ತಾಲೂಕಿನಲ್ಲಿ ಭೂ ಅಕ್ರಮ ಅವ್ಯಾಹತ land encroachment

ತಾಲೂಕಿನಲ್ಲಿ ಭೂ ಅಕ್ರಮ ಅವ್ಯಾಹತ land encroachment
ತಾಲೂಕಿನಲ್ಲಿ ಭೂ ಅಕ್ರಮ ಅವ್ಯಾಹತ land encroachment
Published on

ಪ್ರಮುಖ ಮುಖ್ಯಾಂಶಗಳು

  • ಮಾಜಿ ಶಾಸಕ ಕೆ.ಎಸ್​. ಮಂಜುನಾಥಗೌಡ ಆರೋಪ
  • 18ರಂದು ಹಿಂದೂ ಸಮಾಜೋತ್ಸವದ ಪೋಸ್ಟರ್​ ಬಿಡುಗಡೆ
ಮಡಿವಾಳ: ತಾಲೂಕಿನಲ್ಲಿ ಬ್ಯಾನರ್​ ರಾಜಕೀಯ ನಡೆಯುತ್ತಿದ್ದು, ತಹಸೀಲ್ದಾರ್​ ಹಾಗೂ ಶಾಸಕ ಕೆ.ವೈ. ನಂಜೇಗೌಡ ಅವರು ಮಾಡಿರುವ ಭೂ ಅಕ್ರಮಗಳು ತಾಲೂಕಿನಾದ್ಯಂತ ತುಂಬಿ ಹೋಗಿವೆ ಎಂದು ಮಾಜಿ ಶಾಸಕ ಕೆ.ಎಸ್​ಮಂಜುನಾಥಗೌಡ ಆರೋಪಿಸಿದರು. land encroachment
ಜ.18ರಂದು ನಗರದ ಕ್ರೀಡಾಂಗಣದಲ್ಲಿ ಆಯೋಜಿಸಿರುವ ಹಿಂದೂ ಸಮಾಜೋತ್ಸವ ಅಂಗವಾಗಿ ಭಾನುವಾರ ಮಾಲೂರು ತಾಲೂಕು ಗೇರುಪುರ ಗ್ರಾಮದಲ್ಲಿ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ತಹಸೀಲ್ದಾರ್​ ಎಂ.ವಿ.ರೂಪಾ ಅವರು ಕೆ.ವೈ.ನಂಜೇಗೌಡ ಅವರ ಪ್ರತಿನಿಧಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರಿಬ್ಬರೂ ಮಾಡಿರುವ ಅನೇಕ ಭೂ ಅಕ್ರಮಗಳನ್ನು ದಾಖಲೆ ಸಮೇತ ಬಹಿರಂಗಪಡಿಸುತ್ತೇವೆ. ಈ ಬಗ್ಗೆ ಜಿಲ್ಲಾಧಿಕಾರಿ ಹಾಗೂ ನ್ಯಾಯಾಲಯದ ಗಮನಕ್ಕೂ ತರಲಾಗುವುದು. ಏನೇ ಇದ್ದರೂ ನ್ಯಾಯಾಲಯಕ್ಕೆ ಉತ್ತರಿಸಲಿ ಎಂದರು.
ತೊರ್ನಹಳ್ಳಿ, ಬೈರನಹಳ್ಳಿ, ಗಂಗಾಪುರ ಸೇರಿ ತಾಲೂಕಿನಾದ್ಯಂತ ನಕಲಿ ದಾಖಲೆ ಸೃಷ್ಟಿಸಿ ಸುಮಾರು ಎಕರೆ ಜಮೀನನ್ನು ಪರಭಾರೆ ಮಾಡಿದ್ದಾರೆ. ಬೇರೆಯವರಿಂದ ಹಣ ಪಡೆದುಕೊಂಡಿದ್ದಾರೆ. ನಮ್ಮ ಜನ್ಮದಿನಕ್ಕೆ ಅಭಿಮಾನಿಗಳು ಅಳವಡಿಸಿದ್ದ ಬ್ಯಾನರ್​ ತೆರವುಗೊಳಿಸುವಷ್ಟರಮಟ್ಟಕ್ಕೆ ನಡೆದುಕೊಳ್ಳಬಾರದಾಗಿತ್ತು ಎಂದರು.
ಮುಖಂಡರಾದ ಗೇರುಪುರ ಎಚ್​.ಎನ್​. ನಾಗರಾಜ್​, ಮದನ್​, ಬಿ.ಸಿ. ಮುನಿರಾಜು, ಬೆಳ್ಳಾವಿಯ ವೀರಭದ್ರಯ್ಯ, ಬೈರನಹಳ್ಳಿ ಭಾಗ್ಯಮ್ಮ ಹರೀಶ್​, ದೇವರಾಜ್​, ಗೋಪಾಲ್​, ಎಚ್​.ಸಿ. ನಾಗೇಶ್​, ಮಾರಪ್ಪ, ಆನಂದ್​, ವೆಂಕಟೇಶ್​, ಮಹೇಶ್​ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net