ಮುಗಳಿಹಾಳದಲ್ಲಿ ಸಂಭ್ರಮದ ಕಾರ ಹುಣ್ಣಿಮೆ

ಮುಗಳಿಹಾಳ ಗ್ರಾಮದಲ್ಲಿ ಕಾರ ಹುಣ್ಣಿಮೆ ಅಂಗವಾಗಿ ಶೃಂಗರಿಸಿದ ಎತ್ತುಗಳನ್ನು ಓಡಿಸಲಾಯಿತು.
ಮುಗಳಿಹಾಳ ಗ್ರಾಮದಲ್ಲಿ ಕಾರ ಹುಣ್ಣಿಮೆ ಅಂಗವಾಗಿ ಶೃಂಗರಿಸಿದ ಎತ್ತುಗಳನ್ನು ಓಡಿಸಲಾಯಿತು.
Published on
ಮುಗಳಿಹಾಳ: ಗ್ರಾಮದಲ್ಲಿ ಕಾರ ಹುಣ್ಣಿಮೆ ನಿಮಿತ್ತ ಸೋಮವಾರ ಎತ್ತುಗಳನ್ನು ಅಲಂಕರಿಸಿ ಓಡಿಸಲಾಯಿತು. ಬೆಳಗ್ಗೆ ರೈತರು ಬೆಳಗ್ಗೆ ಎತ್ತುಗಳ ಮೈ ತೊಳೆದು ಕೊಂಬುಗಳಿಗೆ ಬಣ್ಣ ಬಳಿದು, ಹೂಮಾಲೆ, ಗೆಜ್ಜೆ , ರಿಬ್ಬನ್​ ಹಾಗೂ ಗೊಂಡೆ ಸೇರಿದಂತೆ ವಿವಿಧ ಅಲಂಕಾರಿಕ ವಸ್ತುಗಳಿಂದ ಸಿಂಗರಿಸಿದರು. ಬಳಿಕ ಸಂಪ್ರದಾಯದಂತೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಎತ್ತುಗಳನ್ನು ಓಡಿಸುತ್ತಿದ್ದಂತೆ ನೆರೆದಿದ್ದ ಜನರು ಸಿಳ್ಳೆ, ಕೆಕೆ ಹಾಕುವ ಮೂಲಕ ಎತ್ತುಗಳನ್ನು ಹುರುದುಂಬಿಸಿ ಕರಿ ಹರಿದರು. ಮುನ್ನಾದಿನ ಭಾನುವಾರ ಸಂಜೆ ರೈತ ಕುಟುಂಬಗಳು ಎತ್ತುಗಳಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಉತ್ತಮ ಮಳೆ, ಸಮೃದ್ಧ ಬೆಳೆ ಹಾಗೂ ಸುಖ&ಶಾಂತಿ ನೆಲೆಸಲೆಂದು ಪ್ರಾರ್ಥಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net