ತಾಲೂಕಾ ಕೇಂದ್ರಗಳಲ್ಲೂ ಸರ್ಕಾರಿ ನೌಕರರಿಗೆ ನಿವೇಶನ: ಹೊನ್ನಳ್ಳಿ

ಕಲಬುರಗಿ: ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರಿ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದ ಅಧ್ಯಕ್ಷ ನಾಗಪ್ಪ ಕೆ. ಹೊನ್ನಳ್ಳಿ ಮತಯಾಚಿಸಿದರು.
ಕಲಬುರಗಿ: ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರಿ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದ ಅಧ್ಯಕ್ಷ ನಾಗಪ್ಪ ಕೆ. ಹೊನ್ನಳ್ಳಿ ಮತಯಾಚಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಆಳಂದ ರಸ್ತೆಯಲ್ಲೂ 22 ಎಕರೆ ಖರೀದಿಸಿ ಸದಸ್ಯರಿಗೆ ಹೆಚ್ಚಿನ ಅವಕಾಶ
ಕಲಬುರಗಿ: ಸದಸ್ಯರಿಗೆಲ್ಲರಿಗೂ ನಿವೇಶನ ದೊರಕಿಸಿ ಕೊಡುವ ನಿಟ್ಟಿನಲ್ಲಿ ಕುಸನೂರ ಸರ್ವೆ ನಂಬರದಲ್ಲಿ 25 ಎಕರೆ ಖರೀದಿ ಮಾಡಲಾಗಿ ನಿವೇಶನ ಹಂಚಿಕೆ ಮಾಡಲಾಗುತ್ತಿರುವುದರ ಜತೆಗೆ ಮುಂದಿನ ದಿನಗಳಲ್ಲಿ ನಗರದ ಆಳಂದ ರಸ್ತೆಯಲ್ಲೂ 22 ಎಕರೆ ಹಾಗೂ ತಾಲೂಕಾ ಕೇಂದ್ರಗಳಲ್ಲೂ 5ರಿಂದ 10 ಎಕರೆ ಖರೀದಿಸಿ ನಿವೇಶನ ಹಂಚಲು ಮುಂದಾಗಲಾಗಿದೆ ಎಂದು ರಾಜ್ಯ ಸರ್ಕಾರಿ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದ ಅಧ್ಯಕ್ಷ ನಾಗಪ್ಪ ಕೆ. ಹೊನ್ನಳ್ಳಿ ತಿಳಿಸಿದರು.
ಮಾ. 22ರ ರವಿವಾರದಂದು ನಡೆಯುವ 20262031ನೇ ಸಾಲಿನ ಗೃಹ ನಿರ್ಮಾಣ ಸಂಘದ ಚುನಾವಣೆಯಲ್ಲಿ ಫೆನಲ್ ಅಭ್ಯರ್ಥಿಗಳಿಗೆ ಸದಸ್ಯರ ಮನೆಗೆ ತೆರಳಿ ಮತಯಾಚಿಸಿದ ಅವರು, ತಮ್ಮ ಈ ಹಿಂದಿನ ಎರಡು ಅವಧಿಯಲ್ಲಿ ಕೆಲಸ ಎಷ್ಟು ಪರಿಣಾಮಕಾರಿಯಾಗಿದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ಇದೊಂದು ಆಶೀರ್ವದಿಸಿದರೆ ಮೂರು ಪಟ್ಟು ಜಾಸ್ತಿ ಕೆಲಸ ಮಾಡಿಸಿ ತೋರಿಸುವೆ ಎಂದು ಹೇಳಿದರು.
ಕುಸನೂರು ಬಡಾವಣೆ ನಿರೀಕ್ಷೆಯಂತೆ ಅಭಿವೃದ್ಧಿಯಾಗಿಲ್ಲವಾದರೂ ಎಲ್ಲ ಕ್ರಮಬದ್ದಗೊಳಿಸಲಾಗಿದೆ. ಇನ್ಮುಂದೆ ಅಭಿವೃದ್ದಿ ಕಾರ್ಯಗಳು ಶರವೇಗದಲ್ಲಿ ನಡೆಯಲಿವೆ. ಪರಿವರ್ತನಾ ಪೆನಲ್ ದವರು ಈಗ ಷಡ್ಯಂತ್ರ ರೂಪಿಸಿದ್ದು, ಅವರ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಸರ್ಕಾರಿ ನೌಕರರ ಸಂಘ ಸರಿಯಾಗಿ ಮುನ್ನೆಡೆಸದವರು ಇಲ್ಲಿ ಕುತಂತ್ರ ನಡೆಸುತ್ತಿದ್ದಾರೆ. ಕುಸನೂರ ಬಡಾವಣೆಯಲ್ಲಿ ಅಭಿವೃದ್ಧಿ ಕಾರ್ಯಗಳು ಸಕಾಲಕ್ಕೆ ಆಗದಿರುವುದಕ್ಕೆ ಕಾರಣರಾದವರೇ ಎದುರಾಳಿ ಫೆನಲ್ ರಚಿಸಿಕೊಂಡು ಚುನಾವಣಾ ಅಖಾಡಕ್ಕೆ ಇಳಿದಿದ್ದಾರೆ. ಇದನ್ನು ಸರ್ವ ಮತದಾರರು ಅರಿತ್ತಿದ್ದಾರೆ. ಎಲ್ಲವನ್ನು ಅವಲೋಕಿಸಿ ತಮ್ಮ ಹಕ್ಕು ಚಲಾಯಿಸಲಿದ್ದಾರೆ ಎಂದರು.
ತಮಗೆ ಎಲ್ಲ ಇಲಾಖೆಗಳ ಸದಸ್ಯ ನೌಕರರು ಬೆಂಬಲ ವ್ಯಕ್ತಪಡಿಸಿದ್ದು, ಎಸ್ಸಿ ಎಸ್ಟಿ ನೌಕರರ ಸಂಘ, ದೈಹಿಕ ಶಿಕ್ಷಕರ ಸಂಘ, ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ, ಶಿಕ್ಷಣ, ಆರೋಗ್ಯ ಇಲಾಖೆ ಸೇರಿ ಇತರ ಬಹುತೇಕ ಎಲ್ಲ ಇಲಾಖೆಗಳು, ಪ್ರಾಥಮಿಕ, ಪ್ರೌಢ ಶಾಲಾ ಶಿಕ್ಷಕರ ಸಂಘ ಹಲವಾರು ಸಂಘಟನೆಗಳು ತನ್ನ ಬೆಂಬಲ ವ್ಯಕ್ತಪಡಿಸಿದ್ದಲ್ಲದೇ ಸರ್ಕಾರಿ ನೌಕರರ ಸಂಘದ ಹಲವಾರು ಪದಾಧಿಕಾರಿಗಳು ಸಹ ತಮ್ಮ ಗೆಲುವಿಗೆ ಕೈ ಜೋಡಿಸುತ್ತಿದ್ದಾರೆ ಎಂದು ನಾಗಪ್ಪ ಹೊನ್ನಳ್ಳಿ ಹೇಳಿದರು.
ಪ್ರಮುಖರಾದ ಎಂ. ಬಿ. ಪಾಟೀಲ್, ಸಿ.ಎನ್ . ಬಾಬಳಗಾಂವ, ಎಸ್ ಪಿ ಸುಳ್ಳದ, ಚನ್ನವೀರಯ್ಯ ಸ್ವಾಮಿ, ಜಿ.ಡಿ. ನಂದಿಕೂರ, ರಿಯಾಜ್ ಅಹ್ಮದ ಸೈಯದ್, ವಿಶ್ವನಾಥ ಕಟ್ಟಿಮನಿ, ಸಿದ್ದಣ್ಣ ಪೂಜಾರಿ, ಜಯಶ್ರೀ ರವಿ ಪಾಟೀಲ್, ಪ್ರಮೀಳಾ ಪಾಟೀಲ್, ನಿಜಲಿಂಗಪ್ಪ ಕೊರಳ್ಳಿ, ಎ.ಡಿ ಪಾಷಾ, ಶಿವಲಿಂಗಪ್ಪ ಗೌಳಿ, ಪರಮೇಶ್ವರ ವಾಗ್ದರ್ಗಿ, ಸಿದ್ದಲಿಂಗ ಕುಲಕರ್ಣಿ, ಎಂ. ಗಜೇಂದ್ರ ಸೇರಿದಂತೆ ಮುಂತಾದವರಿದ್ದರು.
ಕಲಬುರಗಿ: ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರಿ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದ ಅಧ್ಯಕ್ಷ ನಾಗಪ್ಪ ಕೆ. ಹೊನ್ನಳ್ಳಿ ಮತಯಾಚಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net