‘ಅಧಿಕಾರ ಹಸ್ತಾಂತರ’ ನಾನು ಏನೂ ಮಾತನಾಡಲ್ಲ: ಸಚಿವ ಎನ್.ಚಲುವರಾಯಸ್ವಾಮಿ

ಕೃಷಿ ಸಚಿವ ಎನ್.ಚಲುವರಾಯಸ್ವಾಮಿ
ಕೃಷಿ ಸಚಿವ ಎನ್.ಚಲುವರಾಯಸ್ವಾಮಿ
Published on

ಪ್ರಮುಖ ಮುಖ್ಯಾಂಶಗಳು

  • ನಮ್ಮಲ್ಲಿ ಯಾವ ಗೊಂದಲಗಳು ಇಲ್ಲ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಸ್ಪಷ್ಟನೆ
ಮೈಸೂರು: ಅಧಿಕಾರ ಹಸ್ತಾಂತರದ ವಿಚಾರದಲ್ಲಿ ನಾವು ಯಾರೇ ಮಾತನಾಡಿದರೂ ನಡೆಯಲ್ಲ. ಅದನ್ನು ತೀರ್ಮಾನ ಮಾಡಬೇಕಾಗಿರುವುದು ನಮ್ಮ ಹೈಕಮಾಂಡ್ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.
ನಗರದಲ್ಲಿ ಶುಕ್ರವಾರ ‘ವಿಜಯವಾಣಿ’ ಕೃಷಿ ಮೇಳದ ಉದ್ಘಾಟನೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಧಿಕಾರ ಹಸ್ತಾಂತರ ವಿಚಾರದ ಕುರಿತು ನಾನು ಏನೂ ಮಾತನಾಡಲ್ಲ. 
ನಾನು ಏನಾದರೂ ಮಾತನಾಡಿದರೆ ನಾನು ಇಲ್ಲಿಂದ ಕಾರು ಹತ್ತುವುದರೊಳಗೆ ಅದಕ್ಕೆ ಬೇರೆ ಬೇರೆ ರೂಪಗಳು ಬರುತ್ತವೆ. ಹೀಗಾಗಿ, ನಾನು ಅದರ ಬಗ್ಗೆ ಮಾತನಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಎಐಸಿಸಿ ಅಧ್ಯಕ್ಷರು, ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಸಿಎಂ, ಡಿಸಿಎಂ ಕುಳಿತು ಮಾತನಾಡಿದರೆ ಮಾತ್ರ ಈ ಕುರಿತು ತೀರ್ಮಾನ ಆಗುತ್ತದೆ. ಬೇರೆ ಯಾರ‌್ಯಾರೋ ಹೇಳಿಕೆ ಕೊಟ್ಟರೆ ಪ್ರಯೋಜನ ಇಲ್ಲ. ಎಐಸಿಸಿ ಅಧ್ಯಕ್ಷರು ಶನಿವಾರ ಬೆಳಗ್ಗೆ 10ಕ್ಕೆ ಸಭೆ ಎಂದರೆ ಪ್ರಮುಖರು ಹೋಗುತ್ತಾರೆ. ಅದೆಲ್ಲ, ಅವರ ಮೇಲೆ ನಿಂತಿರುತ್ತದೆ ಎಂದು ಪ್ರತಿಕ್ರಿಯಿಸಿದರು.
ಸಿಎಂ, ಡಿಸಿಎಂ ಪರಸ್ಪರ ಹೆಗಲ ಮೇಲೆ ಕೈಹಾಕಿಕೊಂಡು ಓಡಾಡುತ್ತಿದ್ದಾರೆ. ನಮ್ಮಲ್ಲಿ ಯಾವ ಗೊಂದಲಗಳು ಇಲ್ಲ. ನಮ್ಮವರೇ ಯಾರೋ ಒಂದಿಬ್ಬರು ಮಾತನಾಡುತ್ತಿರಬಹುದು. 
ಪಕ್ಷದ ಹೈಕಮಾಂಡ್ ತೀರ್ಮಾನಕ್ಕೆ ಬದ್ಧ ಎಂದು ಸಿಎಂ, ಡಿಸಿಎಂ ಇಬ್ಬರು ಹೇಳಿದ್ದಾರೆ. ಅಲ್ಲಿಗೆ ಅದು ಹೈಕಮಾಂಡ್‌ಗೆ ಬಿಟ್ಟ ವಿಚಾರ. ಹಸ್ತಾಂತರ ಎಂದರೆ ಹಸ್ತಾಂತರ, ಸಚಿವ ಸಂಪುಟ ಮರುರಚನೆ ಎಂದರೆ ಮರುರಚನೆಯಷ್ಟೇ. ಎಲ್ಲ ಹೈಕಮಾಂಡ್‌ಗೆ ಬಿಟ್ಟಿದ್ದು ಎಂದು ಹೇಳಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net