_1766066733826.webp?w=480&auto=format%2Ccompress&fit=max)
_1766066733826.webp?w=480&auto=format%2Ccompress&fit=max)
ಪ್ರಮುಖ ಮುಖ್ಯಾಂಶಗಳು
ಬೆಂಗಳೂರು:ಜೆಮ್‌ಶೆಡ್ಟಾಟಾರವರ ದೂರದೃಷ್ಟಿ ಮತ್ತುಮೈಸೂರು ಮಹಾರಾಜರ ಸಹಕಾರದಿಂಸಸ್ಥಾಪನೆಯಾದ ದೇಶದ ಪ್ರತಿಷ್ಠಿತವಿಜ್ಞಾನ ಸಂಸ್ಥೆಯಾಗಿರುವ ಇಂಡಿಯನ್ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್(ಭಾರತೀಯವಿಜ್ಞಾನ ಸಂಸ್ಥೆ)ನಲ್ಲಿ ಶಿಕ್ಷಣಪಡೆದು ದೇಶ ವಿದೇಶಗಳಲ್ಲಿ ನೆಲೆಸಿರುವಹಳೇ ವಿದ್ಯಾರ್ಥಿಗಳ ಸಮಾಗಮಕ್ಕೆಐಐಎಸ್‌ಸಿ ಅಲ್ಯುಮ್ನಿ ಅಸೋಸಿಯೇಷನ್(ಐಐಎಸ್‌ಸಿಎಎ)ಸುವರ್ಣ ಮಹೋತ್ಸವಗುರುವಾರ ಸಾಕ್ಷಿಯಾಯಿತು.
ಐಐಎಸ್‌ಸಿಆವರಣದ ಸತೀಶ್ ಧವನ್ ಸಭಾಂಗಣದಲ್ಲಿಆರಂಭವಾದ ಸುವರ್ಣ ಮಹೋತ್ಸವಕಾರ್ಯಕ್ರಮಕ್ಕೆ ದೀಪ ಬೆಳಗಿಸುವಮೂಲಕ ಚಾಲನೆ ದೊರೆಯಿತು. ಐಐಎಸ್‌ಸಿಎಎಅಧ್ಯಕ್ಷ ನಿವೃತ್ತ ಲೆಫ್ಟಿನೆಂಟ್ಕರ್ನಲ್ ಜಿ.ರಾಜಾರಾಮ್ಸರ್ವರನ್ನು ಸ್ವಾಗತಿಸಿದರು.
ಹಿರಿಯವಿಜ್ಞಾನಿಗಳಾದ ಪ್ರೊ.ಇ.ಎಸ್.ದ್ವಾರಕಾದಾಸ,ಪ್ರೊ.ಗೋವಿಂದನ್ರಂಗರಾಜನ್,ಪ್ರೊ.ಜಿ.ಪದ್ಮನಾಭನ್ಮತ್ತಿತರರು ಮುಖ್ಯಅತಿಥಿಗಳಾಗಿಪಾಲ್ಗೊಂಡಿದ್ದರು.
ಸಮಾರಂಭದಲ್ಲಿಸುವರ್ಣ ಮಹೋತ್ಸವದ ಸ್ಮರಣಸಂಚಿಕೆಯನ್ನು ಬಿಡುಗಡೆ ಮಾಡಲಾಯಿತು.ಇದೇ ವೇಳೆಅತ್ಯುತ್ತಮ ಸಾಧನೆ ಮಾಡಿದ ಸಂಸ್ಥೆಯಹಳೇ ವಿದ್ಯಾರ್ಥಿಗಳನ್ನುಸನ್ಮಾನಿಸಲಾಯಿತು.ಹಳೇ ವಿದ್ಯಾರ್ಥಿಗಳಸ್ಟಾರ್ಟ್‌ಅಪ್‌ಗಳ ಪ್ರದರ್ಶನನಡೆಯಿತು.ದಿನಪೂರ್ತಿನಡೆದ ವಿವಿಧ ಗೋಷ್ಠಿಗಳಲ್ಲಿ ಹಳೇವಿದ್ಯಾರ್ಥಿಗಳು ಹಾಗೂ ವಿಜ್ಞಾನಕ್ಷೇತ್ರದ ತಜ್ಞರು ಉಪನ್ಯಾಸನೀಡಿದರು.
ದೇಶಕ್ಕೆ ವಿಶೇಷ ಕೊಡುಗೆ ನೀಡಿರುವ ವಿಜ್ಞಾನಿಗಳು
ಭಾರತೀಯ ವಿಜ್ಞಾನ ಸಂಸ್ಥೆಗೆ ಕೇವಲ ದೇಶ ಮಾತ್ರವಲ್ಲದೆ ಜಾಗತಿಕ ಮನ್ನಣೆ ಇದೆ. ಇಲ್ಲಿ ಕಲಿತು ನಾಸಾ ಸಂಸ್ಥೆವರೆಗೆ ಹೋದ ಸಾಧಕರಿದ್ದಾರೆ. ಅಂತಹ ಎಲ್ಲ ಹಳೇ ವಿದ್ಯಾರ್ಥಿಗಳು ಸುವರ್ಣ ಮಹೋತ್ಸವಕ್ಕೆ ಆಗಮಿಸಿದ್ದರು. ನೀತಿ ಆಯೋಗದ ಸದಸ್ಯರಾದ ಡಾ.ವಿಜಯಕುಮಾರ್ ಸಾರಸ್ವತ್ ಅವರು ರಕ್ಷಣಾ ಕ್ಷೇತ್ರದ ಸಂಶೋಧನೆ ಕುರಿತು ಉಪನ್ಯಾಸ ನೀಡಿದರು. ನಾಸಾದ ವಿಜ್ಞಾನಿ ಡಾ. ಪಿ.ಗುರುಸ್ವಾಮಿ ವೈಮಾನಿಕ ಸಂಶೋಧನೆ ಕುರಿತು ಉಪನ್ಯಾಸ ನೀಡಿದರು. ಮಿಸೌರಿ ವಿಶ್ವವಿದ್ಯಾಲಯದ ಮುಖ್ಯಸ್ಥರಾದ ಡಾ.ಕಟ್ಟೇಶ್ ವಿ.ಕತ್ತಿ ವೈದ್ಯಕೀಯ ಮತ್ಯ ನ್ಯಾನೋ ತಂತ್ರಜ್ಞಾನದ ಕುರಿತು ಉಪನ್ಯಾಸ ನೀಡಿದರು. ಇನ್ನುಳಿದಂತೆ ಡಾ.ಲಕ್ಷ್ಮೀನಾರಾಯಣ್, ಡಾ.ಎಚ್.ಎಸ್.ಶಂಕರ್, ಡಾ.ಕೋಟಾ ಹರಿನಾರಾಯಣ್, ಡಾ.ಸ್ವಾಮಿ ಮನೋಹರ್, ಡಾ.ಸಜಲ್ ದಾಸ್ ಮತ್ತಿತರ ತಜ್ಞರು ವಿವಿಧ ವಿಷಯಗಳ ಕುರಿತು ಉಪನ್ಯಾಸ ನೀಡಿದರು. ನಂತರ ಐಐಎಸ್‌ಸಿಎಎಯ ಭವಿಷ್ಯ ಕುರಿತ ಪ್ಯಾನಲ್ ಚರ್ಚೆ ನಡೆಯಿತು.
ಐಐಎಸ್‌ಸಿಎಎಯಸುವರ್ಣ ಮಹೋತ್ಸವದ ಅಂಗವಾಗಿಶನಿವಾರ (ಡಿ20)ಸಂಜೆ 6ರಿಂದಜೆ.ಎನ್.ಟಾಟಾ ಸಭಾಂಗಣದಲ್ಲಿಮಾನಸಿ ಪ್ರಸಾದ್ ಮತ್ತು ತಂಡದವರಿಂದಗೋಲ್ಡನ್ ಮೆಲೊಡೀಸ್ ಸಂಗೀತಕಾರ್ಯಕ್ರಮ ನಡೆಯಲಿದೆ.ಭಾನುವಾರ (ಡಿ.21)ಬೆಳಗ್ಗೆ 7ಗಂಟೆಗೆ ಐಐಎಸ್‌ಸಿಕ್ಯಾಂಪಸ್‌ನಲ್ಲಿ ನೈಸರ್ಗಿಕನಡಿಗೆ ನಂತರ ಕ್ರಿಕೆಟ್ ಪಂದ್ಯಾವಳಿಆಯೋಜಿಸಲಾಗಿದೆ.