20 ಸಾವಿರ ದಂಡ ವಿಧಿಸಿ ಕಲ್ಬುರ್ಗಿ ಪೀಠ ರಾಜ್ಯ ಮಾಹಿತಿ ಆಯುಕ್ತರಾದ ಶ್ರೀ ಬಿ. ವೆಂಕಟ ಸಿಂಗ್ ಆದೇಶ ಮಾಡಿದ್ದಾರೆ.