ವಚನಾಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಗೌರವ

ಪ್ರಮಾಣಪತ್ರದೊಂದಿಗೆ ವಚನಾ.
ಪ್ರಮಾಣಪತ್ರದೊಂದಿಗೆ ವಚನಾ.
Published on

ಚಿಕ್ಕೋಡಿ: ತಾಲೂಕಿನ ನೇಜ ಗ್ರಾಮದ ಸಂಸ್ಕೃತ ಚಿಂತಕ ವೀರೇಶ ಪಾಟೀಲ ಅವರ 2 ವರ್ಷದ ಪುತ್ರಿ ವಚನಾ ಪಾಟೀಲ ಅಗಾಧ ನೆನಪಿನ ಶಕ್ತಿಯಿಂದ

ಗೌರವಕ್ಕೆ ಪಾತ್ರರಾಗಿ ಜಿಲ್ಲೆಯ ಕೀರ್ತಿ ಹೆಚ್ಚಿಸಿದ್ದಾಳೆ.

ವಚನಾ ಪಾಟೀಲ 21ಕ್ಕೂ ಹೆಚ್ಚು ರಾಷ್ಟ್ರೀಯ ನಾಯಕರು, 14ಕ್ಕೂ ಅಧಿಕ ಸಮಾಜ ಸುಧಾರಕರು, 26ಕ್ಕೂ ಹೆಚ್ಚು ಸಂತರು, ಮಹಾತ್ಮರು ಹಾಗೂ ಕನ್ನಡ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಭಾವಚಿತ್ರ, ಪ್ರಾಣಿ, ಪಕ್ಷಿ, ಹೂವು, ಹಣ್ಣು ಹಾಗೂ ತರಕಾರಿಗಳ ಚಿತ್ರಗಳನ್ನು ಗುರುತಿಸುತ್ತಾಳೆ.

ರಾಜ್ಯಗಳು, ಜಿಲ್ಲೆಗಳು, ದಿಕ್ಕುಗಳು ಮತ್ತು ಖಂಡಗಳ ಹೆಸರುಗಳನ್ನು ಅತ್ಯಂತ ಸರಾಗವಾಗಿ ಹೇಳುತ್ತಾಳೆ. ದಿನಗಳು, ವಾರಗಳು, ತಿಂಗಳುಗಳು, ಮಾಸಗಳು, ಅಕ್ಷರಗಳ ಸ್ಪಷ್ಟತೆ ಸೇರಿದಂತೆ ಕನ್ನಡದ ಸ್ವರ-ವ್ಯಂಜನಗಳು ಹಾಗೂ ಇಂಗ್ಲಿಷ್ ಅಕ್ಷರಗಳನ್ನು ಅತ್ಯಂತ ಸ್ಪಷ್ಟವಾಗಿ ಹೇಳುತ್ತಾಳೆ. ಬಾಲಕಿ ಸಾಧನೆಗೆ ತಂದೆ ವೀರೇಶ, ತಾಯಿ ದೀಪಾ ಹರ್ಷ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net