ಬೆಟಸೂರಲ್ಲಿ ಗಮನಸೆಳೆದ ಮಕ್ಕಳ ಸಂತೆ

ಸವದತ್ತಿ ಸಮೀಪದ ಬೆಟಸೂರ ಗ್ರಾಮದ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಮಕ್ಕಳ ಸಂತೆಯನ್ನುಗಣ್ಯರು ಉದ್ಘಾಟಿಸಿದರು. ಎಸ್​.ಎಲ್​.ತಿಮ್ಮಾಪುರ, ಆರ್​.ಎಚ್​.ಕಾಳಿ, ಯು.ಬಿ.ಶಿಂಗಾರಗೊಪ್ಪ ಇತರರಿದ್ದರು.
ಸವದತ್ತಿ ಸಮೀಪದ ಬೆಟಸೂರ ಗ್ರಾಮದ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಮಕ್ಕಳ ಸಂತೆಯನ್ನುಗಣ್ಯರು ಉದ್ಘಾಟಿಸಿದರು. ಎಸ್​.ಎಲ್​.ತಿಮ್ಮಾಪುರ, ಆರ್​.ಎಚ್​.ಕಾಳಿ, ಯು.ಬಿ.ಶಿಂಗಾರಗೊಪ್ಪ ಇತರರಿದ್ದರು.
Published on
ಸವದತ್ತಿ: ಬೆಳೆಯುತ್ತಿರುವ ಆರ್ಥಿಕ ವ್ಯವಸ್ಥೆಯಲ್ಲಿ ಮಕ್ಕಳಿಗೆ ಹಣಕಾಸಿನ ನಿರ್ವಹಣೆ ಕುರಿತು ಪ್ರಾಯೋಗಿಕ ಜ್ಞಾನ ಅತ್ಯಗತ್ಯ. ಇಂತಹ ಚಟುವಟಿಕೆಗಳು ಮಕ್ಕಳ ವ್ಯವಹಾರ ಜ್ಞಾನಕ್ಕೆ ಉತ್ತಮ ವೇದಿಕೆಯಾಗಿದೆ ಎಂದು ಮುಖ್ಯಶಿಕ್ಷಕ ಎಸ್​.ಎಲ್​.ತಿಮ್ಮಾಪುರ ಹೇಳಿದರು. ತಾಲೂಕಿನ ಬೆಟಸೂರ ಗ್ರಾಮದ ಪಿಎಂಶ್ರೀ ಸರ್ಕಾರಿ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಈಚೆಗೆ ಪಿಎಂಶ್ರೀ ಯೋಜನೆಯಡಿ ಹಣಕಾಸು ಸಾರತಾ ಕಾರ್ಯಕ್ರಮದ ಅಂಗವಾಗಿ ಹಮ್ಮಿಕೊಂಡಿದ್ದ ಮಕ್ಕಳ ಸಂತೆ ಮೇಳ ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿಗಳೇ ವ್ಯಾಪಾರಿಗಳಾಗಿ ತರಕಾರಿ, ಹಣ್ಣು, ಹೂವು, ತಿಂಡಿ&ತಿನಿಸು ಮಾರಾಟ ಮಾಡಿದರು. ಹಣ ಸ್ವೀಕಾರ, ಲೆಕ್ಕಾಚಾರ, ಉಳಿಕೆ ಹಾಗೂ ವ್ಯಾವಹಾರಿಕವಾಗಿ ನಡವಳಿಕೆಯನ್ನು ಮಕ್ಕಳು ಪ್ರಾಯೋಗಿಕವಾಗಿ ಕಲಿತುಕೊಂಡರು. ಆಟದ ಮೂಲಕ ಕಲಿಕೆಯ ಈ ವಿಧಾನ ಮಕ್ಕಳಲ್ಲಿ ಆತ್ಮವಿಶ್ವಾಸ ಹಾಗೂ ಆರ್ಥಿಕ ಜ್ಞಾನ ಹೆಚ್ಚಿಸಿತು.ಹಿರಿಯ ಶಿಕ ಆರ್​.ಎಚ್​.ಕಾಳಿ, ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ಯು.ಬಿ.ಶಿಂಗಾರಗೊಪ್ಪ, ಪ್ರಿಯದರ್ಶನಿ ಉಡಕೇರಿ, ಸುಮನ ಯಾತನೂರ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net