ದುಬೈನಲ್ಲಿ ಪಸರಿಸಿದ ಭಾರತೀಯ ಪರಂಪರೆ

Indian heritage spread in Dubai
Indian heritage spread in Dubai
Published on
ಶಿರಾ : ನಮ್ಮ ನಾಡಿನ ಸಾಂಸತಿಕ ಪರಂಪರೆಯ ಪ್ರತಿಕ ದಸರಾ ಉತ್ಸವ, ದುಬೈನಲ್ಲಿ ಕನ್ನಡಿಗರು ಸಡಗರ ಸಂಭ್ರಮದಿಂದ ಆಚರಣೆ ಮಾಡಿ ಭಾರತೀಯ ಪರಂಪರೆಯನ್ನು ಅನ್ಯದೇಶದಲ್ಲಿ ಪಸರಿಸುತ್ತಿದ್ದಾರೆ ಎಂದು ಸ್ಫಟಿಕಪುರಿ ಮಹಾಸಂಸ್ಥಾನದ ಪೀಠಾಧ್ಯಕ್ಷ ಡಾ.ಶ್ರೀ ನಂಜಾವಧೂತ ಸ್ವಾಮೀಜಿ ಹೇಳಿದರು.
ದುಬೈನ ಬುರ್​ ನಗರದಲ್ಲಿ ದುಬೈ ಕನ್ನಡ ಸಂಘದಿಂದ ಹಮ್ಮಿಕೊಂಡಿದ್ದ ದುಬೈ ದಸರಾ ಕ್ರೀಡಾಕೂಟ ಮತ್ತು ಸಾಂಸತಿಕ ಉತ್ಸವದಲ್ಲಿ ಮಾತನಾಡಿ, ಈ ನಮ್ಮ ಸಂಪ್ರದಾಯ, ಧಾರ್ಮಿಕ ಪರಂಪರೆ, ನಂಬಿಕೆ, ಭಾರತೀಯರು ಯಾವ ದೇಶದಲ್ಲಿದ್ದರೂ ಕೂಡ ಇತರರಿಗಿಂತ ವಿಭಿನ್ನ ಎನ್ನುವಂತೆ ಬದುಕುವ ಇಚ್ಛಾಶಕ್ತಿ, ಮೌಲ್ಯಯುತ ಜೀವನವನ್ನು ಕೂಡ ಕಲಿಸಿಕೊಟ್ಟಿದೆ. ಕನ್ನಡ ನಾಡು, ನುಡಿಯ ಸುಗಂಧವನ್ನು ದುಬೈನಲ್ಲಿ ಪಸರಿಸುತ್ತಿರುವ ಕನ್ನಡಿಗರ ದಸರಾ ಉತ್ಸವ ಅಮೋ ಎಂದರು.
ದುಬೈ ಕನ್ನಡ ಸಂಘದ ಅಧ್ಯಕ್ಷ ವರದಾರಾಜ ಗೌಡ, ಕೋಲಾರ ಮಾಜಿ ಸಂಸದ ಎಸ್​.ಮುನಿಸ್ವಾಮಿ, ಚಲನಚಿತ್ರ ನಟ ಕೋಮಲ್​, ಕಲಾವಿದ ನಾಗೇಂದ್ರ ಕುಮಾರ್​, ಜಿಮ್​ ತರಬೇತುದಾರ ಜಿಮ್​ ರವಿ ಸೇರಿದಂತೆ ದುಬೈನ ಕನ್ನಡ ಅಭಿಮಾನಿಗಳು, ಗಣ್ಯರು, ಕಲಾವಿದರು, ಹೆಮ್ಮೆಯ ದುಬೈ ಕನ್ನಡ ಸಂಘದ ಪದಾಧಿಕಾರಿಗಳು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net