ತಹಸೀಲ್ದಾರ್ ಶ್ರೀಶೈಲ ಗುಡಮೆ ಮಾತನಾಡಿದರು. ಸಾಧನೆಗೈದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ತಾಪಂ ಇಒ ಪ್ರಸನ್ನ ನೇರ್ಲೆಕರ, ಬಿಇಒ ಪ್ರಕಾಶ ಹಿರೇಮಠ, ಸಿಡಿಪಿಒ ಯಲ್ಲಪ್ಪ ಗದಾಡಿ, ಪುರಸಭೆ ಮುಖ್ಯಾಧಿಕಾರಿ ತುಕಾರಾಮ ಮಾದರ, ಹೆಸ್ಕಾಂ ಅಧಿಕಾರಿ ಎಂ.ಎಸ್.ನಾಗನ್ನವರ, ಸಿಪಿಐ ಶ್ರೀಶೈಲ ಬ್ಯಾಕೂಡ, ಪ್ರಾಚಾರ್ಯ ಮಹೇಶ ಕುಂಬಾರ ಇತರರಿದ್ದರು. ಗೋಕಾಕ ಸಮಾಜ ಕಲ್ಯಾಣ ಇಲಾಖೆ ವ್ಯವಸ್ಥಾಪಕ ಎಂ.ಎಸ್.ಪಾಟೀಲ ಸ್ವಾಗತಿಸಿದರು. ಮೂಡಲಗಿ ವಸತಿ ನಿಲಯಪಾಲಕ ಯಲ್ಲಪ್ಪ ಭಜಂತ್ರಿ ನಿರೂಪಿಸಿದರು. ವಡೇರಹಟ್ಟಿ ವಸತಿನಿಲಯ ಪಾಲಕ ಅರುಣ ನುಚ್ಚುಂಡಿ ವಂದಿಸಿದರು.