ಅನ್ನಭಾಗ್ಯ ಯೋಜನೆಯಡಿ ಕಾರ್ಡ್‌ಗಳಿಗೆ ಅಕ್ಕಿ ವಿತರಿಸಲು ಸರ್ಕಾರಕ್ಕೆ ವಾರ್ಷಿಕ 6,430 ಕೋಟಿ ರೂ. ಬೇಕಾಗುತ್ತದೆ. ಇಂದಿರಾ ಕಿಟ್ ವಿತರಣೆಗೆ 6,119 ಕೋಟಿ ರೂ.ಖರ್ಚು ಬರಲಿದ್ದು, ಇದರಿಂದ ಸರ್ಕಾರದ ಬೊಕ್ಕಸಕ್ಕೆ ಬರೋಬ್ಬರಿ 250 ಕೋಟಿ ರೂ.ನಿಂದ 300 ಕೋಟಿ ರೂ.ವರೆಗೆ ಉಳಿತಾಯವಾಗಲಿದೆ ಎಂದು ಆಹಾರ ಇಲಾಖೆ ಆರಂಭದಲ್ಲೇ ಅಂದಾಜಿಸಿತ್ತು. ಅಲ್ಲದೆ, ಒಂದೂವರೆ ವರ್ಷದ ಹಿಂದೆ ಏನಾದರೂ ಈ ಯೋಜನೆ ಜಾರಿಯಾದರೆ ಪ್ರತಿ ತಿಂಗಳು 520-530 ಕೋಟಿ ರೂ. ವೆಚ್ಚವಾಗುತ್ತಿತು ಎಂದು ಇಲಾಖೆ ಲೆಕ್ಕ ಹಾಕಿತ್ತು.