ವಿಧಾನಸೌಧದ ಮುಂಭಾಗ ವಿಶ್ವ ಪಾರ್ಶ್ವವಾಯು ದಿನಾಚರಣೆ

ಕರ್ನಾಟಕ ಸ್ಟ್ರೋಕ್ ಫೌಂಡೇಶನ್, ರಾಜೀವ್ ಗಾಂಧಿ ವಿವಿ ಸಹಭಾಗಿತ್ವ

Vice-Chancellor Dr. Suryanarayana Sharma and others participated in the World Stroke Day observance, organized by the Karnataka Stroke Foundation in collaboration with the Rajiv Gandhi University of Health Sciences in front of the Vidhana Soudha.
ಕರ್ನಾಟಕ ಸ್ಟ್ರೋಕ್ ಫೌಂಡೇಶನ್, ರಾಜೀವ್ ಗಾಂಧಿ ಆರೋಗ್ಯ ವಿವಿ ಸಹಯೋಗದಲ್ಲಿ ವಿಧಾನಸೌಧದ ಮುಂಭಾಗ ಏರ್ಪಡಿಸಿದ್ದ ವಿಶ್ವ ಸ್ಟ್ರೋಕ್ ದಿನಾಚರಣೆಯಲ್ಲಿ ಕುಲಪತಿ ಡಾ. ಡಾ. ಸೂರ್ಯನಾರಾಯಣ ಶರ್ಮ ಮತ್ತಿತರರು ಪಾಲ್ಗೊಂಡಿದ್ದರು.
Published on: 

ಬೆಂಗಳೂರು : ವಿಶ್ವ ಸ್ಟ್ರೋಕ್ ದಿನಾಚರಣೆ ಅಂಗವಾಗಿ ಕರ್ನಾಟಕ ಸ್ಟ್ರೋಕ್ ಫೌಂಡೇಶನ್ ಬೆಂಗಳೂರು ಮತ್ತು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವ ವಿದ್ಯಾಲಯದ ಜಂಟಿ ಸಹಯೋಗದಲ್ಲಿ ಭಾನುವಾರ ವಿಧಾನಸೌಧದ ಮುಂಭಾಗ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಪಾರ್ಶ್ವವಾಯು ಅರಿವು ಅಭಿಯಾನ ಮತ್ತು ಸುವರ್ಣ ಸಮಯದ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಸುಲಭಾಗಿ 4.5 ವಾಕತಾನ್ ಮತ್ತು ಓಟ ಕಾರ್ಯಕ್ರಮ ನಡೆಸಲಾಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾನಾಡಿದರ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಕುಲಪತಿ ಡಾ. ಭಗವಾನ್, ಪಾರ್ಶ್ವ ವಾಯು ಎಂಬುದು ಗಂಭೀರ ಸಮಸ್ಯೆಯಾಗಿದ್ದು ಕಳೆದ 15 ವರ್ಷಗಳಲ್ಲಿ ಈ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆಗಳು ಆಗಿವೆ. ಪಾರ್ಶ್ವವಾಯು ಸಂಭವಿಸಿದ ನಂತರದ ಪ್ರತಿಯೊಂದು ನಿಮಿಷವು ಅಮೂಲ್ಯವಾದದ್ದು ಆದ್ದರಿಂದ ಸಾರ್ವಜನಿಕರು ಆಗ ಸಮಯ ವ್ಯರ್ಥ ಮಾಡದೆ ಸಮೀಪದ ಸ್ಟ್ರೋಕ್ ರೆಡಿ ಆಸ್ಪತ್ರೆಗೆ ಹೋಗುವ ಮೂಲಕ ತುರ್ತು ಚಿಕಿತ್ಸೆ ಪಡೆಯಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಪಾರ್ಶ್ವ ವಾಯುವಿಗೆ ತುತ್ತಾಗಿ ಚೇತರಿಸಿಕೊಂಡ ರೋಗಿಗಳನ್ನು ಸನ್ಮಾನಿಸಲಾಯಿತು. ಭಾರತೀಯ ಸ್ಟ್ರೋಕ್ ಆಸೋಸಿಯೇಷನ್ ಅಧ್ಯಕ್ಷ ಡಾ. ವಿಕ್ರಂ ಹುಡೇದ, ಸ್ಟ್ರೋಕ್ ಫೌಂಡೇಶನ್ ಅಧ್ಯಕ್ಷ ಡಾ ಜಿ ಟಿ ಸುಭಾಷ್, ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಡಾ. ಬಿ.ಕೆ.ಮಧುಸೂಧನ್ ಮತ್ತಿತರರಿದ್ದರು.


On the occasion of World Stroke Day, a 'run-walk' event was organized in front of the Vidhana Soudha to raise public awareness, in collaboration with the Karnataka Stroke Foundation and the Rajiv Gandhi University of Health Sciences.
ವಿಶ್ವ ಸ್ಟ್ರೋಕ್ ದಿನಾಚರಣೆ ಅಂಗವಾಗಿ ವಿಧಾನಸೌಧದ ಮುಂಭಾಗ ಕರ್ನಾಟಕ ಸ್ಟ್ರೋಕ್ ಫೌಂಡೇಶನ್, ರಾಜೀವ್ ಗಾಂಧಿ ಆರೋಗ್ಯ ವಿವಿ ಸಹಯೋಗದಲ್ಲಿ ಜನಜಾಗೃತಿಗಾಗಿ ರನ್-ವಾಕ್ ಏರ್ಪಡಿಸಲಾಗಿತ್ತು
ಪ್ರತಿ ವರ್ಷ ಕರ್ನಾಟಕದಲ್ಲಿ ಒಂದು ಲಕ್ಷ ಪಾರ್ಶ್ವವಾಯು ಪ್ರಕರಣಗಳು ಸಂಭವಿಸುತ್ತಿವೆ. 30 ಸಾವಿರಕ್ಕೂ ಅಧಿಕ ರೋಗಿಗಳು ಶಾಶ್ವತವಾಗಿ ಅಂಗವೈಕಲ್ಯಕ್ಕೆ ತುತ್ತಾಗುತ್ತಿದ್ದಾರೆ. ಈ ಬಗ್ಗೆ ಹೆಚ್ಚಿನ ಜಾಗೃತಿ ಅಗತ್ಯವಿದೆ.
ಡಾ. ಸೂರ್ಯನಾರಾಯಣ ಶರ್ಮ, ಕರ್ನಾಟಕ ಸ್ಟ್ರೋಕ್ ಫೌಂಡೇಶನ್ ಕಾರ್ಯದರ್ಶಿ