ಉತ್ತಮ ಸಂಸ್ಕಾರ ಬೆಳೆಸಿಕೊಳ್ಳಲಿ

ರಾಯಬಾಗ ಪಟ್ಟಣದ ಕೆಎಲ್‌ಇ ಸಂಸ್ಥೆಯ ಮಲಗೌಡ ಪಾಟೀಲ ಪದವಿಪೂರ್ವ ಕಾಲೇಜಿನ ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ಎಚ್.ಕೆ.ಗುರವ ಚಾಲನೆ ನೀಡಿದರು. ಅಪ್ಪಾಸಾಹೇಬ ಕುಲಗುಡೆ, ಎಂ.ಎಂ.ನಿಶಾನದಾರ, ಡಿ.ಎಲ್.ಮಿರ್ಜೆ ಇತರರಿದ್ದರು.
ರಾಯಬಾಗ ಪಟ್ಟಣದ ಕೆಎಲ್‌ಇ ಸಂಸ್ಥೆಯ ಮಲಗೌಡ ಪಾಟೀಲ ಪದವಿಪೂರ್ವ ಕಾಲೇಜಿನ ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ಎಚ್.ಕೆ.ಗುರವ ಚಾಲನೆ ನೀಡಿದರು. ಅಪ್ಪಾಸಾಹೇಬ ಕುಲಗುಡೆ, ಎಂ.ಎಂ.ನಿಶಾನದಾರ, ಡಿ.ಎಲ್.ಮಿರ್ಜೆ ಇತರರಿದ್ದರು.
Published on
ವಿಜಯವಾಣಿ ಸುದ್ದಿಜಾಲ ರಾಯಬಾಗ
ಗ್ರಾಮೀಣ ವಿದ್ಯಾರ್ಥಿಗಳ ಉಜ್ವಲ ಶೈಕ್ಷಣಿಕ ಭವಿಷ್ಯಕ್ಕಾಗಿ ಡಾ.ಪ್ರಭಾಕರ ಕೋರೆ ಅವರು ಶಿಕ್ಷಣ ಸಂಸ್ಥೆ ಪ್ರಾರಂಭಿಸಿದ್ದು, ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಧಾರವಾಡ ಆರ್‌ಎಲ್‌ಎಸ್ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಎಚ್.ಕೆ.ಗುರವ ಹೇಳಿದರು.
ಕೆಎಲ್‌ಇ ಸಂಸ್ಥೆಯ ಮಲಗೌಡ ಪಾಟೀಲ ಪದವಿಪೂರ್ವ ಕಾಲೇಜಿನಲ್ಲಿ ಶುಕ್ರವಾರ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ ಹಾಗೂ ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ವಿದ್ಯಾರ್ಥಿಗಳು ಶಿಕ್ಷಣ ಜತೆಗೆ ಉತ್ತಮ ಸಂಸ್ಕಾರ ಪಡೆಯಬೇಕು. ಕಾಲೇಜಿನ ಗ್ರಂಥಾಲಯ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಡಿಸಿಸಿ ಬ್ಯಾಂಕ್ ನಿರ್ದೇಶಕ ಅಪ್ಪಾಸಾಹೇಬ ಕುಲಗುಡೆ, ಸದಸ್ಯರಾದ ಎಂ.ಎಂ.ನಿಶಾನದಾರ್, ಡಿ.ಎಲ್.ಮಿರ್ಜೆ, ವಿ.ಪಿ.ಪಾಟೀಲ, ಎಲ್.ಬಿ.ಪಾಟೀಲ, ಪ್ರಾಚಾರ್ಯ ಆರ್.ಕೆ.ಪಾಟೀಲ, ಎಸ್.ಎ.ಖವಟಕೊಪ್ಪ, ಬಿ.ಬಿ.ಪೆಂಡಾರಿ, ಎಂ.ಆರ್.ಹೊಸಮನಿ, ಆರ್.ಎಸ್.ಬುಗಡಿಕಟ್ಟಿ, ಪಿ.ಆರ್.ಭಿರಡೆ, ಎಂ.ಎಸ್.ಜಾಧವ, ಎ.ಎ.ಶೆಟ್ಟಿ, ಪಿ.ಪಿ.ಪವಾರ, ಎ.ಜಿ.ಹಂಜೆ, ಎಸ್.ಬಿ.ಗಸ್ತಿ, ಪಿ.ಬಿ.ಪಾಟೀಲ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net