ಔರಾದ್​ನಲ್ಲಿ ಬೃಹತ್​ ಬೈಕ್​ ರ‍್ಯಾಲಿ

ಬಸವ ಜಯಂತಿ ನಿಮಿತ್ತ ಔರಾದ್​ನಲ್ಲಿ ಭಾನುವಾರ ಸಂಜೆ ಭವ್ಯ ಬೈಕ್​ ರ್ಯಾಲಿ ಜರುಗಿತು.  ರ‍್ಯಾಲಿ
ಬಸವ ಜಯಂತಿ ನಿಮಿತ್ತ ಔರಾದ್​ನಲ್ಲಿ ಭಾನುವಾರ ಸಂಜೆ ಭವ್ಯ ಬೈಕ್​ ರ್ಯಾಲಿ ಜರುಗಿತು. ರ‍್ಯಾಲಿ
Published on

ಪ್ರಮುಖ ಮುಖ್ಯಾಂಶಗಳು

  • ವಿಶ್ವಗುರು ಬಸವೇಶ್ವರ ಜಯಂತ್ಯುತ್ಸ
ಔರಾದ್​: ವಿಶ್ವಗುರು ಬಸವಣ್ಣನವರ ಜಯಂತ್ಯುತ್ಸವ ನಿಮಿತ್ತ ಭಾನುವಾರ ಸಂಜೆ ಪಟ್ಟಣದಲ್ಲಿ ಭವ್ಯ ಬೈಕ್​ ರ್ಯಾಲಿ ನಡೆಯಿತು. ಬಸವಣ್ಣನವರ ಆದರ್ಶ ಮತ್ತು ಸಾಮಾಜಿಕ ಸಂದೇಶಗಳನ್ನು ಸಾರುವ ಉದ್ದೇಶದಿಂದ ನಡೆದ ಈ ರ್ಯಾಲಿಯಲ್ಲಿ ನೂರಾರು ಯುವಕರು ಮತ್ತು ಬಸವ ಭಕ್ತರು ಉತ್ಸಾಹದಿಂದ ಭಾಗವಹಿಸಿದ್ದರು.
ಯುವ ಮುಖಂಡ ಸಾಗರ ಪಾಟೀಲ್​ ಕೊಳ್ಳುರ್​ ಮೆರವಣಿಗೆಗೆ ಚಾಲನೆ ನೀಡಿದರು. ಉದ್ಯಮಿ ಪ್ರಕಾಶ ೂಳೆ ಧ್ವಜಾರೋಹಣ ನೆರವೇರಿಸಿದರು. ಅನುಭವ ಮಂಟಪದ ಬಳಿ ಬಸವಣ್ಣನವರ ಭಾವಚಿತ್ರ ಮತ್ತು ಧ್ವಜದ ಅಲಂಕಾರಗಳೊಂದಿಗೆ ನೂರಾರು ಬೈಕ್​ ಸವಾರರು ರ್ಯಾಲಿ ಆರಂಭಿಸಿ ಡಾ. ಚನ್ನಬಸವ ಪಟ್ಟದ್ದೇವರು ವೃತ್ತ, ಕನ್ನಡಾಂಬೆ ವೃತ್ತದ ಮೂಲಕ ತಾಪಂ ಕಚೇರಿ, ಬಸ್​ ನಿಲ್ದಾಣ, ಬಸವೇಶ್ವರ ವೃತ್ತ, ಅಮರೇಶ್ವರ ದೇವಸ್ಥಾನ, ಹನುಮಾನ ದೇವಸ್ಥಾನ, ದೇಶಮುಖ ಗಲ್ಲಿ, ಬುಟ್ಟೆ ಬಡಾವಣೆ, ಖೂಬಾ ಕಾಲನಿ, ಗೌಂಡಿ ಗಲ್ಲಿ, ಶಟಕಾರ ಗಲ್ಲಿ, ಸಾರ್ವಜನಿಕ ಆಸ್ಪತ್ರೆ, ಅಗ್ನಿ ಬಸವಣ್ಣ, ಸಾರಿಗೆ ಟಕ ಹಾಗೂ ಪುರಸಭೆ ಸೇರಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು.
ತಾಪಂ ಸಹಾಯಕ ನಿರ್ದೇಶಕ ಶಿವಕುಮಾರ ಘಾಟೆ, ಪ್ರಮುಖರಾದ ಬಂಡೆಪ್ಪ ಕಂಟೆ, ರವೀಂದ್ರ ಮೀಸೆ, ಗುಂಡಯ್ಯ ಸ್ವಾಮಿ, ರುನಾಥ ಪಾಟೀಲ್​, ಮಲ್ಲಿಕಾರ್ಜುನ ಹಿಪ್ಪಳಗಾಂವೆ, ಕಲ್ಲಪ್ಪ ದೇಶಮುಖ, ಡಾ.ವೈಜಿನಾಥ ಬುಟ್ಟೆ, ಶರಣಪ್ಪ ಪಾಟೀಲ್​, ಶರಣಪ್ಪ ನಾಗಲಗಿದ್ದೆ, ಜಗನ್ನಾಥ ಮೂಲಗೆ, ಮಲ್ಲಿಕಾರ್ಜುನ ಟಂಕಸಾಲೆ, ಚಂದ್ರಕಾಂತ ೂಳೆ, ಡಾ.ಧನರಾಜ ರಾಗಾ, ಶ್ರೀನಿವಾಸ ಖೂಬಾ, ಬಸವರಾಜ ಹಳ್ಳೆ, ರಾಜಕುಮಾರ ನಾಯ್ಕ್​, ಚೇತನ ಕಪ್ಪೇಕೆರೆ, ಕಿರಣ ಉಪ್ಪೆ, ಅಶೋಕ ಶೆಂಬೆಳ್ಳಿ, ಶಿವಕುಮಾರ ಕಾಂಬಳೆ, ವಿರೇಶ ಅಲಮಾಜೆ, ಬಸವರಾಜ ಶೆಟಕಾರ, ಅಶೋಕ ಅಲಮಾಜೆ, ಬಸವರಾಜ ಚೌಕಂಪಳ್ಳೆ, ಚಂದ್ರಕಾಂತ ಜೋಶಿ, ಬಸವರಾಜ ಮಾನೂರೆ, ಸಂದೀಪ ಪಾಟೀಲ್​,ಆನಂದ ದ್ಯಾಡೆ, ಶಂಕು ನಿಶ್ಪತೆ, ಸಾಗರ ಚಿದ್ರೆ, ಮಹಾದೇವ ಶಿಂದೆ, ಅನಿಲ ಮೇತ್ರೆ ಬಸವ ಭಕ್ತರು ಪಾಲ್ಗೊಂಡಿದ್ದರು. ಪಿಎಸ್​ಐ ವಾಸೀಮ್​ ಪಟೇಲ್​ ನೇತೃತ್ವದಲ್ಲಿ ಸೂಕ್ತ ಭದ್ರತ್ರೆ ಒದಗಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net