ನಿಯಮ ಉಲ್ಲಂಘಿಸಿದರೆ ಮಾಲೀಕರೇ ಹೊಣೆ

ಚನ್ನಮ್ಮನ ಕಿತ್ತೂರು ಪೊಲೀಸ್​ ಠಾಣೆಯಲ್ಲಿ ಹಮ್ಮಿಕೊಂಡಿದ್ದ ಮದ್ಯದಂಗಡಿ ಹಾಗೂ ಬಾರ್​ ಮಾಲೀಕರ ಸಭೆಯಲ್ಲಿ ಸಿಪಿಐ ಶಿವಾನಂದ ಗುಡುಗನಟ್ಟಿ ಮಾತನಾಡಿದರು.
ಚನ್ನಮ್ಮನ ಕಿತ್ತೂರು ಪೊಲೀಸ್​ ಠಾಣೆಯಲ್ಲಿ ಹಮ್ಮಿಕೊಂಡಿದ್ದ ಮದ್ಯದಂಗಡಿ ಹಾಗೂ ಬಾರ್​ ಮಾಲೀಕರ ಸಭೆಯಲ್ಲಿ ಸಿಪಿಐ ಶಿವಾನಂದ ಗುಡುಗನಟ್ಟಿ ಮಾತನಾಡಿದರು.
Published on
ಚನ್ನಮ್ಮನ ಕಿತ್ತೂರು: ಸರ್ಕಾರ ನಿಯಮಾವಳಿ ಪ್ರಕಾರ ಅಪ್ರಾಪ್ತರು ಬಾರ್​ ಮತ್ತು ಮದ್ಯದ ಅಂಗಡಿ ಪ್ರವೇಶಿಸುವುದನ್ನು ನಿಷೇಧಿಸಲಾಗಿದೆ. 21 ವಯಸ್ಸಿಗಿಂತ ಕಡಿಮೆ ಇರುವ ಯುವಕರಿಗೆ ಮದ್ಯ ಮಾರಾಟ ಮಾಡಬಾರದು ಎಂದು ಸಿಪಿಐ ಶಿವಾನಂದ ಗುಡುಗನಟ್ಟಿ ಸೂಚನೆ ನೀಡಿದರು. ಪೊಲೀಸ್​ ಠಾಣೆಯಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಮದ್ಯದಂಗಡಿ ಹಾಗೂ ಬಾರ್​ ಮಾಲೀಕರ ಸಭೆಯಲ್ಲಿ ಮಾತನಾಡಿ, ಗ್ರಾಹಕರಿಗೆ ಮದ್ಯ ಪೂರೆಸುವ ಮುನ್ನ ಅಥವಾ ಮದ್ಯದ ಅಂಗಡಿ, ಬಾರ್​ಗಳಿಗೆ ಪ್ರವೇಶ ನೀಡುವ ಮುನ್ನ ಕಡ್ಡಾಯವಾಗಿ ಸರ್ಕಾರ ನೀಡಿದ ಯಾವುದೇ ಗುರುತಿನ ಚೀಟಿ ತೋರಿಸಬೇಕು. ಪಬ್​, ಬಾರ್​, ಕ್ಲಬ್​, ಲಾಡ್ಜ್​ ಹಾಗೂ ರೆಸ್ಟೋರೆಂಟ್​ ಮದ್ಯ ಪೂರೈಸುವ ಇತರೆ ಸಂಸ್ಥೆ ಆವರಣ ಮತ್ತು ಪ್ರವೇಶ ದ್ವಾರಗಳಲ್ಲಿ ಸಿಸಿಟಿವಿ ದಶ್ಯಾವಳಿ ಸುರತವಾಗಿ ಸಂರಸಬೇಕು ಎಂದು ತಿಳಿಸಿದರು. ಕರ್ನಾಟಕ ಅಬಕಾರಿ ನಿಯಮ 1967ರ ನಿಯಮ 10ರ ಪ್ರಕಾರ ಮಾನಸಿಕ ಅಸ್ವಸ್ಥರಾದವರಿಗೆ , ಕುಡಿದಿದ್ದಾರೆಂದು ತಿಳಿದವರಿಗೆ, ಗಲಭೆ, ಶಾಂತಿ ಭಂಗ ತರುವವರು ಹಾಗೂ ಕರ್ತವ್ಯದಲ್ಲಿರುವ ಅಬಕಾರಿ, ಪೊಲೀಸ್​, ರೆಲ್ವೆ ನೌಕರರು ಮತ್ತು ಸಮವಸ್ತ್ರದಲ್ಲಿರುವ ಚಾಲಕರಿಗೆ ಮದ್ಯ ಮಾರಾಟ ಮಾಡಬಾರದು. ಮದ್ಯ ಮಾರಾಟ ಮಾಡುವ ಸಂಸ್ಥೆ ಆವರಣದಲ್ಲಿ ನಡೆಯುವ ಯಾವುದೇ ಕಾನೂನು ಉಲ್ಲಂನೆ ಟನೆಗೆ ಮಾಲೀಕರೇ ನೇರ ಹೊಣೆಯಾಗುತ್ತಾರೆ ಎಂದು ಎಚ್ಚರಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net