ತಾಲೂಕಿನ ಕಮಲದಿನ್ನಿ ಗ್ರಾಮದಲ್ಲಿ ಲಕ್ಷಿ$್ಮದೇವಿ ಜಾತ್ರಾ ಮಹೋತ್ಸವದ ಆಮಂತ್ರಣ ಪತ್ರಿಕೆಯನ್ನು ಭಾನುವಾರ ಬಿಡುಗಡೆಗೊಳಿಸಿ ಮಾತನಾಡಿ, ೆ.17ರಂದು ಬೆಳಗ್ಗೆ 8ಗಂಟೆಗೆ ಸುಮಂಗಲೆಯರಿಗೆ ಉಡಿ ತುಂಬುವುದು. 10ಗಂಟೆಗೆ ಕುಂಭ, ಆರತಿ ಹಾಗೂ ವಿವಿಧ ವಾದ್ಯಗಳೊಂದಿಗೆ ಪಲ್ಲಕ್ಕಿ ಉತ್ಸವ ಜರುಗಲಿದೆ. ಮಧ್ಯಾಹ್ನ 2ಕ್ಕೆ ಡೊಳ್ಳಿನ ಪದಗಳು ಹಮ್ಮಿಕೊಳ್ಳಲಾಗಿದೆ. ೆ.18ರಂದು ಸಂಜೆ 4ಕ್ಕೆ ಭಂಡಾರ ಒಡೆಯುವುದು, ಭಂಡಾರದ ಓಕುಳಿ ಜರುಗಲಿದೆ. ರಾತ್ರಿ 9ಕ್ಕೆ ಹಾಸ್ಯ ರಸಮಂಜರಿ ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು. ಮೂಡಲಗಿಯ ದತ್ತಾತ್ರೇಯಬೋಧ ಸ್ವಾಮೀಜಿ, ಸುಣಧೋಳಿಯ ಶಿವಾನಂದ ಸ್ವಾಮೀಜಿ, ರಂಗಾಪುರ&ಮುನ್ಯಾಳ ಶಿವಲಿಂಗ ಮುರುರಾಜೇಂದ್ರ ಶಿವಾಚಾರ್ಯರು ಸಾನ್ನಿಧ್ಯ ವಹಿಸುವರು. ಮುಖ್ಯ ಅತಿಥಿಗಳಾಗಿ ಶಾಸಕ ಬಾಲಚಂದ್ರ ಜಾರಕಿಹೊಳಿ, ವಿರೂಪಾಯ್ಯ ಹಿರೇಮಠ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು. ಜಾತ್ರಾ ಸಮಿತಿ ಸದಸ್ಯರಾದ ಹನುಮಂತ ಪೂಜೇರಿ, ಉಲ್ಲಾಸ ಪಾಟೀಲ, ರಾಮಣ್ಣ ಭಾಗೋಜಿ, ರಮೇಶ ಗಿರಡ್ಡಿ, ರಾಮಣ್ಣ ಪೂಜೇರಿ, ಭೀಮಶಿ ಪೂಜೇರಿ, ಬಾಲು ಪಾಟೀಲ, ಪರಸಪ್ಪ ಚೌಡಕಿ, ಅಶೋಕ ಮಾಚಕನೂರ, ಬಸವರಾಜ ಹತ್ತರಕಿ ಇತರರಿದ್ದರು.