ಬರಪೀಡಿತ ತಾಲೂಕು ಪಟ್ಟಿಗೆ ಚಿ.ನಾ.ಹಳ್ಳಿ ಸೇರಿಸಿ Farmer

ಚಿಕ್ಕನಾಯಕಹಳ್ಳಿಯಲ್ಲಿ Farmer ಆಯೋಜಿಸಿದ್ದ 46ನೇ ರೈತ ಹುತಾತ್ಮ ದಿನಾಚರಣೆಯಲ್ಲಿ ಎಚ್​.ಆರ್​.ಹೊನ್ನೆಬಾಗಿ, ಭಟ್ಟರಹಳ್ಳಿ ಮಲ್ಲಿಕಾರ್ಜುನ, ಮಂಜುನಾಥ್​, ಲಿಂಗಣ್ಣ, ಮಧು, ರಂಗಸ್ವಾಮಿ, ಶ್ರೀನಿವಾಸಮೂರ್ತಿ ಇತರರು ಇದ್ದರು.
ಚಿಕ್ಕನಾಯಕಹಳ್ಳಿಯಲ್ಲಿ Farmer ಆಯೋಜಿಸಿದ್ದ 46ನೇ ರೈತ ಹುತಾತ್ಮ ದಿನಾಚರಣೆಯಲ್ಲಿ ಎಚ್​.ಆರ್​.ಹೊನ್ನೆಬಾಗಿ, ಭಟ್ಟರಹಳ್ಳಿ ಮಲ್ಲಿಕಾರ್ಜುನ, ಮಂಜುನಾಥ್​, ಲಿಂಗಣ್ಣ, ಮಧು, ರಂಗಸ್ವಾಮಿ, ಶ್ರೀನಿವಾಸಮೂರ್ತಿ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಬಿಜೆಪಿ ಮಂಡಲ ಅಧ್ಯಕ್ಷ ಎಚ್​.ಆರ್​.ಹೊನ್ನೆಬಾಗಿ ಒತ್ತಾಯ
ಚಿಕ್ಕನಾಯಕಹಳ್ಳಿ: ತಾಲೂಕಿನಲ್ಲಿ ಮಳೆಯಿಲ್ಲದೇ ಕುಡಿಯುವ ನೀರು Farmer ಹಾಗೂ ಜಾನುವಾರುಗಳಿಗೆ ಮೇವಿನ ತೊಂದರೆಯಾಗುತ್ತಿದ್ದು, ಚಿಕ್ಕನಾಯಕಹಳ್ಳಿಯನ್ನು ಸರ್ಕಾರ ಬರಪೀಡಿತ ತಾಲೂಕೆಂದು ಘೋಷಿಸಬೇಕು ಎಂದು ಬಿಜೆಪಿ ಮಂಡಲ ಅಧ್ಯಕ್ಷ ಎಚ್​.ಆರ್​.ಹೊನ್ನೆಬಾಗಿ ತಿಳಿಸಿದರು.
ಪಟ್ಟಣದ ಕನ್ನಡಸಂಘ ವೇದಿಕೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇವೆಯಿಂದ ಆಯೋಜಿಸಿದ್ದ 46ನೇ ರೈತ ಹುತಾತ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಈ ಬಾರಿ ತಾಲೂಕಿನಲ್ಲಿ ಮಳೆಯಾಗಿಲ್ಲ. ಜನ-ಜಾನುವಾರುಗಳು ಕುಡಿಯುವ ನೀರು ಹಾಗೂ ಮೇವಿಗಾಗಿ ಪರದಾಡುತ್ತಿವೆ. ಸರ್ಕಾರ ತಕ್ಷಣ ತಾಲೂಕಿಗೆ ಅಗತ್ಯ ಸೌಲಭ್ಯ ನೀಡಬೇಕು ಎಂದು ಒತ್ತಾಯಿಸಿದರು.
ಕೆಆರ್​ಎಸ್​ ಪಕ್ಷ ರಾಜ್ಯ ಪ್ರಧಾನ ಕಾರ್ಯದರ್ಶಿ ಭಟ್ಟರಹಳ್ಳಿ ಮಲ್ಲಿಕಾರ್ಜುನ ಮಾತನಾಡಿ, ರೈತರು ಸಂಘಟಿತರಾಗಬೇಕು. ರಾಜ್ಯ ಸರ್ಕಾರದ ವಿರುದ್ಧ ಮಾತನಾಡಿದ್ದಕ್ಕೆ ನನ್ನನು ರೌಡಿಶೀಟರ್​ ಪಟ್ಟಿಗೆ ಸೇರಿಸಿದ್ದಾರೆ. ಅನ್ಯಾಯ ವಿರುದ್ಧ ಹೋರಾಟ ಮಾಡಬೇಕು. ಪ್ರೊ.ಎಂಡಿ ನಂಜುಂಡಸ್ವಾಮಿ ಅವರು ಅಧ್ಯಯನ ಮಾಡದೇ ಚಳವಳಿಗೆ ಇಳಿಯುತ್ತಿರಲಿಲ್ಲ. ಹಸಿರು ಶಾಲು ಸತ್ಯ, ಪ್ರಾಮಾಣಿಕತೆಯೇ ಶಕ್ತಿಯ ಸಂಕೇತ ಎಂದರು.
ಎಕ್ಸ್​ಪ್ರೆಸ್​ ಲಿಂಕ್​ ಕೆನಾಲ್​ ನಾಲೆ ಜಮೀನಿನಲ್ಲೇ ಹಾದು ಹೋದರೂ ನೀರು ಸಿಗದ ಪರಿಸ್ಥಿತಿ ಉಂಟಾಗಿದೆ. ಮುಂದಿನ ಪೀಳಿಗೆಗೆ ಜಮೀನು ಉಳಿಸಿಕೊಳ್ಳಲು ಹೋರಾಟದ ಹಾದಿ ಹಿಡಿಯುವುದು ಅನಿವಾರ್ಯ ಎಂದರು.
ಗುಬ್ಬಿಯ ರೈತ ಮುಖಂಡ ಕುಮಾರ್​ ಮಾತನಾಡಿ, ಬುಕ್ಕಾಪಟ್ಟಣದ ಮುತ್ತುಗದಹಳ್ಳಿಯಲ್ಲಿ 35 ವರ್ಷಗಳ ಹಿಂದೆ ಅಕ್ರಮ- ಸಕ್ರಮ ಯೋಜನೆಯಡಿ ಮಂಜೂರಾಗಿದ್ದ ಭೂಮಿಯಲ್ಲಿ ಬೆಳೆದ ಅಡಿಕೆ ಮತ್ತು ತೆಂಗಿನ ಮರಗಳನ್ನು ಕೇವಲ ಇಲಾಖೆಯ ಅನುಮತಿ ಇಲ್ಲ ಎಂಬ ನೆಪವೊಡ್ಡಿ ಅರಣ್ಯ ಇಲಾಖೆ ಅಧಿಕಾರಿಗಳು ಕಡಿದುಹಾಕಿರುವುದು ಅಕ್ಷಮ್ಯ ಅಪರಾಧ. ಇಂತಹ ಜ್ವಲಂತ ಸಮಸ್ಯೆ ವಿರುದ್ಧ ರೈತರು ಒಗ್ಗೂಡಿ ಧ್ವನಿಯೆತ್ತಬೇಕು ಎಂದರು.
ಆಟೋ ಚಾಲಕ ಸಂಘ ಅಧ್ಯಕ್ಷ ಮಂಜುನಾಥ್​ ಮಾತನಾಡಿ, ತಾಲೂಕಿನಲ್ಲಿ ರೈತರು ಶೋಷಣೆಗೆ ಒಳಗಾಗಿದ್ದಾರೆ. ನಾವೆಲ್ಲ ಸಂಘಟಿತರಾದಾಗ ಮಾತ್ರ ರೈತ ಸಂಘ ಬೃಹತ್​ ಶಕ್ತಿಯಾಗಿ ಹೊರಹೊಮ್ಮಲು ಸಾಧ್ಯ ಎಂದರು.
ಜಿಲ್ಲಾ ಕಾರ್ಯದರ್ಶಿ ಯದುಕುಮಾರ್​, ರೈತ ಸಂದ ತಾಲೂಕು ಅಧ್ಯಕ್ಷ ಸಿಬಿ ಲಿಂಗಣ್ಣ, ನೀರಾವರಿ ಹೋರಾಟ ಸಮಿತಿ ಶ್ಯಾವಿಗೆಹಳ್ಳಿ ಮಧು, ಗುಬ್ಬಿ ಲಿಂಗಣ್ಣ, ಪುರಸಭೆ ಮಾಜಿ ಅಧ್ಯಕ್ಷ ರಂಗಸ್ವಾಮಿ, ಶ್ರೀನಿವಾಸಮೂರ್ತಿ, ಸಿ.ಕೆ.ಶಾಂತಕುಮಾರ್​, ಮಹಿಳಾ ಟಕದ ಅಧ್ಯೆ ಪುಷ್ಪಾ, ಮುಖಂಡ ಹೊನ್ನೇಬಾಗಿ ಮೋಹನ್​ ಇತತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net