ಅಶ್ರಮ ವೃತ್ತದಿಂದ ದೊಡ್ಡಗಣಪತಿ ದೇವಸ್ಥಾನವರೆಗೆ ರಸ್ತೆ ಎರಡು ಬದಿಯಲ್ಲಿ ಅಂದಾಜು 2 ಸಾವಿರಗಿಂತ ಹೆಚ್ಚು ಕಡಲೆಕಾಯಿ ಅಂಗಡಿಗಳಿವೆ. ಸಾಮ್ರಾಟ್, ಗಡಂಗ್, ಬಾದಾಮಿ ಸೇರಿ ವಿವಿಧ ಬಗೆಯ ತರಹೇವಾರಿ ಕಡಲೆ ಕಾಯಿಗಳಿವೆ. ರುಚಿ,ಗಾತ್ರದಲ್ಲಿ ಒಂದಕ್ಕಿಂತ ಒಂದು ಭಿನ್ನವಾಗಿದೆ. ಕೆಲವು ಮೂರು ಬೀಜದ ಕಾಯಿಗಳಾದರೆ, ಮತ್ತೆ ಕೆಲವು ಎರಡು, ಮತ್ತೆ ಕೆಲವು ಕಾಯಿಗಳು ಒಂದು ಬೀಜದೊಂದಿಗೆ ಕಡಲೆ ಕಾಯಿ ಪ್ರಿಯರನ್ನು ಸೆಳೆಯಲಿವೆ. ಕೆಂಪು ಮಣ್ಣು, ಕಪ್ಪು ಮಣ್ಣಿನಲ್ಲಿ ಬೆಳೆದ ಕಡಲೆ ಕಾಯಿಗಳೂ ಜನರನ್ನು ಸೆಳೆಯುತ್ತಿವೆ. ತಮಿಳುನಾಡು, ಆಂಧ್ರ ಪ್ರದೇಶ ಚಿಂತಾಮಣಿ, ಶ್ರೀನಿವಾಸಪುರ, ಕೋಲಾರ, ಚಿಕ್ಕಬಳ್ಳಾಪುರ, ಮಾಗಡಿ, ಮಂಡ್ಯ, ಮೈಸೂರು, ತುಮಕೂರು ಹಾಗೂ ಕುಣಿಗಲ್ ಸೇರಿ ರಾಜ್ಯದ ಹಲವು ಭಾಗಗಳಿಂದ ಕಡಲೆಕಾಯಿಗಳಿವೆ. ಅಲ್ಲದೆ, ಕಡ್ಲೆಪುರಿ, ಬಜ್ಜಿ, ಆಟಿಕೆಗಳು, ಗೃಹೋಪಯೋಗಿ ವಸ್ತುಗಳು, ಪೀಪಿಗಳ ಮಳಿಗೆಗಳಿವೆ.