ಇಪ್ಕೋ ಟೋಕಿಯೋ ಸಂಸ್ಥೆಗೆ ೨೫ ವರ್ಷ ಸಂಭ್ರಮಾಚರಣೆ

Ifko Tokio
Ifko Tokio
Published on
ವಿಜಯವಾಣಿ ಸುದ್ದಿಜಾಲ ಕೋಲಾರ
ಕಳೆದ ೨೫ ವರ್ಷಗಳ ಹಿಂದೆ ಸ್ಥಾಪನೆಯಾದ ಇಪ್ಕೋ ಟೋಕಿಯೋ ಸಂಸ್ಥೆ ಇಡೀ ದೇಶದ್ಯಾಂತ ಉತ್ತಮ ಸೇವೆ ಒದಗಿಸಿಕೊಂಡು ಬರುತ್ತಿದ್ದು, ಏಷ್ಯಾದಲ್ಲಿ ಮೊದಲ ಸ್ಥಾನ ಪಡೆದುಕೊಳ್ಳುವ ಮೂಲಕ ಗ್ರಾಹಕರ ವಿಶ್ವಾಸವನ್ನೂ ಗಳಿಸಿದೆ ಎಂದು ಇಪ್ಕೋ ಟೋಕಿಯೋ ಕೋಲಾರ ವಿಭಾಗದ ವ್ಯವಸ್ಥಾಪಕ ಮಂಜುನಾಥ್ ಸಂತಸ ವ್ಯಕ್ತಪಡಿಸಿದರು.
ಕೋಲಾರ ನಗರದ ಬಂಗಾರಪೇಟೆ ವೃತ್ತದಲ್ಲಿರುವ ಇಪ್ಕೋ ಟೋಕಿಯೋ ಕಛೇರಿಯಲ್ಲಿ ಗುರುವಾರ ೨೫ನೇ ವರ್ಷದ ರಜತ ಮಹೋತ್ಸವ ಆಚರಿಸಿ ಮಾತನಾಡಿ, ಇಡೀ ದೇಶದ್ಯಾಂತ ಇರುವ ಇಪ್ಕೋಟೋಕಿಯೋ ಸಂಸ್ಥೆ ಸ್ಥಾಪನೆಯಾದಾಗಿಂದ ಕೋಲಾರ ಕ್ಷೇತ್ರದ ಮಾಜಿ ಶಾಸಕರಾದ ಕೆ.ಶ್ರೀನಿವಾಸಗೌಡರೇ ಅಧ್ಯಕ್ಷರಾಗಿ ಸಂಸ್ಥೆಗೆ ಉತ್ತಮ ನಿರ್ದೇಶನ ನೀಡುತ್ತಾ ಬಂದಿದ್ದಾರೆ. ಕೋಲಾರದವರೇ ರಾಷ್ಟ್ರೀಯ ಅಧ್ಯಕ್ಷರಾಗಿರುವ ಕಾರಣ ಕೋಲಾರ ಶಾಖೆಗೆ ರಾಷ್ಟ್ರೀಯ ಅಧ್ಯಕ್ಷರಿಂದ ಉತ್ತಮ ಬೆಂಬಲ ಸಿಗುತ್ತಿದೆ. ಎಲ್ಲಾ ರೀತಿಯ ವಿಮೆ ಸೌಲಭ್ಯಗಳನ್ನು ಒದಗಿಸಲಾಗುತ್ತಿದ್ದು, ನೋಂದವರ ಜೀವನಕ್ಕೆ ಬೆಳಕಾಗಿ ಕರ್ತವ್ಯ ನಿರ್ವಹಿಸುತ್ತಿದೆ. ಇನ್ನು ಮುಂದಿನ ದಿನಗಳಲ್ಲಿ ಗ್ರಾಹಕರಿಗೆ ಇನ್ನಷ್ಟು ಸೌಲಭ್ಯಗಳನ್ನು ಒದಗಿಸುವ ಮೂಲಕ ಜನತೆ ಇಪ್ಕೋ ಟೋಕಿಯೋ ಸಂಸ್ಥೆ ಮೇಲೆ ಇಟ್ಟಿರುವ ನಂಬಿಕೆಯನ್ನು ದ್ವಿಗುಣಗೊಳಿಸುತ್ತೇವೆ ಎಂದರು.
ಕೋಲಾರ ಶಾಖೆಯ ಮಹೇಶ್, ಪ್ರವೀಣ್, ನಿಖಿಲ್, ರಾಮಕೃಷ್ಣ, ವರುಣ್ ಸೇರಿದಂತೆ ಎಲ್ಲಾ ಸಿಬ್ಬಂದಿ ಭಾಗವಹಿಸಿ ಸಂಭ್ರಮಾಚರಣೆ ಭಾಗವಹಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net