ಈಗಾಗಲೇ ರಾಜ್ಯದಲ್ಲಿ ಜಾರಿಯಲ್ಲಿರುವ ರೈತರ ಜಮೀನುಗಳಲ್ಲಿನ ಪಂಪ್‌ಸೆಟ್‌ಗಳಿಗೆ ಉಚಿತ್ ವಿದ್ಯುತ್, ಗೃಹ ಜ್ಯೋತಿ, ಭಾಗ್ಯ ಜ್ಯೋತಿ, ಕುಟೀರ ಜ್ಯೋತಿ, ರಾಜೀವ ಗಾಂಧಿ ಗ್ರಾಮೀಣ ವಸತಿ ಯೋಜನೆಯಡಿ ದಿನ ದಯಾಳ ವಿದ್ಯುತ್ ಸೇರಿ ಬಡವರಿಗೆ ಯೋಜನೆ ಮುಂದುವರೆಸಿಕೊಂಡು ಹೋಗಲು ಸಾಧ್ಯವಾಗದಿರಬಹುದು. ವಿದ್ಯುತ್ ನಿಗಮಗಳು ಖಾಸಗೀಕರಣವಾದರೆ, ಸರ್ಕಾರಿ ನೇಮಕಾತಿ ಪ್ರಕ್ರಿಯೆ ನಿಂತು ಹೋಗಿ ಪ್ರತಿಭಾವಂತ ಉದ್ಯೋಗ ಆಕಾಂಕ್ಷೆಗಳಿಗೆ ಸರ್ಕಾರಿ ಉದ್ಯೋಗ ಗಗನಕುಸುಮವಾಗಲಿದೆ. ಈ ಪರವಾನಗಿ ಪ್ರಕ್ರಿಯೆ ಕೂಡಲೇ ಕೈ ಬಿಡಬೇಕು, ಇಲ್ಲವಾದಲ್ಲಿ ರಾಜ್ಯದ 31 ಜಿಲ್ಲೆಗಳಲ್ಲಿ ಹೋರಾಟ ಮಾಡಲಾಗುವುದು ಎಂದು ಆಗ್ರಹಿಸಿ ಮುಖ್ಯಮಂತ್ರಿಗಳಿಗೆ ಬರೆದ ಮನವಿ ಪತ್ರ ಅಧಿಕಾರಿಗಳಿಗೆ ಸಲ್ಲಿಸಿದರು. ರೈತ ಸಂಘ, ಹಸಿರು ಸೇನೆ ಉಪಾಧ್ಯಕ್ಷ ಕಲ್ಲು ಸೊನ್ನದ, ಮುದಕಣ್ಣ ಹೊರ್ತಿ, ಅನೀಲ ಗೊಳಸಂಗಿ, ರೇವಣಸಿದ್ಧ ಮಣ್ಣೂರ, ಬಸವರಾಜ ಸಂಗಮ, ಎಸ್.ಎಂ. ಮನಗೂಳಿ, ಬಿ.ಎಸ್. ಸಂಕನಾಳ, ಯಲ್ಲಪ್ಪ ಕುಂಬಾರ, ಶರಣಪ್ಪ ಗುಡ್ಡದ ಇತರರಿದ್ದರು.