ಕೈತೋಟ ರಚನೆಯಿಂದ ಆರೋಗ್ಯ ವೃದ್ಧಿ

improving-health-through-gardening
improving-health-through-gardening
Published on
gardening ಹುಳಿಯಾರು: ಕೈ ತೋಟದಿಂದ ಮನೆ ಮಂದಿಗೆ ಪೌಷ್ಟಿಕ ಆಹಾರ ಒದಗಿಸುವ ಜತೆಗೆ ಆಹ್ಲಾದಕರ ವಾತಾವರಣ ನೀಡಿ ಆರೋಗ್ಯದಿಂದ ಇರಲು ಸಹಕಾರಿಯಾಗುತ್ತದೆ ಎಂದು ಯೋಜನಾಧಿಕಾರಿ ಡಿ.ರಾಮಚಂದ್ರ ತಿಳಿಸಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿಯೋಜನೆಯಿಂದ ಹುಳಿಯಾರು ಹೋಬಳಿಯ ಗಾಣದಾಳು ಗ್ರಾಪಂ ವ್ಯಾಪ್ತಿಯ ಸೋಮನಹಳ್ಳಿಯ ಮಾರುತಿ ಜ್ಞಾನ ವಿಕಾಸ ಕೇಂದ್ರದಲ್ಲಿ ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದ ಸೃಜನಶಿಲ ಕಾರ್ಯಕ್ರಮದಡಿಯಲ್ಲಿ ಆಯೋಜಿಸಿದ್ದ ಕೈತೋಟ ರಚನೆ ಬಗ್ಗೆ ಮಾಹಿತಿ ನೀಡುವ ಕಾರ್ಯಕ್ರಮದಲ್ಲಿ 187 ಮಲ್ಲಿಗೆ ಹೂ ಗಿಡಗಳನ್ನು ಕೇಂದ್ರ ಸದಸ್ಯರಿಗೆ ವಿತರಿಸಿ ಮಾತನಾಡಿದರು.
ಕೈ ತೋಟ ರಚನೆ ಎಂದರೆ ಮನೆಯ ಸುತ್ತಮುತ್ತಲ ಹಿತ್ತಲಿನಲ್ಲಿ ಅಥವಾ ಬಾಲ್ಕನಿಯಲ್ಲಿ ಹಣ್ಣು, ಹೂವು, ತರಕಾರಿ ಮತ್ತು ಔಷಧೀಯ ಸಸ್ಯಗಳನ್ನು ಸ್ವಯಂ ಬೆಳೆಸುವ ಚಿಕ್ಕ ತೋಟ. ಇದರಿಂದ ಮನೆ ಮಂದಿಗೆ ಪೌಷ್ಟಿಕ ಆಹಾರ, ಆಹ್ಲಾದಕರ ವಾತಾವರಣ ನೀಡುತ್ತದೆ ಎಂದರು.
ಕೈ ತೋಟದಿಂದ ಸ್ವಯಂ ತಾಜಾ ಮತ್ತು ರಾಸಾಯನಿಕ ಮುಕ್ತ ತರಕಾರಿ, ಹಣ್ಣುಗಳನ್ನು ಮನೆಯಲ್ಲೆ ಬೆಳೆದು ಸೇವಿಸಬಹುದು. ಗಾರ್ಡನಿಂಗ್​ ಮಾಡುವುದರಿಂದ ದೈಹಿಕವಾಗಿ ಹಾಗೂ ಮಾನಸಿಕವಾಗಿ ಆರೋಗ್ಯ ಸುಧಾರಿಸಿ ಒತ್ತಡ ಕಡಿಮೆಯಾಗುತ್ತದೆ ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net