ಬೇಸಿಗೆ ರಜೆ ನಿಮಿತ್ತ ಭಾರತೀಯ ರೈಲ್ವೇಯಿಂದ ವಿಶೇಷ ರೈಲುಗಳ ಸಂಚಾರ

ಬೇಸಿಗೆ ರಜೆ ನಿಮಿತ್ತ ಭಾರತೀಯ ರೈಲ್ವೇಯಿಂದ ವಿಶೇಷ ರೈಲುಗಳ ಸಂಚಾರ
ಬೇಸಿಗೆ ರಜೆ ನಿಮಿತ್ತ ಭಾರತೀಯ ರೈಲ್ವೇಯಿಂದ ವಿಶೇಷ ರೈಲುಗಳ ಸಂಚಾರ
Published on

ಪ್ರಮುಖ ಮುಖ್ಯಾಂಶಗಳು

  • ಬೇಸಿಗೆ ರಜೆ ನಿಮಿತ್ತ ಭಾರತೀಯ ರೈಲ್ವೇಯಿಂದ ವಿಶೇಷ ರೈಲು
  • ಹುಬ್ಬಳ್ಳಿಯಿಂದದ ಪಶ್ಚಿಮ ಬಂಗಾಳದ ಅಲಿಪುರ್ ದ್ವಾರ್
  • ಬೆಂಗಳೂರು ನಿಂದ ರೂಪ್ಸಾ ವಿಶೇಷ ಎಕ್ಸ್‌ಪ್ರೆಸ್ ರೈಲು
  • ಯಶವಂತಪುರ ದಿಂದ ನ್ಯೂಜಲ್ಪೈಗುರಿಗೆ ವಿಶೇಷ ರೈಲು ಸಂಚಾರ

ಬೆಂಗಳೂರು:ಬೇಸಿಗೆ ರಜೆಯಅಂಗವಾಗಿ ಪ್ರಯಾಣಿರ ದಟ್ಟಣೆಹೆಚ್ಚಾಗಿರುವುದರಿಂದ ಪ್ರಯಾಣಿಕರಅನುಕೂಲಕ್ಕಾಗಿ ಭಾರತೀಯ ರೈಲ್ವೇ, ಆಯ್ದ ಕೆಲಮಾರ್ಗಗಳಲ್ಲಿ ವಿಶೇಷ ರೈಲು ಸಂಚಾರಘೋಷಿಸಿದೆ.

ಹುಬ್ಬಳ್ಳಿಯಎಸ್‌ಎಸ್‌ಎಸ್ ನಿಲ್ದಾಣದಿಂದಪಶ್ಚಿಮ ಬಂಗಾಳದ ಅಲಿಪುರ್ ದ್ವಾರ್ನಿಲ್ದಾಣಗಳ ನಡುವೆ,ಬೆಂಗಳೂರಿನಎಸ್‌ಎಂವಿಟಿ ಮತ್ತು ಯಲಹಂಕನಿಲ್ದಾಣಗಳ ಮೂಲಕ ವಿಶೇಷ ಎಕ್ಸ್‌ಪ್ರೆಸ್ ರೈಲು ಸಂಖ್ಯೆ 07323.15ರಬುಧವಾರ ರಾತ್ರಿ 11:15ಕ್ಕೆಹುಬ್ಬಳ್ಳಿಯಿಂದ ಹೊರಟು,ಶನಿವಾರ ಮಧ್ಯಾಹ್ನ01:50ಕ್ಕೆಅಲಿಪುರ್ ದ್ವಾರ್ ತಲುಪಲಿದೆ.ಮರು ಪ್ರಯಾಣದಲ್ಲಿರೈಲು ಸಂಖ್ಯೆ 07324ಅಲಿಪುರ್ ದ್ವಾರ್ಹುಬ್ಬಳ್ಳಿ ವಿಶೇಷ ಎಕ್ಸೃ್ಪ್ರೆಸ್ರೈಲು ಏ.19ರಭಾನುವಾರ ಸಂಜೆ 04:25ಕ್ಕೆಅಲಿಪುರ್ ದ್ವಾರ್‌ನಿಂದ ಹೊರಟು,ಬುಧವಾರ ಬೆಳಗ್ಗೆ09:45ಕ್ಕೆಹುಬ್ಬಳ್ಳಿ ನಿಲ್ದಾಣಕ್ಕೆ ಬಂದುಸೇರಲಿದೆ.

ಈ ರೈಲುಎರಡೂ ಮಾರ್ಗಗಳಲ್ಲಿ ತನ್ನ ಪ್ರಯಾಣದಅವಧಿಯಲ್ಲಿ ದಾವಣಗೆರೆ,ಅರಸೀಕೆರೆ,ತುಮಕೂರು,ಎಸ್‌ಎಂವಿಟಿಬೆಂಗಳೂರು,ಯಲಹಂಕಗಳಲ್ಲಿನಿಲುಗಡೆ ಹೊಂದಿದ್ದು,ಆಂಧ್ರಪ್ರದೇಶದಮಾರ್ಗವಾಗಿ ಮುಂದೆ ಸಂಚರಿಸಲಿದೆ.

ರೈಲುಸಂಖ್ಯೆ 06545ಎಸ್.ಎಂ.ವಿ.ಟಿ.ಬೆಂಗಳೂರು ನಿಂದರೂಪ್ಸಾ ವಿಶೇಷ ಎಕ್ಸ್‌ಪ್ರೆಸ್ರೈಲು ಏ. 15, 22, 29 ಬುಧವಾರದಂದು ಸಂಜೆ 04:35 ಕ್ಕೆಎಸ್.ಎಂ.ವಿ.ಟಿ.ನಿಲ್ದಾಣದಿಂದಹೊರಟು, ಮರುದಿನರಾತ್ರಿ 08:30 ಕ್ಕೆರೂಪ್ಸಾ ತಲುಪಲಿದೆ.

ರೈಲುಸಂಖ್ಯೆ 06546 ರೂಪ್ಸಾ ಬೆಂಗಳೂರು ಕಂಟೋನ್ಮೆಂಟ್ ವಿಶೇಷಎಕ್ಸ್‌ಪ್ರೆಸ್ ಏ.16,23 30 ಗುರುವಾರರಾತ್ರಿ 11:30 ಕ್ಕೆರೂಪ್ಸಾ ನಿಲ್ದಾಣದಿಂದ ಹೊರಟು,ಮರುದಿನ ಬೆಳಗ್ಗೆ05:30 ಕ್ಕೆಬೆಂಗಳೂರು ಕಂಟೋನ್ಮೆಂಟ್ ನಿಲ್ದಾಣತಲುಪಲಿದೆ.

ಈರೈಲುಗಳಿಗೆ ಕೃಷ್ಣರಾಜಪುರಂ,ಬಂಗಾರಪೇಟೆ,ಜೋಲಾರ್‌ಪೇಟೆಯಲ್ಲಿನಿಲುಗಡೆ ಇರಲಿದ್ದು,ಮುಂದೆ ಆಂಧ್ರಮತ್ತು ಒರಿಸ್ಸಾ ಮೂಲಕ ಸಂಚರಿಸಲಿದೆ.

ರೈಲುಸಂಖ್ಯೆ 06567ಯಶವಂತಪುರನ್ಯೂಜಲ್ಪೈಗುರಿ ವಿಶೇಷ ಎಕ್ಸೃ್ಪ್ರೆಸ್ರೈಲು ಏ.17 ಮತ್ತು24 ರಂದುಬೆಳಗ್ಗೆ 7ಕ್ಕೆಯಶವಂತಪುರದಿಂದ ಹೊರಟು,ಮರುದಿನ ದಿನಬೆಳಗ್ಗೆ 7ಕ್ಕೆ ನ್ಯೂಜಲ್ಪೈಗುರಿ ತಲುಪಲಿದೆ.ಮರಳ ಬರುವಾಗರೈಲು ಸಂಖ್ಯೆ 06568.20ಮತ್ತು 27ರಂದು ಬೆಳಗ್ಗೆ8.30ಕ್ಕೆನ್ಯೂ ಜಲ್ಪೈಗುರಿಯಿಂದ ಹೊರಟು,ಮರುದಿನ ಬೆಳಗ್ಗೆ9.55ಕ್ಕೆಬೆಂಗಳೂರು ಕಂಟೋನ್ಮೆಂಟ್ನಿಲ್ದಾಣಕ್ಕೆ ಆಗಮಿಸಲಿದೆ.ಯಶವಂತಪುರದಿಂದಹೊರಡುವ ರೈಲು ಯಲಹಂಕ ಹಾಗೂಆಂಧ್ರಪ್ರದೇಶದ ವಿವಿಧ ನಿಲ್ದಾಣಗಳಲ್ಲಿನಿಲುಗಡೆ ಹೊಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net