ಶಾಲಾ ಆವರಣದಲ್ಲಿ ಸುರಕ್ಷತಾ ಕ್ರಮ ಕೈಗೊಳ್ಳಿ

ಚಿಕ್ಕನಾಯಕಹಳ್ಳಿಯ ತೀನಂಶ್ರೀ ಭವನದಲ್ಲಿ ಹಮ್ಮಿಕೊಂಡಿದ್ದ ವಿಶೇಷ ಸಭೆಯನ್ನು ಶಾಸಕ ಸಿ.ಬಿ.ಸುರೇಶ್‌ಬಾಬು ಉದ್ಘಾಟಿಸಿದರು. ಬಿಇಒ ಸಿ.ಎಸ್ ಕಾಂತರಾಜು, ಅಕ್ಷರದಾಸೋಹ ಸಹಾಯಕ ನಿರ್ದೇಶಕ ಗವಿರಂಗಯ್ಯ, ಸರ್ಕಾರಿ ನೌಕರರ ಸಂದ ನಿಕಟಪೂರ್ವ ಅಧ್ಯಕ್ಷ ಅರ್.ಪರಶಿವಮೂರ್ತಿ ಇದ್ದರು.
ಚಿಕ್ಕನಾಯಕಹಳ್ಳಿಯ ತೀನಂಶ್ರೀ ಭವನದಲ್ಲಿ ಹಮ್ಮಿಕೊಂಡಿದ್ದ ವಿಶೇಷ ಸಭೆಯನ್ನು ಶಾಸಕ ಸಿ.ಬಿ.ಸುರೇಶ್‌ಬಾಬು ಉದ್ಘಾಟಿಸಿದರು. ಬಿಇಒ ಸಿ.ಎಸ್ ಕಾಂತರಾಜು, ಅಕ್ಷರದಾಸೋಹ ಸಹಾಯಕ ನಿರ್ದೇಶಕ ಗವಿರಂಗಯ್ಯ, ಸರ್ಕಾರಿ ನೌಕರರ ಸಂದ ನಿಕಟಪೂರ್ವ ಅಧ್ಯಕ್ಷ ಅರ್.ಪರಶಿವಮೂರ್ತಿ ಇದ್ದರು.
Published on

ಚಿಕ್ಕನಾಯಕಹಳ್ಳಿ :

ಟನೆಗಳು ನಮಗೆ ಮುನ್ನೆಚ್ಚರಿಕೆ ತಿಳಿಸುತ್ತವೆ ಅವುಗಳಿಂದ ಪಾಠ ಕಲಿಯಬೇಕು. ಈ ನಿಟ್ಟಿನಲ್ಲಿ ತಾಲೂಕಿನ ಶಾಲಾ ಆವರಣದಲ್ಲಿ ಯಾವುದೇ ಅಹಿತಕರ ಟನೆ ನಡೆಯದಂತೆ ಮಕ್ಕಳ ಸುರಕ್ಷತೆ ಕಾಪಾಡಬೇಕು ಎಂದು ಶಾಸಕ ಸಿ. ಬಿ. ಸುರೇಶ್‌ಬಾಬು ತಿಳಿಸಿದರು.

ಪಟ್ಟಣದ ತೀನಂಶ್ರೀ ಭವನದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯ ಶಾಲಾ ಶಿಕ್ಷಣ ಇಲಾಖೆಯಿಂದ ಹಮ್ಮಿಕೊಂಡಿದ್ದ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ಮುಖ್ಯ ಶಿಕ್ಷಕರಿಗೆ ಮಕ್ಕಳ ಸುರಕ್ಷತೆ ಸಂಬಂಧಪಟ್ಟ ವಿಶೇಷ ಸಭೆಯಲ್ಲಿ ಮಾತನಾಡಿ, ಬೆಳಗಿಹಳ್ಳಿಯಲ್ಲಿ ನಡೆದ ಟನೆ ನಮಗೆ ಎಚ್ಚರಿಕೆ ನೀಡಿದೆ ಎಂದರು.

ನಿಮ್ಮ ಶಾಲಾ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಸಿವಿಲ್ ಕಾಮಗಾರಿ ಬಗ್ಗೆ, ಶಿಥಲಗೊಂಡಿರುವಂತಹ ಕಟ್ಟಡ ನೆಲಸಮ ವಾಡಬೇಕಾದ ಕೊಠಡಿಗಳ ವಾಹಿತಿ, ತೆರವುಗೊಳಿಸಬೇಕಿರುವ ಮರಗಳು, ತೆರವುಗೊಳಿಸಬೇಕಿರುವ ವಿದ್ಯುತ್ ಕಂಬ, ಶಾಲಾ ಕಟ್ಟಡ ಸುರಕ್ಷತೆ, ಕುಡಿಯುವ ನೀರಿನ ತಪಾಸಣೆ, ಬಿಸಿಯೂಟದ ತಯಾರಿ ಹಾಗೂ ವಿತರಣೆ ತುರ್ತಾಗಿ ದುರಸ್ಥಿ ವಾಡಬೇಕಾದ ಕೊಠಡಿಗಳ ವಿವರ ಸಂಬಂಧಪಟ್ಟ ಇಲಾಖೆ ಗಮನಕ್ಕೆ ತರುವ ಮೂಲಕ ಎಚ್ಚರಿಕೆ ವಹಿಸಬೇಕು ಎಂದರು.

ತಾಲೂಕಿನ 150 ಶಾಲೆಗಳ ನೂತನ ಕಟ್ಟಡ, ರಿಪೇರಿ, ಶೌಚಗೃಹ ನಿರ್ವಾಣಕ್ಕಾಗಿ 50 ಕೋಟಿ ರೂ. ವೆಚ್ಚದಲ್ಲಿ ಯೋಜನೆ ಸಿದ್ದಪಡಿಸಿ ಗಣಿಬಾದಿತ ಪ್ರದೇಶಾಭಿವೃದ್ಧಿಯ ಅನುದಾನದಲ್ಲಿ ಅಭಿವೃದ್ಧಿ ವಾಡಲಾಗುವುದು. ಬೆಳಗಿಹಳ್ಳಿ ಮೃತ ವಿದ್ಯಾರ್ಥಿ ಕುಟುಂಬಕ್ಕೆ ಸರ್ಕಾರದಿಂದ 5 ಲಕ್ಷ ರೂ. ನೀಡುವುದಾಗಿ ತಿಳಿಸಿದರು.

ಲೋಕೊಪಯೋಗಿ ಇಲಾಖೆ ಎಇಇ ತಿಮ್ಮಣ್ಣ ವಾತನಾಡಿ, ತಾಲೂಕಿನ ಯಾವುದೇ ಶಾಲಾ ಕಟ್ಟಡಗಳು ಶಿಥಿಲಗೊಂಡಿದ್ದರೂ, ವಾಹಿತಿ ನೀಡಿದರೆ ನಾವು ಪರಿಶೀಲಿಸಿ ಅಗತ್ಯ ಕ್ರಮಕೈಗೊಳ್ಳುತ್ತೇವೆ ಎಂದರು.

ವಲಯ ಅರಣ್ಯಾಧಿಕಾರಿ ಅಮೀತ್ ವಾತನಾಡಿ, ತಾಲೂಕಿನಲ್ಲಿ ಯಾವುದೇ ಶಾಲಾ ಆವರಣದಲ್ಲಿ ಅಪಾಯದಲ್ಲಿರುವಂತ ಮರಗಳ ತೆರವು ವಾಡಲು ಕ್ರಮಕೈಗೊಳ್ಳುತ್ತೆವೆ. ಸಾಧ್ಯವಾದಷ್ಟು ಬೇಸಿಗೆಯಲ್ಲಿ ಕೆಲಸ ವಾಡಿದರೆ ಮಳೆಗಾಲದ ಅವಧಿಯಲ್ಲಿ ಅಪಾಯ ತಪ್ಪುತ್ತವೆ ಎಂದರು.

ಪ್ರಾಥಮಿಕ ಶಾಲಾ ಶಿಕ್ಷಕರ ಸಂದ ಅದ್ಯಕ್ಷ ದುರ್ಗಯ್ಯ, ವೆಂಕಟರಾಮಯ್ಯ,ಅಂಗವಿಕಲ ನೌಕರರ ಸಂದ ಅಧ್ಯಕ್ಷ ಶಿವಕುವಾರ್, ಜಯಣ್ಣ, ಸುಹಾಸ್, ರಕ್ಷಿತ್, ಉಮೇಶ್, ಯೋಗಿಶ್, ಪ್ರಕಾಶ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net