ನವೆಂಬರ್ 23ರಂದು ಭುವನೇಶ್ವರದಲ್ಲಿ ಮದುವೆ ನಡೆದಿತ್ತು. ಡಿಸೆಂಬರ್ 3ರಂದು ಆರತಕ್ಷತೆ ನಡೆಸಲು ನಾವು ಯೋಜಿಸಿದ್ದೆವು. ಆದರೆ, ಇದ್ದಕ್ಕಿದ್ದಂತೆ, ಬೆಳಗ್ಗೆ 4 ಗಂಟೆಗೆ ವಿಮಾನ ರದ್ದಾಯಿತು. ನವದಂಪತಿ ಬರುತ್ತಾರೆಂದು ನಾವು ಆಶಿಸಿದ್ದೆವು. ಆದರೆ, ಅವರಿಗೆ ಸಾಧ್ಯವಾಗಲಿಲ್ಲ. ನಾವು ನಮ್ಮ ಅನೇಕ ಸಂಬಂಧಿಕರನ್ನು ಆರತಕ್ಷತೆಗೆ ಆಹ್ವಾನಿಸಿದ್ದರಿಂದ ನಮಗೆ ತುಂಬಾ ಬೇಸರವಾಯಿತು. ಅಲ್ಲದೆ, ಕೊನೆಯ ಕ್ಷಣದಲ್ಲಿ ಕಾರ್ಯಕ್ರಮವನ್ನು ರದ್ದುಗೊಳಿಸುವುದು ನಮ್ಮಿಂದ ಅಸಾಧ್ಯವಾಗಿತ್ತು. ಆದ್ದರಿಂದ, ನಮ್ಮ ಕುಟುಂಬ ಚರ್ಚಿಸಿ, ಆನ್ಲೈನ್ ಮೂಲಕ ಆರತಕ್ಷತೆಯನ್ನು ಮಾಡಿದೆವು ಎಂದು ವಧುವಿನ ತಾಯಿ ತಿಳಿಸಿದರು.