ಕಣ್ಣೂರು ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ವಾತ್ಸಲ್ಯ ಯೋಜನೆಯಡಿ ನಿರ್ಮಿಸಿದ ಮನೆಯನ್ನು ಕಮಲಮ್ಮ ಅವರಿಗೆ ಹಸ್ತಾಂತರಿಸಲಾಯಿತು. ಪ್ರವೀಣ್‌ಕುಮಾರ್, ಬಸವರಾಜಪ್ಪ, ಪ್ರದೀಪ್, ಭಾನುಪ್ರಿಯ ಇತರರಿದ್ದರು.
Published on:
Copied
Follow Us
ಹನೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ವಾತ್ಸಲ್ಯ ಮನೆ ಯೋಜನೆಯು ನಿರ್ಗತಿಕರಿಗೆ ಆಸರೆಯಾಗಿದೆ ಎಂದು ಯೋಜನೆಯ ತಾಲೂಕು ಯೋಜನಾಧಿಕಾರಿ ಪ್ರವೀಣ್‌ಕುಮಾರ್ ತಿಳಿಸಿದರು.
ತಾಲೂಕಿನ ಕಣ್ಣೂರು ಗ್ರಾಮದಲ್ಲಿ ನಿರ್ಗತಿಕರಾದ ಕಮಲಮ್ಮ ಎಂಬುವರಿಗೆ ವಾತ್ಸಲ್ಯ ಯೋಜನೆಯಡಿ ನಿರ್ಮಿಸಿದ ಮನೆಯನ್ನು ಸೋಮವಾರ ಹಸ್ತಾಂತರಿ ಮಾತನಾಡಿ, ಗ್ರಾಮದ ವೃದ್ಧೆ ಕಮಲಮ್ಮ ಎಂಬುವವರು ನಿರಾಶ್ರಿತರಾಗಿದ್ದು, ದೇಗುಲದಲ್ಲಿ ಆಶ್ರಯ ಪಡೆಯುತ್ತಿದ್ದರು. ಈ ಬಗ್ಗೆ ಯೋಜನೆಯ ಸೇವಾ ಪ್ರತಿನಿಧಿಗಳು ಗಮನಕ್ಕೆ ತಂದಿದ್ದರು. ಈ ವೇಳೆ ಮನೆ ನಿರ್ಮಿಸಿ ಕೊಡುವುದಾಗಿ ಭರವಸೆ ನೀಡಲಾಗಿತ್ತು. ಜತೆಗೆ ಇವರ ಜೀವನ ನಿರ್ವಹಣೆಗೆ ಅನುಕೂಲವಾಗುವಂತೆ ಕಳೆದ ಒಂದು ವರ್ಷದಿಂದ ಮಾಸಾಶನವನ್ನು ನೀಡಲಾಗುತ್ತಿದೆ. ಇದೀಗ ವಾತ್ಸಲ್ಯ ಯೋಜನೆಯಡಿ ಮನೆಯನ್ನು ನಿರ್ಮಿಸಿ ಕೊಡುವುದರ ಮೂಲಕ ವೃದ್ಧೆಗೆ ಅನುಕೂಲ ಕಲ್ಪಿಸಿದೆ ಎಂದು ತಿಳಿಸಿದರು.
ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ನಿರ್ದೇಶಕ ಬಸವರಾಜಪ್ಪ ಮಾತನಾಡಿ, ಶ್ರೀ ಕ್ಷೇತ್ರ ಗ್ರಾಮಾಭಿವೃದ್ಧಿ ಸಂಸ್ಥೆಯು ಗ್ರಾಮದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿದೆ. ದೇಗುಲಗಳ ಅಭಿವೃದ್ಧಿ, ಕೆರೆ ಅಭಿವೃದ್ಧಿ, ಹಾಲು ಉತ್ಪಾದಕರ ಸಂಘಗಳಿಗೆ ಸಹಕಾರ, ಸ್ವಚ್ಛತಾ ಕಾರ್ಯ ಸೇರಿದಂತೆ ಇನ್ನಿತರ ಸಾಮಾಜಿಕ ಸೇವಾ ಕಾರ್ಯವನ್ನು ಕೈಗೊಳ್ಳುತ್ತಾ ಬಂದಿದೆ. ಇದೀಗ ವಾತ್ಸಲ್ಯ ಯೋಜನೆಯಡಿ ನಿರ್ಗತಿಕರು, ವೃದ್ಧರು ಹಾಗೂ ಬಡ ಕುಟುಂಬಕ್ಕೆ ಮನೆ ನಿರ್ಮಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದರು.
ಯೋಜನೆಯ ಗ್ರಾಮ ಒಕ್ಕೂಟದ ಅಧ್ಯಕ್ಷ ಜಗದೀಶ್, ಸದಸ್ಯ ಪ್ರಭುಸ್ವಾಮಿ, ವಲಯ ಮೇಲ್ವಿಚಾರಕ ಪ್ರದೀಪ್, ಸಮನ್ವಯಾಧಿಕಾರಿ ಭಾನುಪ್ರಿಯ, ಸೇವಾ ಪ್ರತಿನಿಧಿಗಳಾದ ಕಲಾವತಿ, ಸುವಿದಾ, ನಂದಿನಿ, ಮುಖಂಡರಾದ ನಾಗೇಂದ್ರಸ್ವಾಮಿ, ಯೋಗೇಶ್, ಮಾದೇಶ್, ವಸಂತಮ್ಮ, ಚೈತ್ರಾ, ರತ್ನಮ್ಮ ಹಾಗೂ ಇನ್ನಿತರರಿದ್ದರು.