ಸದನ ಕಲಾಪ ನಡೆಸಲು ಪ್ರತಿಪಕ್ಷದವರು ಅಡ್ಡಿ ಮಾಡುತ್ತಿರುವ ಬಗ್ಗೆ ಇಬ್ಬರೂ ನಾಯಕರು ಸಮಾಲೋಚಿಸಿದರು.
ಆಡಳಿತ ಪಕ್ಷದ ಹಿಂದಿನ ಸಾಲಿನಲ್ಲಿ ಕುಳಿತಿದ್ದ ಸಿದ್ದಾರಾಮಯ್ಯ ಅವರು ಇದ್ದ ಜಾಗಕ್ಕೆ ಎದ್ದು ಬಂದ ಸಿಎಂ,
ಬೆಂಗಳೂರು:
ವಿಧಾನಸಭೆಯಲ್ಲಿ ಸಿಎಂ ಡಿ.ಕೆ.ಶಿವಕುಮಾರ್ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಗಹನವಾದ ಚರ್ಚೆ ನಡೆಸಿದರು.
ಮೊನ್ನೆಯಷ್ಟೆ ದೆಹಲಿಗೆ ಹೋಗಿ ಬಂದಿದ್ದ ಇಬ್ಬರು ನಾಯಕರು ಯಾವ ವಿಷಯದ ಬಗ್ಗೆ ಏನೇನು ಚರ್ಚೆ ಮಾಡಿದರು ಎನ್ನುವುದು ಕುತೂಹಲ ಕೆರಳಿಸಿದೆ.
ವಿಧಾನಸಭೆ ಅಧಿವೇಶನ ಮುಂದೂಡುತ್ತಿದ್ದಂತೆ ಸದನದಲ್ಲಿದ್ದ ಬಹುಪಾಲು ಶಾಸಕರು ನಿರ್ಗಮಿಸಿದರು. ಆಡಳಿತ ಪಕ್ಷದ ಹಿಂದಿನ ಸಾಲಿನಲ್ಲಿ ಕುಳಿತಿದ್ದ ಸಿದ್ದಾರಾಮಯ್ಯ ಅವರು ಇದ್ದ ಜಾಗಕ್ಕೆ ಎದ್ದು ಬಂದ ಸಿಎಂ, ಪಕ್ಕದ ಸೀಟಿನಲ್ಲಿ ಆಸೀನರಾದರು.
ಸದನ ಕಲಾಪ ನಡೆಸಲು ಪ್ರತಿಪಕ್ಷದವರು ಅಡ್ಡಿ ಮಾಡುತ್ತಿರುವ ಬಗ್ಗೆ ಇಬ್ಬರೂ ನಾಯಕರು ಸಮಾಲೋಚಿಸಿದರು. ನಾವು ಹೇಳುವುದನ್ನು ಕೇಳಲು ಪ್ರತಿ ಪಕ್ಷ ತಯಾರಿಲ್ಲ. ಆದ್ದರಿಂದ ಅಧಿವೇಶನವನ್ನು ನಡೆಸುವುದರಲ್ಲಿ ಅರ್ಥವಿಲ್ಲ. ಆದ್ದರಿಂದ ಈ ಅಧಿವೇಶನವನ್ನು ಮಂಗಳವಾರಕ್ಕೆ ಮೊಟಕು ಮಾಡಲು ನಿರ್ಧರಿಸಿದರು ಎಂದು ತಿಳಿದುಬಂದಿದೆ.
ದೆಹಲಿಯಲ್ಲಿ ನಡೆದ ವಿದ್ಯಾಮನಗಳ ಬಗ್ಗೆಯೂ ಚರ್ಚೆ ನಡೆದಿದೆ. ವಿಧಾನ ಪರಿಷತ್ತಿಗೆ ಐವರು ಆಯ್ಕೆಯಾಗಬೇಕಾಗಿದ್ದು, ಈ ಬಗ್ಗೆಯೂ ಚರ್ಚೆ ನಡೆಸಿದ್ದಾರೆ ಎಂದು ಆಪ್ತರು ಖಚಿತಪಡಿಸಿದ್ದಾರೆ. ಈ ಸಂದರ್ಭದಲ್ಲಿ ಕೆಲವೇ ಶಾಸಕರು ಜೊತೆಯಲ್ಲಿದ್ದರು.
*ಸದನ ಕಲಾಪ ನಡೆಸಲು ಪ್ರತಿಪಕ್ಷದವರು ಅಡ್ಡಿ ಮಾಡುತ್ತಿರುವ ಬಗ್ಗೆ ಇಬ್ಬರೂ ನಾಯಕರು ಸಮಾಲೋಚಿಸಿದರು. ನಾವು ಹೇಳುವುದನ್ನು ಕೇಳಲು ಪ್ರತಿ ಪಕ್ಷ ತಯಾರಿಲ್ಲ. ಆದ್ದರಿಂದ ಅಧಿವೇಶನವನ್ನು ನಡೆಸುವುದರಲ್ಲಿ ಅರ್ಥವಿಲ್ಲ.