ರೇಣುಕಾಸ್ವಾಮಿ ಹತ್ಯೆಯ ಇಂಚಿಂಚು ಮಾಹಿತಿ ಹೇಳ್ತೇನೆ

Darshan and Pradush
Darshan and Pradush
Published on

ಪ್ರಮುಖ ಮುಖ್ಯಾಂಶಗಳು

  • ಮಾಫಿ ಸಾಕ್ಷಿ ಅರ್ಜಿ ವಿಚಾರಣೆ ವೇಳೆ ಆರೋಪಿ ಪ್ರದೂಷ್ ಹೇಳಿಕೆ
  • ಆರೋಪಿಯ ಹೇಳಿಕೆ ದಾಖಲಿಸಿಕೊಂಡ ನ್ಯಾಯಾಧೀಶರು

ಬೆಂಗಳೂರು:

ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಮಾಫಿ ಸಾಕ್ಷಿಯಾಗಲು ಅವಕಾಶ ನೀಡಿ ಎಂದು 14ನೇ ಆರೋಪಿ ಪ್ರದೂಷ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಗುರುವಾರವೂ ನಡೆಯಿತು. ಈ ವೇಳೆ ಆರೋಪಿ, ರೇಣುಕಸ್ವಾಮಿ ಹತ್ಯೆ ಪ್ರಕರಣದ ಇಂಚಿಂಚು ಮಾಹಿತಿಯನ್ನೂ ಹೇಳುತ್ತೇನೆ ಎಂದಿದ್ದಾನೆ.

59ನೇ ಸಿಸಿಎಚ್ ಕೋರ್ಟ್‌ನ ನ್ಯಾಯಾಧೀಶರಾದ ಸುಜಾತಾ ಸಾಂಬ್ರಾಣಿ ಅವರು ಅರ್ಜಿ ವಿಚಾರಣೆ ನಡೆಸಿದರು. ಈ ವೇಳೆ ಆರೋಪಿ ಪ್ರದೂಷ್‌ಗೆ ‘ಯಾವ ಅರ್ಜಿ ಸಲ್ಲಿಸಿದ್ದಿರಿ, ಅದರಲ್ಲಿ ಇರುವ ಅಂಶಗಳು ತಿಳಿದಿದ್ದಿರಾ ಎಂದು ಪ್ರಶ್ನಿಸಿದ್ದಾರೆ.
ನ್ಯಾಯಾಧೀಶರ ಪ್ರಶ್ನೆಗೆ ಉತ್ತರಿಸಿದ ಆರೋಪಿ, ‘2024ರ ಜೂನ್ 8ರಂದು ರೇಣುಕಸ್ವಾಮಿ ಎಂಬ ವ್ಯಕ್ತಿಯ ಹತ್ಯೆಯಾಗಿತ್ತು. ಆ ಪ್ರಕರಣದಲ್ಲಿ ನನ್ನ ಪಾತ್ರ ಹಾಗೂ ಇತರರ ಪಾತ್ರ ಏನು ಎಂಬುದನ್ನು ನ್ಯಾಯಾಲಯಕ್ಕೆ ವಿವರಿಸಲು ಸಿದ್ಧನಿದ್ದೇನೆ ಎಂದು ಹೇಳಿದ್ದಾನೆ.
ಯಾರ ಒತ್ತಡಕ್ಕೂ ಮಣಿಯದೇ ಹತ್ಯೆ ಪ್ರಕರಣದ ಸಂಪೂರ್ಣ ಸತ್ಯಾಂಶವನ್ನು ಹೇಳುತ್ತೇನೆ. ಸಲ್ಲಿಸಿದ ಅರ್ಜಿಯ ಎಲ್ಲ ಪುಟಗಳನ್ನು ಓದಿ ಅವುಗಳಿಗೆ ಸಹಿ ಸಹ ಹಾಕಿದ್ದೇನೆ ಎಂದು ನ್ಯಾಯಾಧೀಶರ ಬಳಿ ತಿಳಿಸಿದ.
ನಾಯಾಧೀಶರು, ನಿಮಗೆ ಇಂಗ್ಲೀಷ್ ಓದಲು-ಬರೆಯಲು ಬರುತ್ತಾ ಎಂದು ಪ್ರಶ್ನಿಸಿದರು. ಇದಕ್ಕೆ ಪ್ರದೂಷ್, ಹೌದು ಮಹಾಸ್ವಾಮಿ ಬರುತ್ತದೆ. ನಾನು ಎಂಬಿಎ ಪದವಿ ಪಡೆದಿದ್ದೇನೆ. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೆ ಎಂದು ವಿವರಿಸಿದ್ದಾನೆ. ಆರೋಪಿಯ ಹೇಳಿಕೆಗಳನ್ನು ನ್ಯಾಯಾಧೀಶರು ದಾಖಲಿಸಿಕೊಂಡು ಮಾಫಿ ಸಾಕ್ಷಿ ಅರ್ಜಿ ಆದೇಶವನ್ನು ಆ.24 ಸೋಮವಾರಕ್ಕೆ ಕಾಯ್ದಿರಿಸಿದರು.

ಹುಷಾರ್ ಇಲ್ದಿದ್ರೆ ರೆಸ್ಟ್ ಮಾಡಲಿ..!

ಗುರುವಾರ ನಡೆದ ರೇಣುಕಸ್ವಾಮಿ ಕೊಲೆ ಪ್ರಕರಣದ ವಿಚಾರಣೆ ವೇಳೆ ಪ್ರಮುಖ ಆರೋಪಿ ಪವಿತ್ರಾಗೌಡಾಗೆ ಹುಷಾರ್ ಇಲ್ಲದಿದ್ದರೆ, ರೆಸ್ಟ್ ಮಾಡಿ. ಆದಾಗ್ಯೂ ತಾವು ನ್ಯಾಯಾಲಯದ ನಡಾವಳಿ ನೋಡಬೇಕೆಂದರೆ ವಿಡಿಯೊ ಕಾನ್ಫರೆನ್ಸ್‌ಗೆ ಹಾಜರಾಗುವಂತೆ ನ್ಯಾಯಾಧೀಶರು ಸೂಚಿಸಿದರು. ಆಗ ಪವಿತ್ರಾ ‘ಐ ಆ್ಯಮ್ ನಾಟ್ ವೆಲ್, ಐ ವಿಲ್ ರೆಸ್ಟ್’ ಎಂದು ಮನವಿ ಮಾಡಿಕೊಂಡಳು ಅದಕ್ಕೆ ನ್ಯಾಯಾಧೀಶರು ಸಮ್ಮತಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net